ಮುಂಬೈ:ಪತ್ನಿಯ ಮೇಲೆ ಕಾರು ಹರಿಸಿದ ಆರೋಪದ ಮೇಲೆ ಬಾಲಿವುಡ್​ ನಿರ್ಮಾಪಕ ಕಮಲ್​ ಕಿಶೋರ್​ ಮಿಶ್ರಾ ವಿರುದ್ಧ ಬುಧವಾರ (ಅ.26) ಪ್ರಕರಣ ದಾಖಲಾಗಿದೆ. ಆರೋಪಿ ಕಮಲ್ ಮಿಶ್ರಾ ಬೇರೊಂದು ಮಹಿಳೆಯ ಜೊತೆ ಕಾರಿನಲ್ಲಿ ಇರುವುದನ್ನು ಪತ್ನಿ ಪತ್ತೆ ಹಚ್ಚಿ, ಪ್ರಶ್ನಿಸಲು ಮುಂದಾದಾಗ ಮಿಶ್ರಾ ಕಾರು ಹರಿಸಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆ ಕಳೆದ ಅ.19ರಂದು ಅಂಧೇರಿ (ಪಶ್ಚಿಮ) ಉಪನಗರದ ವಸತಿ ಕಟ್ಟಡದ ಪಾರ್ಕಿಂಗ್​ ಏರಿಯಾದಲ್ಲಿ ನಡೆದಿತ್ತು. ಕಾರು ಹರಿದು ಕಮಲ್‘ ಮಿಶ್ರಾ ಪತ್ನಿ ಗಾಯಗೊಂಡಿದ್ದರು. ಇದೀಗ ನಿರ್ಮಾಪಕ ಕಮಲ್ ಮಿಶ್ರಾ ವಿರುದ್ಧ ಆತನ ಪತ್ನಿ ಅಂಬೊಲಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದೂರಿನ ಪ್ರಕಾರ, ಕಮಲ್ ಮಿಶ್ರಾ ಅವರ ಪತ್ನಿ ತನ್ನ ಪತಿಯನ್ನು ಹುಡುಕುತ್ತಾ ಮನೆಯಿಂದ ಹೊರಬಂದಾಗ ಪಾರ್ಕಿಂಗ್ ಪ್ರದೇಶದಲ್ಲಿ ತನ್ನ ಕಾರಿನಲ್ಲಿ ಇನ್ನೊಬ್ಬ ಮಹಿಳೆಯೊಂದಿಗೆ ಪತಿ ಇರುವುದನ್ನು ಕಂಡಿದ್ದಾಳೆ. ಇದನ್ನು ಖಚಿತಪಡಿಸಿಕೊಳ್ಳಲು ಕಾರಿನ ಬಳಿ ಹೋದಾಗ ಕಮಲ್ ಮಿಶ್ರಾ, ಅಲ್ಲಿಂದ ಪರಾರಿಯಾಗುವ ಭರದಲ್ಲಿ ಪತ್ನಿಯ ಮೇಲೆ ಕಾರು ಹರಿಸಿದ್ದು. ಇದರಿಂದ ಪತ್ನಿಯ ಕಾಲುಗಳಿಗೆ ಗಂಭೀರ ಗಾಯಗಳಾಗಿವೆ ಎಂದು ದೂರಿನಲ್ಲಿ ಉಲ್ಲೇಖವಾಗಿದೆ.
ದೂರಿನ ಆಧಾರದ ಮೇಲೆ ನಿರ್ಮಾಪಕ ಕಮಲ್​ ಮಿಶ್ರಾ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್​ 279 (ದುಡುಕಿನ ಚಾಲನೆ) ಮತ್ತು 337 (ಇತರರ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುವುದು) ಸೇರಿದಂತೆ ಸೂಕ್ತ ಸೆಕ್ಷನ್​ಗಳ ಅಡಿಯಲ್ಲಿ ಅಂಬೊಲಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ಪೊಲೀಸ್​ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇದೀಗ ತನಿಖೆಯನ್ನು ಆರಂಭಿಸಿದ್ದಾರೆ. ಅಂದಹಾಗೆ ಕಮಲ್​ ಮಿಶ್ರಾ ದೆಹಾತಿ ಡಿಸ್ಕೋ ಸಿನಿಮಾ ನಿರ್ಮಾಪಕ.(ಏಜೆನ್ಸೀಸ್​)
ತೆಲಂಗಾಣದ TRS ಸರ್ಕಾರ ಉರುಳಿಸುವ ಯತ್ನ: ಶಾಸಕರಿಗೆ 100 ಕೋಟಿ ರೂ. ಆಫರ್​, ಸಿಕ್ಕಿಬಿದ್ದ ನಾಲ್ವರು

ಮಕ್ಕಳ ಮುಂದೆ ಬೆತ್ತಲಾಗಿ ಛೀಮಾರಿ ಹಾಕಿಸಿಕೊಂಡಿದ್ದ ರೆಹಾನಾಳ ವಿರುದ್ಧ ತಾಯಿಯಿಂದಲೇ ದೂರು ದಾಖಲು!

ನಟಿ ನಯನತಾರ ಬಾಡಿಗೆ ತಾಯ್ತನ ಪ್ರಕರಣ: ತಮಿಳುನಾಡು ಸರ್ಕಾರದ ತನಿಖೆಯಲ್ಲಿ ಮಹತ್ವದ ಮಾಹಿತಿ ಬಯಲು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + eleven =
Remember me
