ಧನಬಾದ್​ :ಬೆಳಗಿನ ಜಾಗಿಂಗ್ ಹೋಗಿದ್ದ ಜಿಲ್ಲಾ ನ್ಯಾಯಾಧೀಶರೊಬ್ಬರು ‘ಅಪಘಾತ’ಕ್ಕೀಡಾಗಿ ಮೃತಪಟ್ಟಿದ್ದ ಪ್ರಕರಣದಲ್ಲಿ ಇದೀಗ ಕೊಲೆಯ ಶಂಕೆ ಎದ್ದಿದೆ. ತಮ್ಮ ಪಾಡಿಗೆ ರಸ್ತೆಬದಿಯಲ್ಲಿ ಹೋಗುತ್ತಿದ್ದ ಝಾರ್ಕಂಡಿನ ನ್ಯಾಯಾಧೀಶ ಉತ್ತಮ್​ ಆನಂದ್​ ಅವರಿಗೆ ವಾಹನವೊಂದು ಉದ್ದೇಶಪೂರ್ವಕವಾಗಿ ಗುದ್ದಿದಂತೆ ಕಾಣುವ ಸಿಸಿಟಿವಿ ಫೂಟೇಜ್​ ಜಾಲತಾಣದಲ್ಲಿ ವೈರಲ್ ಆಗಿದೆ.
ಬುಧವಾರ ಬೆಳಿಗ್ಗೆ ಜಾಗಿಂಗ್​ಗಾಗಿ ತೆರಳಿದ್ದ ನ್ಯಾಯಾಧೀಶರಾದ ಆನಂದ್​ ಆಸ್ಪತ್ರೆಯಲ್ಲಿ ಹಿಟ್​ ಅಂಡ್​ ರನ್​ ಕೇಸ್​ ಅಡಿ ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಇದೀಗ ಅವರ ಸಾವಿಗೆ ಕಾರಣವಾದ ‘ಅಪಘಾತ’ದ ದೃಶ್ಯವನ್ನು ತೋರಿಸುವ ಸಿಸಿಟಿವಿ ಫೂಟೇಜ್​ ಹೊರಬಿದ್ದಿದೆ. ಅದರಲ್ಲಿ ಬೆಳಿಗ್ಗೆ 5 ಗಂಟೆಗೆ ವಾಹನ ಸಂಚಾರ ಕಡಿಮೆ ಇರುವ ರಸ್ತೆಯಲ್ಲಿ ಆನಂದ್​ ಅವರು ಜಾಗ್​ ಮಾಡುತ್ತಿರುವಾಗ, ಟೆಂಪೋ ಒಂದು ಟರ್ನ್​ ತೆಗೆದುಕೊಂಡು ಅವರೆಡೆಗೇ ಹೋಗಿ ಗುದ್ದುವುದು. ಅವರು ಕೆಳಗೆ ನಿತ್ರಾಣರಾಗಿ ಬಿದ್ದಂತೆ, ಆ ವಾಹನ ಮುಂದೆ ಹಾದುಹೋಗುವುದು ಕಂಡುಬರುತ್ತದೆ. ಇದರಿಂದಾಗಿ ನ್ಯಾಯಾಧೀಶ ಆನಂದ್​ ಅವರ ಸಾವು ನಿಜವಾಗಿ ಅಪಘಾತವೋ ಅಥವಾ ಕೊಲೆಯೋ ಎಂಬ ಶಂಕೆ ಮೂಡಿದೆ.
