ಚಂಡೀಗಡ :ಕಾಂಗ್ರೆಸ್ ನಾಯಕ ಹಾಗೂ ಮಾಜಿ ಕ್ರಿಕೆಟಿಗ ನವಜೋತ್​ ಸಿಂಗ್ ಸಿಧು ಅವರು ಇಂದು ಪಂಜಾಬ್​ ಪ್ರದೇಶ ಕಾಂಗ್ರೆಸ್ ಕಮಿಟಿ(ಪಿಪಿಸಿಸಿ)ಯ ನೂತನ ಅಧ್ಯಕ್ಷರಾಗಿ ಪದಸ್ವೀಕಾರ ಮಾಡಿದರು. ಈ ಸಂದರ್ಭದಲ್ಲಿ ಚಂಡೀಗಡದ ಪಂಜಾಬ್​ ಕಾಂಗ್ರೆಸ್ ಭವನದ ಆವರಣದಲ್ಲಿ ಭಾರೀ ಅಬ್ಬರದ ಸಭೆ ನಡೆಯಿತು.
ವೇದಿಕೆಯಲ್ಲಿ ನೂತನ ಅಧ್ಯಕ್ಷರಾದ ಸಿಧುರನ್ನು ಮಾತನಾಡಲು ಮೈಕ್ ಬಳಿಗೆ ಕರೆಯುತ್ತಿದ್ದ ಕಾರ್ಯಕರ್ತರು, ‘ಬಬ್ಬರ್​ ಶೇರ್’​ ಎಂದು ಹೇಳಿ ಬಹುಪರಾಕ್ ಹೇಳುತ್ತಿರುವಂತೆ, ಸಿಧು ಬ್ಯಾಟಿಂಗ್ ಮಾಡುವ ಶೈಲಿಯನ್ನು ಅನುಕರಿಸುತ್ತಾ ಠೀವಿಯಿಂದ ನಡೆದರು. ಹಿರಿಯರಿಗೆ ನಮಸ್ಕರಿಸಿ, ಅಭಿಮಾನಿಗಳತ್ತ ಕೈಬೀಸುತ್ತಾ ನಡೆದ ಸಿಧು ಧಾಟಿಯನ್ನು ಸೆರೆಹಿಡಿದಿರುವ ವಿಡಿಯೋ ತುಣುಕನ್ನು ಎಎನ್​ಐ ಸುದ್ದಿ ಸಂಸ್ಥೆ ಟ್ವಿಟರ್​​ನಲ್ಲಿ ಶೇರ್ ಮಾಡಿದೆ.
#WATCH: Newly appointed Punjab Congress president Navjot Singh Sidhu mimics a batting style as he proceeds to address the gathering at Punjab Congress Bhawan in Chandigarh.(Source: Punjab Congress Facebook page)pic.twitter.com/ZvfXlOBOqi— ANI (@ANI)July 23, 2021
#WATCH: Newly appointed Punjab Congress president Navjot Singh Sidhu mimics a batting style as he proceeds to address the gathering at Punjab Congress Bhawan in Chandigarh.(Source: Punjab Congress Facebook page)pic.twitter.com/ZvfXlOBOqi
ರಾಜ್ಯದ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್, ಪಿಪಿಸಿಸಿ ಮಾಜಿ ಅಧ್ಯಕ್ಷ ಸುನೀಲ್ ಜಾಖರ್ ಮತ್ತು ಇತರ ಹಿರಿಯ ನಾಯಕರು ಉಪಸ್ಥಿತರಿದ್ದರು. ಸಿಧು ಅವರು, ಸಿಎಂ ಅಮರಿಂದರ್ ಸಿಂಗ್ ವಿರುದ್ಧ ಭಾರೀ ಅಬ್ಬರ ಮಾಡಿ ದಕ್ಕಿಸಿಕೊಂಡಿರುವ ನೂತನ ಹುದ್ದೆಯಲ್ಲಿ ಹೇಗೆ ‘ಬ್ಯಾಟಿಂಗ್’ ಮಾಡುತ್ತಾರೆ ಎಂದು ಕಾದುನೋಡಬೇಕು.
ಸಿಎಂ ಯಡಿಯೂರಪ್ಪ ಸಿಟಿ ರೌಂಡ್ಸ್! ಎಲ್ಲೆಲ್ಲಿಗೆ ಭೇಟಿ – ಇಲ್ಲಿದೆ ವಿವರ
ಮಹಿಳೆಯರನ್ನು ಪುಸಲಾಯಿಸಿ ಬೆತ್ತಲೆ ಚಿತ್ರ ತರಿಸಿಕೊಳ್ಳುತ್ತಿದ್ದ ಖದೀಮ! ಕೃತ್ಯಕ್ಕೆ ಮೊಬೈಲ್ ಆ್ಯಪ್​ ಬಳಕೆ


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + eleven =
Remember me
