ಅಮೆರಿಕ:ಇತ್ತೀಚಿನ ದಿನಗಳಲ್ಲಿ ವಿಮಾನ ದುರಂತದ ಸುದ್ದಿಗಳು ಹೆಚ್ಚಾಗುತ್ತಿವೆ. ಆಕಾಶದಲ್ಲಿ ಚಲಿಸುತ್ತಿದ್ದ ವಿಮಾನಕ್ಕೆ ಹಾರಾಡುತ್ತಿದ್ದ ಹಕ್ಕಿಯೊಂದು ಡಿಕ್ಕಿಯಾಗಿ ವಿಮಾನದ ಎಂಜಿನ್​ಗೆ ಬೆಂಕಿ ಹೊತ್ತಿಕೊಂಡ ಘಟನೆ ನಡೆದಿದೆ.
ಓಹಿಯೋ ವಿಮಾನ ನಿಲ್ದಾಣದಿಂದ ಭಾನುವಾರ ಟೇಕಾಫ್ ಆದ ಸ್ವಲ್ಪ ಸಮಯದ ನಂತರ ವಿಮಾನಕ್ಕೆ ಒಂದು ಹಕ್ಕಿಯ ಡಿಕ್ಕಿಯಾಗಿದೆ. ಈ ವೇಳೆ ಎಂಜಿನ್‌ಗೆ ಬೆಂಕಿ ಹೊತ್ತಿಕೊಂಡಿದೆ. ವಿಡಿಯೋದಲ್ಲಿ ವಿಮಾನದ ಇಂಜಿನ್ ಹೊತ್ತಿ ಉರಿಯುತ್ತಿರುವುದನ್ನು ನೋಡಬಹುದು. ನಂತರ ಅಮೆರಿಕನ್ ಏರ್‌ಲೈನ್ಸ್ ಬೋಯಿಂಗ್ 737 ವಿಮಾನವು ಯುಎಸ್‌ನ ಓಹಿಯೋದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ನಂತರ ಅಗ್ನಿಶಾಮಕ ದಳದವರು ತ್ವರಿತವಾಗಿ ಬೆಂಕಿಯನ್ನು ನಂದಿಸಿದರು.
ಇದನ್ನೂ ಓದಿ:ಬಿಬಿಎಂಪಿ ಅಧಿಕಾರಿ ಗಂಗಾಧರಯ್ಯ ಮನೆಯಲ್ಲಿ ಕಂತೆ‌ ಕಂತೆ ಹಣ, ಬೆಳ್ಳಿ, ಚಿನ್ನ, ವಿದೇಶಿ ಕರೆನ್ಸಿಗಳು ಪತ್ತೆ!ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್​ ಮಾಡಲಾಗಿದೆ. ಯಾವುದೇ ಪ್ರಣಾಪಾಯವಾಗಿರುವ ಕುರಿತಾಗಿ ಯಾವುದೇ ವರದಿಯಾಗಿಲ್ಲ. ವಿಮಾನದಲ್ಲಿ ಎಷ್ಟು ಪ್ರಯಾಣಿಕರು ಮತ್ತು ಸಿಬ್ಬಂದಿ ಇದ್ದರು ಎಂಬುದು ಸ್ಪಷ್ಟವಾಗಿಲ್ಲ.
American Airlines 737 returns to Columbus Airport after striking a number of geese on departure. AA1958 to Phoenix landed back safely 25 minutes after takeoff.pic.twitter.com/ws3wi3Cl9D
— Breaking Aviation News & Videos (@aviationbrk)April 23, 2023

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − 6 =
Remember me
