ಗೌಹಾಟಿ :ಟೋಕಿಯೋ ಒಲಂಪಿಕ್ಸ್​ನಲ್ಲಿ ಬಾಕ್ಸಿಂಗ್​ ವುಮೆನ್ಸ್​ ವೆಲ್ಟರ್​ವೈಟ್​ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವವರು ಅಸ್ಸಾಂನ ಲವ್ಲೀನಾ ಬೊರ್ಗೊಹೈನ್. ಇವರಿಗೆ ಬೆಂಬಲ ನೀಡುವುದಕ್ಕಾಗಿ ರಾಜ್ಯದ ಸಿಎಂ ಹಿಮಂತ ಬಿಸ್ವ ಸರ್ಮ ನೇತೃತ್ವದಲ್ಲಿ ಗೌಹಾಟಿಯಲ್ಲಿಂದು ಸೈಕಲ್ ಜಾಥಾ ನಡೆಯುತ್ತಿದೆ.
“ರಾಜ್ಯದ ಮಗಳನ್ನು ಬೆಂಬಲಿಸಲು ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳೆರಡರ ನಾಯಕರೂ ಈ 7 ಕಿಲೋಮೀಟರ್​ ಸೈಕಲ್ ರಾಲಿ ನಡೆಸಲು ಒಂದಾಗಿದ್ದಾರೆ” ಎಂದು ಸಿಎಂ ಸರ್ಮ ಹೇಳಿದ್ದಾರೆ. ಲವ್ಲೀನಾ ಅವರ ಚಿತ್ರವುಳ್ಳ ಅಂಗಿಗಳನ್ನು ತೊಟ್ಟು ರಾಜಕೀಯ ಮುಖಂಡರು ಸೈಕಲ್​ ಸವಾರಿ ನಡೆಸಿದ್ದಾರೆ.
#WATCH| Assam CM Himanta Biswa Sarma participates in a cycle rally to support boxer Lovlina Borgohain who will be representing India at the upcoming Tokyo Olympics. "Both ruling party & Opposition have come together for this 7 km cycle rally to support their daughter," he sayspic.twitter.com/aJBgzDDgDz
— ANI (@ANI)July 21, 2021

ಹವ್ಯಾಸಿ ಬಾಕ್ಸರ್​ ಆಗಿರುವ 23 ವರ್ಷ ವಯಸ್ಸಿನ ಲವ್ಲೀನಾ ಅವರು ಅಸ್ಸಾಂನ ಗೊಲಾಘಟ್​ ಮೂಲದವರು. ಬಾಕ್ಸಿಂಗ್​ನಲ್ಲಿ ಉನ್ನತ ಸಾಧನೆಗಾಗಿ ಅವರಿಗೆ ಪ್ರತಿಷ್ಠಿತ ಅರ್ಜನ ಪ್ರಶಸ್ತಿ ಸಂದಿದೆ. 2018 ಮತ್ತು 2019 ನೇ ಸಾಲುಗಳ ಎಐಬಿಎ ವುಮೆನ್ಸ್​ ವರ್ಲ್ಡ್​ ಬಾಕ್ಸಿಂಗ್​ ಚ್ಯಾಂಪಿನ್​ಶಿಪ್ಸ್​ನಲ್ಲಿ ಅವರು ಕಂಚಿನ ಪದಕ ಗೆದ್ದಿದ್ದಾರೆ.(ಏಜೆನ್ಸೀಸ್)
ಟೋಕಿಯೋ ಒಲಂಪಿಕ್ಸ್: ಕುದುರೆ ಸವಾರಿಯ ವಿಶಿಷ್ಟ ಸ್ಪರ್ಧೆಗೆ ಬೆಂಗಳೂರಿಗ

ಚಿನ್ನವನ್ನು ಗುದದ್ವಾರದಲ್ಲಿ ಮುಚ್ಚಿಟ್ಟುಕೊಂಡು ತಂದ ಪ್ರಯಾಣಿಕ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + nine =
Remember me
