ಬಿಲಾಸ್​ಪುರ: ಛತ್ತೀಸ್​ಗಢದಲ್ಲಿ ಬಿಲಾಸ್​ ಪುರ ಸಮೀಪ ಖುಟಾಘಾಟ್ ಅಣೆಕಟ್ಟು ವ್ಯಾಪ್ತಿಯಲ್ಲಿ ಪ್ರವಾಹದ ನಡುವೆ ಸಿಲುಕಿದ್ದ ವ್ಯಕ್ತಿಯನ್ನು ಭಾರತೀಯ ವಾಯುಪಡೆಯ ಹೆಲಿಕಾಫ್ಟರ್ ಮೂಲಕ ರಕ್ಷಿಸಿದ ರೋಚಕ ವಿಡಿಯೋ ಈಗ ವೈರಲ್ ಆಗಿದೆ.
ತೀವ್ರ ಮಳೆಯ ಕಾರಣಕ್ಕೆ ಅಣೆಕಟ್ಟೆಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ಹೆಚ್ಚಿನ ನೀರನ್ನು ಅಣೆಕಟ್ಟೆ ಗೇಟ್ ಓಪನ್ ಮಾಡಿ ಬಿಡಲಾಗಿದೆ. ಇದರಿಂದಾಗಿ ಅಣೆಕಟ್ಟೆಯ ಕೆಳಭಾಗದಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ವ್ಯಕ್ತಿಯೊಬ್ಬ ಅದರ ನಡುವೆ ಸಿಲುಕಿದ್ದ. ಮರವೊಂದನ್ನು ಆಶ್ರಯವಾಗಿ ಹಿಡಿದು ನೀರಿನ ಸೆಳೆತದ ನಡುವೆ ಬದುಕುವುದಕ್ಕೆ ಹೋರಾಟ ನಡೆಸುತ್ತಿದ್ದ.
ಇದನ್ನೂ ಓದಿ:ವಿಶ್ವಗುರು: ಡಿಜೆ ಹಳ್ಳಿ ಗಲಭೆ, ಅನೇಕ ಪ್ರಶ್ನೆಗಳು!
ಆತನನ್ನು ಭಾರತೀಯ ವಾಯುಪಡೆ ಹೆಲಿಕಾಫ್ಟರ್ ಮೂಲಕ ರಕ್ಷಿಸುವ ಕಾರ್ಯಾಚರಣೆಯನ್ನು ಬಿಲಾಸಪುರ ಪೊಲೀಸರು ಚಿತ್ರೀಕರಿಸಿದ್ದು ಸಾಮಾಜಿಕ ಜಾಲಾತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ. ಈ ಕಾರ್ಯಾಚರಣೆ ಮೈನವಿರೇಳಿಸುವಂತೆ ಇದ್ದು, ಬಹಳ ಜನ ವಾಯುಪಡೆ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್)
VIDEO|ಬಾಪ್ ಬಾಪ್ ಹೋತಾ ಹೇ, ಬೇಟಾ ಬೇಟಾ ಹೋತಾ ಹೇ: ಪಾಕಿಗಳ ಪ್ರತಿಭಟನೆಗೆ ಭಾರತೀಯನ ಪ್ರತಿರೋಧ ಹೀಗಿತ್ತು..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × one =
Remember me
