ಅಮರಾವತಿ:ಕಳೆದ ಕೆಲ ದಿನಗಳಿಂದ ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಎಡಬಿಡದೆ ಮಳೆ ಸುರಿಯುತ್ತಿದ್ದು, ಮಳೆ ಸಂಬಂಧಿತ ಅವಘಡಗಳಲ್ಲಿ 35ಕ್ಕೂ ಹೆಚ್ಚು ಮಂದಿ ಪ್ರಾಣ ಕೆಳದುಕೊಂಡಿದ್ದಾರೆ. ನೆರೆಗೆ ಸಂಬಂಧಿಸಿದಂತೆ ರಾಜಕಾರಣಿಗಳು ಹಾಗೂ ಸೆಲೆಬ್ರಿಟಿಗಳು ಜನರ ಕಷ್ಟಕ್ಕೆ ಸ್ಪಂದಿಸುತ್ತಿದ್ದು, ಸಾಗರೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.
ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಪ್ರಾವಹ ಪೀಡಿತ ಸ್ಥಳಗಳಿಗೆ ಭೇಟಿ ನೀಡುತ್ತಿದ್ದು, ಅಧಿಕಾರಿಗಳಿಗೆ ತ್ವರಿತ ಕ್ರಮ ಕೈಗೊಳ್ಳುವಂತೆ ಸೂಚಿಸುತ್ತಿದ್ದಾರೆ. ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುತ್ತಿರುವಾಗ ರೈಲಿಗೆ ಸಿಲುಕುವುದರಿಂದ ಸ್ವಲ್ಪದರಲ್ಲೇ ಬಚಾವ್‌ ಆಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.
VIDEO | Andhra Pradesh CM N Chandrababu Naidu (@ncbn) had a narrow escape on Thursday evening when a train went past him as he was walking on the Budameru railway bridge in#Vijayawadato take stock of the flood situation.#VijayawadaFloods#AndhraFlood(Source: Third Party)pic.twitter.com/tviE8mW5jk
ಇದನ್ನೂ ಓದಿ:ಶಿಕ್ಷೆಯಾದರೂ ಒಪ್ಪಿಕೊಂಡಿರುವ ಸಿನಿಮಾಗಳನ್ನು ಮುಗಿಸಿಕೊಡಲು ದರ್ಶನ್​ಗೆ ಇರುವುದು ಇದೊಂದೇ ದಾರಿ
ಮಧುರಾನಗರದ ರೈಲ್ವೆ ಸೇತುವೆ ಮೇಲೆ ಈ ಘಟನೆ ನಡೆದಿದ್ದು, ಪ್ರವಾಹದ ಕುರಿತು ಸಿಎಂ ರೈಲ್ವೆ ಸೇತುವೆ ಮೇಲೆ ಅಧಿಕಾರಿಗಳ ಜತೆ ಮಾತುಕತೆ ನಡೆಸುತ್ತಿದ್ದರು. ರೈಲು ಸಂಚಾರಕ್ಕೆಂದು ವಿನ್ಯಾಸಗೊಳಿಸಲಾದ ಸೇತುವೆಯಲ್ಲಿ ಪಾದಚಾರಿಗಳಿಗೆ ಕಿರಿದಾದ ಸ್ಥಳ ಬಿಟ್ಟು ದೊಡ್ಡ ಸ್ಥಳಾವಕಾಶವಿಲ್ಲ. ಆಗ ನಾಯ್ಡು ಹಳಿ ಮಧ್ಯದಲ್ಲೇ ನಡೆದು ಹೋಗುತ್ತಿದ್ದಾಗ, ಸಡನ್​ ಆಗಿ ರೈಲು ಬಂದಿದೆ. ತ್ವರಿತವಾಗಿ ಯೋಚಿಸಿದ ಭದ್ರತಾ ಸಿಬ್ಬಂದಿ ತಕ್ಷಣವೇ ನಾಯ್ಡು ಅವರನ್ನು ಟ್ರ್ಯಾಕ್‌ನ ಬದಿಗೆ ಎಳೆದು ಕಿರಿದಾದ ಪಾದಚಾರಿ ಮಾರ್ಗಕ್ಕೆ ತಂದಿದ್ದಾರೆ. ಕೆಲವೇ ಇಂಚಿನಲ್ಲಿ ನಾಯ್ಡು ಪಾರಾಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.
ಕಳೆದ ಐದು ದಿನಗಳಿಂದ ಚಂದ್ರಬಾಬು ನಾಯ್ಡು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದು, ಹಲವು ಭಾರೀ ಅವರ ಭದ್ರತಾ ಸಿಬ್ಬಂದಿ ನಿಯಮಗಳನ್ನು ಉಲ್ಲಂಘಿಸಿರುವುದು ಕಂಡು ಬಂದಿದೆ. ಈ ಕುರಿತಾದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಭದ್ರತಾ ಸಿಬ್ಬಂದಿ ವಿರುದ್ಧ ಜನ ಕಿಡಿಕಾರಿದ್ದಾರೆ.
Video of@AndhraPradeshCM@ncbnon a railway bridge inspecting flood repair works when a train passed by on the tracks; To his credit, quite impressive that at his age & with his seniority,#ChandrababuNaiduis so agile & goes everywhere to physically monitor situation & progresspic.twitter.com/q9Gbn7toSA
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:9 + two =
Remember me
