ನವದೆಹಲಿ:ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಭಾರೀ ಪ್ರಮಾಣದ ಹೋರಾಟ ಮಾಡಿದ್ದ ಜಾಮಿಯಾ ವಿಶ್ವವಿದ್ಯಾಲಯದಲ್ಲಿ ಪೊಲೀಸರು ಕಾಲೇಜಿನ ರೀಡಿಂಗ್​ ಹಾಲ್​ಗೆ ನುಗ್ಗಿ ವಿದ್ಯಾರ್ಥಿಗಳಿಗೆ ಹೊಡೆದಿದ್ದಾರೆ. ಎರಡು ತಿಂಗಳ ಹಿಂದೆ ನಡೆದಿರುವ ಈ ಘಟನೆಯ ವಿಡಿಯೋವನ್ನು ಇದೀಗ ವಿಶ್ವವಿದ್ಯಾಲಯದ ಸಮನ್ವಯ ಸಮಿತಿ ಬಿಡುಗಡೆ ಮಾಡಿದೆ.
ಡಿಸೆಂಬರ್​ 15ರಂದು ನಡೆದಿರುವ ಘಟನೆಯ 49 ಸೆಕೆಂಡುಗಳ ವಿಡಿಯೋವನ್ನು ಜಾಮಿಯಾ ವಿಶ್ವವಿದ್ಯಾಲಯದ ಸಮನ್ವಯ ಸಮಿತಿ ಟ್ವಿಟರ್​ನಲ್ಲಿ ಬಿಡುಗಡೆ ಮಾಡಿದೆ. ಆ ವಿಡಿಯೋದಲ್ಲಿ ಪೊಲೀಸರು ವಿದ್ಯಾಲಯದ ರೀಡಿಂಗ್​ ಹಾಲ್​ಗೆ ನುಗ್ಗಿ ಲಾಠಿಯಿಂದ ವಿದ್ಯಾರ್ಥಿಗಳಿಗೆ ಹೊಡೆದಿರುವ ದೃಶ್ಯ ಸೆರೆಯಾಗಿದೆ. M Phil ವಿಭಾಗದ ರೀಡಿಂಗ್​ ಹಾಲ್​ನಲ್ಲಿ ವಿದ್ಯಾರ್ಥಿಗಳು ಓದುತ್ತಾ ಕುಳಿತಿದ್ದಾಗ ಅಲ್ಲಿಗೆ ಪ್ರವೇಶಿಸುವ ಪೊಲೀಸರ ತಂಡವು ವಿದ್ಯಾರ್ಥಿಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಲಾಠಿ ಪ್ರಹಾರ ಮಾಡುತ್ತಾರೆ. ಘಟನೆಯಿಂದಾಗಿ ಹೆದರುವ ಕೆಲ ವಿದ್ಯಾರ್ಥಿಗಳು ಹಾಲ್​ನಿಂದ ಓಡಿಹೋಗಿದ್ದರೆ ಇನ್ನು ಕೆಲವರು ಅಲ್ಲಿನ ಟೇಬಲ್​ಗಳ ಕೆಳಗೆ ಬಚ್ಚಿಟ್ಟುಕೊಳ್ಳುತ್ತಾರೆ.
ಈ ವಿಡಿಯೋವನ್ನು ಹಂಚಿಕೊಂಡಿರುವ ಸಮನ್ವಯ ಸಮಿತಿಯು “ಶೇಮ್​ ಆನ್​ ಯು” ಎಂದು ದೆಹಲಿ ಪೊಲೀಸ್​ಗೆ ಹೇಳಿದೆ.
ಸಿಎಎ ಜಾರಿಗೆ ಬಂದಾಗಿನಿಂದ ಜಾಮಿಯಾ ವಿಶ್ವವಿದ್ಯಾಲಯದಲ್ಲಿ ಹೋರಾಟ ನಡೆಯುತ್ತಾ ಬಂದಿದ್ದು ಡಿಸೆಂಬರ್​ 15ರಂದು ಆ ಹೋರಾಟ ಉಗ್ರ ರೂಪ ತಳೆದುಕೊಂಡಿತ್ತು. ಪರಿಸ್ಥಿತಿಯ ನಿಯಂತ್ರಣಕ್ಕೆಂದು ಪೊಲೀಸರು ಲಾಠಿ ಚಾರ್ಜ್​ ಮಾಡಿದ್ದು ಹಲವು ವಿದ್ಯಾರ್ಥಿಗಳು ಗಾಯಗೊಂಡಿದ್ದರು. ಒಬ್ಬ ವಿದ್ಯಾರ್ಥಿಯು ತನ್ನ ಎಡಗಣ್ಣಿನ ದೃಷ್ಟಿ ಕಳೆದುಕೊಂಡಿದ್ದ. ಸುಮಾರು 100ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + seventeen =
Remember me
