ಪುಣೆ:ಕರ್ತವ್ಯ ನಿರತರಾಗಿದ್ದ ಸಂಚಾರಿ ಪೊಲೀಸ್ ಒಬ್ಬರು ಮಾಸ್ಕ್ ಧರಿಸದ ಕಾರು ಚಾಲಕನನ್ನು ತಡೆಯತ್ನಿಸಿದ ವೇಳೆ, ಆತ ಸಂಚಾರಿ ಪೊಲೀಸ್​ನನ್ನೇ ಗುದ್ದಿ ಬಾನೆಟ್​ ಮೇಲೆ ಹೊತ್ತೊಯ್ದ ಘಟನೆ ಪಿಂಪ್ರಿ ಚಿಂಚ್ವಾಡದಿಂದ ವರದಿಯಾಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಕೂಡ ವೈರಲ್ ಆಗಿದೆ.
ಮಾಸ್ಕ್ ಧರಿಸದೇ ಪ್ರಯಾಣಿಸುತ್ತಿರುವವರನ್ನು ಗುರುತಿಸಿ ದಂಡ ವಿಧಿಸುವ ಕೆಲಸವನ್ನು ಸಂಚಾರಿ ಪೊಲೀಸ್ ಮಾಡುತ್ತಿದ್ದರು. ಇದೇ ವೇಳೆ, ಈ ಕಾರಿನಲ್ಲಿ ಬಂದವರು ಮಾಸ್ಕ್ ಧರಿಸದೇ ಇರುವುದನ್ನು ಗಮನಿಸಿ ನಿಲ್ಲಿಸುವುದಕ್ಕಾಗಿ ಕಾರಿನ ಎದುರು ಹೋಗಿದ್ದಾರೆ. ಕಾರುಚಾಲಕ ಸಂಚಾರಿ ಪೊಲೀಸ್​ಗೆ ಗುದ್ದಿದ್ದು, ಅವರು ಕಾರಿನ ಬಾನೆಟ್ ಮೇಲೆ ಬಿದ್ದರೂ ಚಾಲಕ ನಿಲ್ಲಿಸದೇ ಹಾಗೆಯೇ ಅವರನ್ನು ಹೊತ್ತುಕೊಂಡು ಮುಂದಿನ ಸಿಗ್ನಲ್ ತನಕ ಕಾರು ಚಲಾಯಿಸಿದ್ದ! ಕೆಲವು ಬೈಕ್ ಸವಾರರು ಕಾರನ್ನು ನಿಲ್ಲಿಸುವ ಪ್ರಯತ್ನ ಮಾಡಿರುವ ದೃಶ್ಯವೂ ವಿಡಿಯೋದಲ್ಲಿದೆ.
ಇದನ್ನೂ ಓದಿ:ವಿವೇಕಧಾರೆ ಅಂಕಣ: ವಿಶ್ವವಿದ್ಯಾಲಯ ವಿದ್ಯೆಯ ಆಲಯವೋ? ಲಯವೋ?
ಗಾಯಗೊಂಡ ಸಂಚಾರಿ ಪೊಲೀಸ್ ಹೆಸರು ಅಬಾಸಾಹೇಬ್​ ಸಾವಂತ್​. ಆರೋಪಿಯ ಹೆಸರು ಯುವರಾಜ್​ ಹನುವತೆ (49). ಈ ಸಂಬಂಧ ಪಿಂಪ್ರಿ ಚಿಂಚ್ವಾಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. (ಏಜೆನ್ಸೀಸ್)
#WATCH| Pune: An on-duty Traffic Police personnel was dragged on the bonnet of a car in Pimpri-Chinchwad after he attempted to stop the vehicle.The driver of the car has been arrested.#Maharashtra(5.11)pic.twitter.com/W8pQb2B4Go
— ANI (@ANI)November 5, 2020

ಬಾದಾಮಿ ಪಟ್ಟಣದಲ್ಲಿ ಭಾರಿ ಅಗ್ನಿದುರಂತ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + nineteen =
Remember me