धनबाद के ज़िला सत्र जज उत्तम आनंद का बुधवार सुबह मोर्निंग वॉक में एक ऑटो के ठक्कर में मौत का मामला गहराता जा रहा हैं ⁦@ndtvindia⁩ ⁦@Anurag_Dwary⁩pic.twitter.com/oV3m3Ca6x0
— manish (@manishndtv)July 28, 2021

ಸುಪ್ರೀಂ ಕೋರ್ಟ್​ ಬಾರ್​ ಅಸೋಸಿಯೇಷನ್​ ಪರವಾಗಿ ಹಿರಿಯ ವಕೀಲ ವಿಕಾಸ್​ ಸಿಂಗ್​ ಅವರು ಇಂದು ಈ ಘಟನೆಯ ಬಗ್ಗೆ ಸುಪ್ರೀಂ ಕೋರ್ಟ್​ನಲ್ಲಿ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್​ ಅವರೆದುರು ಪ್ರಸ್ತಾಪ ಮಾಡಿದರು. “ಇದು ನ್ಯಾಯಾಂಗದ ಮೇಲೆ ಮಾಡಿರುದ ದಾಳಿಯಂತಿದ್ದು, ಈ ಪ್ರಕರಣದಲ್ಲಿ ಸಿಬಿಐ ತನಿಖೆಯಾಗಬೇಕು. ಸುಪ್ರೀಂ ಕೋರ್ಟ್​ ಈ ಬಗ್ಗೆ ಸುಯೋ ಮೋಟೋ ವಿಚಾರಣೆ ಕೈಗೊಂಡು ಸೂಕ್ತ ಆದೇಶ ನೀಡಬೇಕು” ಎಂದರು. ಮತ್ತೆ ಕೆಲವು ವಕೀಲರು ಮುಖ್ಯ ನ್ಯಾಯಮೂರ್ತಿ ಎನ್​.ವಿ.ರಮಣ ಅವರ ಮುಂದೆ ಈ ವಿಚಾರ ಪ್ರಸ್ತಾಪ ಮಾಡಿದಾಗ, ಮುಖ್ಯ ನ್ಯಾಯಮೂರ್ತಿ ರಮಣ ಅವರು ಝಾರ್ಕಂಡ್​ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯವರೊಂದಿಗೆ ತಾವು ಮಾತನಾಡಿರುವುದಾಗಿ ಹೇಳಿದರು. ಹೈಕೋರ್ಟ್​ ಈ ಬಗ್ಗೆ ವಿಚಾರಣೆ ನಡೆಸುತ್ತಿದ್ದು, ಪ್ರಕರಣದ ಬಗ್ಗೆ ಕಾಳಜಿ ವಹಿಸಲಾಗುತ್ತಿದೆ ಎಂದರು ಎಂದು ಎನ್​ಡಿಟಿವಿ ವರದಿ ಮಾಡಿದೆ.
ಇದನ್ನೂ ಓದಿ:ಸಿಎಂ ಬೆಂಗಾವಲು ವಾಹನಕ್ಕೆ ಮಾಜಿ ಸಚಿವ ಶಿವರಾಮ್​ ಹೆಬ್ಬಾರ್​ ಕಾರು ಡಿಕ್ಕಿ!
ಧನಬಾದ್​ ಜಿಲ್ಲಾ ಮತ್ತು ಹೆಚ್ಚುವರಿ ನ್ಯಾಯಾಧೀಶರಾಗಿದ್ದ ಮೃತ ಉತ್ತಮ್​ ಆನಂದ್​ ಅವರು ನಿರ್ವಹಿಸುತ್ತಿದ್ದ ಕೇಸುಗಳ ಬಗ್ಗೆ ಪರಿಶೀಲಿಸಲಾಗುತ್ತಿದೆ. ಧನಬಾದ್ ಪಟ್ಟಣದಲ್ಲಿ ನಡೆದ ಮಾಫಿಯಾ ಹತ್ಯೆಗಳ ಹಲವು ಮೊಕದ್ದಮೆಗಳನ್ನು ಅವರು ವಿಚಾರಣೆ ನಡೆಸುತ್ತಿದ್ದರು. ಇತ್ತೀಚೆಗೆ ಇಬ್ಬರು ಗ್ಯಾಂಗ್​ಸ್ಟರ್​ಗಳ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದರು ಎನ್ನಲಾಗಿದೆ. ವಾಹನದ ಚಾಲಕ ಮತ್ತು ಕೆಲವು ಸಹಚರರನ್ನು ಧನಬಾದಿನ ಗಿರಿದಿಹ್ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.(ಏಜೆನ್ಸೀಸ್)
ಒಲಿಂಪಿಕ್ಸ್​: ಕ್ವಾರ್ಟರ್​ ಫೈನಲ್ಸ್ ತಲುಪಿದ ಸಿಂಧು, ಸತೀಶ್​ ಕುಮಾರ್​; ಅರ್ಜೆಂಟಿನಾ ವಿರುದ್ಧ ಭಾರತದ ಹಾಕಿ ತಂಡಕ್ಕೆ ಜಯ

ಒಂದು ಪ್ಲೇಟ್​ಗೆ 15 ಸಾವಿರ ರೂಪಾಯಿ! ಇದು ಭೂಮಿಯ ಅತ್ಯಂತ ದುಬಾರಿ ಫ್ರೆಂಚ್​ ಫ್ರೈಸ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − five =
Remember me
