ಟೋಕಿಯೋ :ಜಪಾನಿನ ಟೋಕಿಯೋದ ಮುಖ್ಯ ಕ್ರೀಡಾಂಗಣದಲ್ಲಿ ಇಂದು ಭಾರತೀಯ ಅಥ್ಲೀಟ್​ ಕಮಲ್​ಪ್ರೀತ್ ಕೌರ್​ ಅವರು ರೋಮಾಂಚಕ ಪ್ರದರ್ಶನ ನೀಡಿದರು. ಮಹಿಳೆಯರ ಡಿಸ್ಕಸ್​ ಥ್ರೋ ಅರ್ಹತಾ ಸುತ್ತಿನ ಸ್ಪರ್ಧೆಯಲ್ಲಿ 64 ಮೀಟರ್​ ದೂರ ಸಾಧಿಸಿ, ಹಾಲಿ ವರ್ಲ್ಡ್​ ಚ್ಯಾಂಪಿಯನನ್ನೂ ಮೀರಿಸಿದರು.
ಕೌರ್​ ಅವರ ಡಿಸ್ಕಸ್ ಎಸೆತದ ದೃಶ್ಯವನ್ನು ಡಿಡಿ ನ್ಯೂಸ್​ ಚಾನೆಲ್​ ಪ್ರಸಾರ ಮಾಡಿದ್ದು, ತನ್ನ ಟ್ವಿಟರ್​ ಖಾತೆಯಲ್ಲೂ ಶೇರ್ ಮಾಡಿದೆ.
She's done it! 🇮🇳
Here's how India's#KamalpreetKaurmade a superb throw of 64.00m qualifying for finals | Women's Discus Throw#Cheer4India#TokyoOlympics2020@ianuragthakur@Media_SAI@IndiaSportspic.twitter.com/3YKD0T8qMg
— DD News (@DDNewslive)July 31, 2021

ಅರ್ಹತಾ ಸುತ್ತು ಬಿ ಸ್ಪರ್ಧೆಯಲ್ಲಿ, ಅಮೆರಿಕದ ವಾಲರೀ ಆಲ್ಮನ್ 66.42 ಮೀಟರ್ ದೂರ ಎಸೆದು ಮೊದಲ ಸ್ಥಾನ ಗಳಿಸಿದರು. ಕಮಲ್​ಪ್ರೀತ್​ ಕೌರ್​ ಅವರು, 64 ಮೀಟರ್​ ದೂರಕ್ಕೆ ಎಸೆದು, ಎರಡನೇ ಸ್ಥಾನ ಗಳಿಸಿದ್ದು, ಆಗಸ್ಟ್​ 2ರ ಅಂತಿಮ ಸ್ಪರ್ಧೆಗೆ ಆಯ್ಕೆಯಾದರು. ಕಮಲ್​ಪ್ರೀತ್​ ಕೌರ್ ಅವರು, ಕಳೆದ ಒಲಿಂಪಿಕ್ಸ್​ನಲ್ಲಿ ಚಿನ್ನ ಗೆದ್ದಿದ್ದ ಕ್ರೊಯೇಷಿಯಾದ ಸ್ಯಾಂಡ್ರಾ ಪೆರ್ಕೊವಿಕ್​(63.75ಮೀ.) ಮತ್ತು ಹಾಲಿ ವರ್ಲ್ಡ್​ ಚ್ಯಾಂಪಿಯನ್​ ಆದ ಕ್ಯೂಬಾದ ಯೈಮೆ ಪೆರೆಜ್​(63.18ಮೀ.) ಅವರಿಗಿಂತ ಹೆಚ್ಚು ದೂರವನ್ನು ಸಾಧಿಸಿದ್ದು ವಿಶೇಷವಾಗಿದೆ.(ಏಜೆನ್ಸೀಸ್)
ಡಿಸ್ಕಸ್​ ಥ್ರೋ: ಅಂತಿಮ ಸುತ್ತಿಗೆ ಭಾರತದ ಕಮಲ್​ಪ್ರೀತ್ ಕೌರ್!

ಸರ್ಕಾರ ಲೈಸೆನ್ಸ್​ ಪಡೆದಿದೆಯೇ? ಸುಪ್ರೀಂ ಅಂಗಳಕ್ಕೆ ಪೆಗಾಸಸ್ ಪ್ರಕರಣ!

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:seven + eleven =
Remember me
