ಹೈದರಾಬಾದ್​ :ವಾಹನ ಸಂಚಾರ ಹೆಚ್ಚಿರುವ ಕೇಬಲ್​​ ಬ್ರಿಡ್ಜ್​ನ ನಡುವಿನಲ್ಲಿ ವ್ಯಕ್ತಿಯೊಬ್ಬ ಡ್ಯಾನ್ಸ್ ಮಾಡುತ್ತಾ ವಿಡಿಯೋ ತೆಗೆಸಿಕೊಂಡಿರುವ ಪ್ರಸಂಗ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ದೃಶ್ಯದ ವಿಡಿಯೋ ತುಣುಕನ್ನು ಟ್ವಿಟರ್​ನಲ್ಲಿ ಶೇರ್ ಮಾಡಿರುವ ತೆಲಂಗಾಣದ ಸೈಬರಾಬಾದ್​ ಸಂಚಾರಿ ಪೊಲೀಸರು, ರಸ್ತೆಯಲ್ಲಿ ಈ ರೀತಿ ಸಾಹಸಗಳನ್ನು ಮಾಡಲು ಪ್ರಯತ್ನಿಸಬೇಡಿ ಎಂದು ಎಚ್ಚರಿಸಿದ್ದಾರೆ.
సరదా కోసం ప్రాణాలకు తెగించి రోడ్డు పై విన్యాసాలు, డాన్స్ లు చేయకండి.#RoadSafety#RoadSafetyCyberabadpic.twitter.com/2adcntp0zR
— CYBERABAD TRAFFIC POLICE సైబరాబాద్ ట్రాఫిక్ పోలీస్ (@CYBTRAFFIC)August 5, 2021

ವಿಡಿಯೋದಲ್ಲಿ – ಕಾರುಗಳು ವೇಗವಾಗಿ ಹಾದುಹೋಗುತ್ತಿರುವ ಹೈದರಾಬಾದಿನ ದುರ್ಗಮ್​ ಚೆರುವು ಕೇಬಲ್​ ಸೇತುವೆಯನ್ನು ಪುರುಷನೊಬ್ಬ ದಾಟುತ್ತಾನೆ. ನಂತರ ರಸ್ತೆ ಮಧ್ಯಕ್ಕೆ ಹೋಗಿನಿಂತು ಡ್ಯಾನ್ಸ್ ಮಾಡುತ್ತಾನೆ. ರಸ್ತೆಬದಿಯಲ್ಲಿ ನಿಂತು ವಿಡಿಯೋ ಮಾಡುತ್ತಿರುವ ತನ್ನ ಜೋಡಿದಾರನಿಗೆ ಪೋಸ್ ಕೊಡುತ್ತಾನೆ.
“ಮೋಜಿಗಾಗಿ, ರಸ್ತೆಯ ಮೇಲೆ ಸ್ಟಂಟ್​ ಮತ್ತು ಡ್ಯಾನ್ಸ್​​​ ಮಾಡಬೇಡಿ. ಇದು ಪ್ರಾಣಕ್ಕೆ ಅಪಾಯಕಾರಿ” ಎಂದು ಎಚ್ಚರಿಕೆ ನೀಡಿ ಶೇರ್ ಮಾಡಲಾಗಿದೆ.(ಏಜೆನ್ಸೀಸ್)
ಕರೊನಾ ಹೆಚ್ಚಿರುವ ಗಡಿ ಜಿಲ್ಲೆಗಳಿಗೆ ಸಿಎಂ ಬೊಮ್ಮಾಯಿ ಭೇಟಿ

ಕರುಳು ಹಿಂಡುವ ದುರಂತ: ಸಿಲಿಂಡರ್​ ಬೆಂಕಿಗೆ ಬಲಿಯಾದ ಹೆಣ್ಣುಮಕ್ಕಳು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − one =
Remember me
