ಕೊಲ್ಕತ :ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರ ಟಿಎಂಸಿ ಪಕ್ಷವು ಬಿಜೆಪಿ ವಿರುದ್ಧ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಲು ಬಳಸಿದ್ದ ‘ಖೇಲಾ ಹೋಬೆ’ ಘೋಷವಾಕ್ಯವು, ಇದೀಗ ಅಲ್ಲಿನ ರಾಜ್ಯ ಸರ್ಕಾರದ ಜನಪ್ರಿಯ ಯುವಜನ ಯೋಜನೆಯಾಗಿ ಮಾರ್ಪಟ್ಟಿದೆ. ಈ ಯೋಜನೆಯಡಿ, ರಾಜ್ಯ ಕ್ರೀಡಾ ಮತ್ತು ಯುವ ವ್ಯವಹಾರಗಳ ಇಲಾಖೆಯು ಒಂದು ಲಕ್ಷಕ್ಕೂ ಹೆಚ್ಚು ಫುಟ್‌ಬಾಲ್‌ಗಳನ್ನು ವಿವಿಧ ಕ್ರೀಡಾ ಕ್ಲಬ್‌ಗಳಿಗೆ ಹಸ್ತಾಂತರಿಸುತ್ತಿದೆ.
ಇಂದು ಕೊಲ್ಕತದ ನೇತಾಜಿ ಒಳಾಂಗಣ ಕ್ರೀಡಾಂಗಣದಲ್ಲಿ ಈ ಖೇಲಾ ಹೋಬೆ ಯೋಜನೆಯನ್ನು ಸಿಎಂ ಮಮತಾ ಬ್ಯಾನರ್ಜಿ ಉದ್ಘಾಟಿಸಿದರು. ಬ್ಯಾನರ್ಜಿ ಅವರು ಫುಟ್​ಬಾಲ್​ಅನ್ನು ಎಸೆದಾಡುತ್ತಾ, ಕಷ್ಟಪಟ್ಟು ಹಿಡಿಯುವುದು ವಿಡಿಯೋ ತುಣುಕಿನಲ್ಲಿ ಸೆರೆಯಾಗಿದೆ. ಎಎನ್​ಐ ಸುದ್ದಿ ಸಂಸ್ಥೆ ಶೇರ್​ ಮಾಡಿರುವ ಈ ವಿಡಿಯೋದಲ್ಲಿ ಅವರು ಸಭಿಕರೆಡೆಗೆ ಹಲವು ಫುಟ್​ಬಾಲ್​ಗಳನ್ನು ಎಸೆಯುವುದನ್ನು ಕೂಡ ನೋಡಬಹುದು.
#WATCH| West Bengal CM Mamata Banerjee dribbling a football during launch of “Khela Hobe” program at Netaji Indoor Stadium,Kolkata. She says, " Believe it or not, "Khela Hobe" has become very popular. The slogan was raised in Parliament too, soon it'll be popular across India."pic.twitter.com/xDZYGtQKAD
— ANI (@ANI)August 2, 2021

ಖೇಲಾ ಹೋಬೆ ಕಾರ್ಯಕ್ರಮದಡಿ ನೋಂದಾಯಿತ ಕ್ಲಬ್‌ಗಳಿಗೆ ಜಾಯ್ (ಸ್ಟ್ರೈಕರ್) ಬ್ರಾಂಡ್‌ನ ಫುಟ್‌ಬಾಲ್ ನೀಡಲಾಗುವುದು. ಯುವಕರು ಮತ್ತು ವಿದ್ಯಾರ್ಥಿಗಳನ್ನು ಫುಟ್‌ಬಾಲ್ ಆಡಲು ಪ್ರೋತ್ಸಾಹಿಸಲು ಮತ್ತು ಆ ಮೂಲಕ ರಾಜ್ಯದಲ್ಲಿ ಕ್ರೀಡಾ ಚಟುವಟಿಕೆಗಳನ್ನು ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ಈ ಯೋಜನೆ ರೂಪಿಸಿದೆ ಎನ್ನಲಾಗಿದೆ.(ಏಜೆನ್ಸೀಸ್)
ಭಾರತ ಹಾಕಿ ತಂಡವನ್ನು ಅಭಿನಂದಿಸಿದ ಆಸ್ಟ್ರೇಲಿಯಾ ಹೈಕಮಿಷನರ್​

‘ಸತ್ಯಮೇವ ಜಯತೇ’! ಪತಿಯ ಬಂಧನದ ನಂತರ ಅಧಿಕೃತ ಹೇಳಿಕೆ ನೀಡಿದ ಶಿಲ್ಪಾ ಶೆಟ್ಟಿ – ಏನೆಂದರು?!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × three =
Remember me
