ನವದೆಹಲಿ:ಮಳೆಗಾಲ ಆರಂಭವಾಗಿದ್ದರೂ ಬಿಸಿಲಿನ ತಾಪ ಮಾತ್ರ ಇನ್ನು ಕಡಿಮೆಯಾಗಿಲ್ಲ. ಅದರಲ್ಲೂ ಉತ್ತರ ಭಾರತದಲ್ಲಂತೂ ರಣಬಿಸಿಲು ಬಡಿಯುತ್ತಿದೆ. ಎಲ್ಲಿ ನೋಡಿದರೂ ವಿಪರೀತ ಬಿಸಿಲು ಉರಿಯುತ್ತಿದೆ. ಮೇಲಾಗಿ ಈ ವರ್ಷ ಅತಿ ಹೆಚ್ಚು ತಾಪಮಾನದೊಂದಿಗೆ ಭಾನು ಹಿಂದೆಂದೂ ಕಾಣದಷ್ಟು ಸುಡುತ್ತಿದೆ. ಬಿಸಿಲು ಬೆಂಕಿಯಂತೆ ಉರಿಯುತ್ತಿರುವುದರಿಂದ ಜನರು ಮನೆಯಿಂದ ಹೊರಬರಲು ಭಯಪಡುತ್ತಿದ್ದಾರೆ.
ಇನ್ನು ಬಿಸಿಲಿನ ತಾಪ ಮತ್ತು ಬೆವರಿನಿಂದ ಪರಿಹಾರ ಪಡೆಯಲು ಕೂಲರ್, ಎಸಿ ಅಳವಡಿಸುವ ಮೂಲಕ ಕೊಂಚ ನೆಮ್ಮದಿ ಪಡೆಯುತ್ತಿದ್ದಾರೆ. ಆದರೆ ಇದು ಮನುಷ್ಯರಿಗೆ ಮಾತ್ರ ಸೀಮಿತ. ಮೂಕ ಜೀವಿಗಳ ವಿಷಯದಲ್ಲಿ ಹಾಗಲ್ಲ. ಎಷ್ಟೇ ಬಿಸಿಲಿದ್ದರೂ ಸಹಿಸಿಕೊಳ್ಳಬೇಕು. ಆದರೆ, ಮನುಷ್ಯರಿಗಷ್ಟೇ ಅಲ್ಲ ಪ್ರಾಣಿಗಳಿಗೂ ಈ ಸವಲತ್ತು ಇದೆ ಎಂಬುದನ್ನು ಹಾಲಿನ ವ್ಯಾಪಾರಿಯೊಬ್ಬರು ಸಾಬೀತುಪಡಿಸಿದ್ದಾರೆ.
ರೈತನೊಬ್ಬ ತನ್ನ ಎಮ್ಮೆಗಳ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದು, ಎಮ್ಮೆಗಳಿಗಾಗಿಯೇ ವಿಶೇಷ ಹವಾನಿಯಂತ್ರಿತ ಕೋಣೆಯನ್ನು ಸಿದ್ಧಪಡಿಸಿದ್ದಾರೆ. ರೈತನು ಮುರ್ರಾ ತಳಿಯ ಎಮ್ಮೆಗಳನ್ನು ಸಾಕಿದ್ದು, ಅವುಗಳಿರುವ ಕೊಟ್ಟಿಗೆಯಲ್ಲಿ ಎರಡು ಹವಾನಿಯಂತ್ರಣಗಳನ್ನು ಅಳವಡಿಸಿದ್ದಾರೆ. ಎಸಿ ಮಾತ್ರವಲ್ಲದೆ, ಫ್ಯಾನ್ ಹಾಗೂ ಲೈಟ್​ಗಳನ್ನು ಸಹ ಅಳವಡಿಸಿದ್ದಾರೆ. ಬಿಸಿಲ ಝಳದಿಂದ ಎಮ್ಮೆಗಳಿಗೆ ಯಾವುದೇ ತೊಂದರೆ ಆಗಬಾರದು ಎಂಬ ಉದ್ದೇಶದಿಂದ ಈ ವ್ಯವಸ್ಥೆ ಮಾಡಲಾಗಿದೆ ಎಂದು ರೈತ ಹೇಳಿದ್ದಾನೆ. ಸದ್ಯ ಇದಕ್ಕೆ ಸಂಬಂಧಿಸಿದ ವಿಡಿಯೋ @Gulzar_sahab ಹೆಸರಿನ ಎಕ್ಸ್​ ಖಾತೆಯಲ್ಲಿ ಪೋಸ್ಟ್ ಮಾಡಿದ ನಂತರ ವೈರಲ್ ಆಗಿದೆ.
शहर वालों और दिखाओ अमीरी 🤑pic.twitter.com/ZlGPDK6x2o
— ज़िन्दगी गुलज़ार है ! (@Gulzar_sahab)June 1, 2024

ಸದ್ಯ ಈ ವಿಡಿಯೋವನ್ನು ಲಕ್ಷಾಂತರ ಮಂದಿ ವೀಕ್ಷಣೆ ಮಾಡಿದ್ದಾರೆ. ಸುಮಾರು 30 ಸಾವಿರ ಮಂದಿ ಲೈಕ್ ಮಾಡಿದ್ದಾರೆ. ಅಲ್ಲದೇ ಈ ವಿಡಿಯೋ ನೋಡಿದ ನೆಟ್ಟಿಗರು ವಿಭಿನ್ನ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಅಲ್ಲದೆ ಆ ಪ್ರಾಣಿಗಳನ್ನು ಹೊರಗೆ ಇಡಿ, ಎಸಿಗಳು ಆರೋಗ್ಯಕ್ಕೆ ಹಾನಿ ಮಾಡುತ್ತದೆ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಮುರ್ರಾ ಎಮ್ಮೆಗಳು ಶಾಖವನ್ನು ತಡೆದುಕೊಳ್ಳುವುದಿಲ್ಲ, ಇದು ಅಂಬಾನಿ ಎಮ್ಮೆಗಳು ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಬಹುಮತದ ಗಡಿ ದಾಟಿದ ಎನ್‌ಡಿಎ.. ‘ಇಂಡಿಯಾ’ ಮೈತ್ರಿಕೂಟ ತೀವ್ರ ಪೈಪೋಟಿ

ಕೇಂದ್ರದಲ್ಲಿ ಸರ್ಕಾರ ರಚಿಸಲು ಪ್ರಯತ್ನ ಆರಂಭಿಸಿದ ಇಂಡಿ ಒಕ್ಕೂಟ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:six + 15 =
Remember me
