ವಿಜಯಪುರ:ದೇಶಾದ್ಯಂತ ಪ್ರಭು ಶ್ರೀರಾಮ ಚಂದ್ರನ ಮೂರ್ತಿ ಪ್ರಾಣ ಪ್ರತಿಷ್ಠಾಪನೆಯ ದೃಶ್ಯಾವಳಿಗಳು ಕಣ್ಮನಗಳಲ್ಲಿ ರಾರಾಜಿಸುತ್ತಿರುವಾಗಲೇ ಮಾಡಬಾರದ್ದನ್ನು ಮಾಡಿ ಜೈಲು ಪಾಲಾಗಿರುವ ಕೈದಿಗಳು ಪರಸ್ಪರ ಕಿತ್ತಾಡಿಕೊಳ್ಳುತ್ತಾ ಮಧ್ಯೆ ರಾಮನನ್ನು ಎಳೆತಂದು ಕೋಲಾಹಲ ಎಬ್ಬಿಸಿದ್ದಾರೆ.ಹೌದು, ದರ್ಗಾ ಜೈಲ್ ಎಂದೇ ಖ್ಯಾತಿ ಪಡೆದ ಐತಿಹಾಸಿಕ ಜಿಲ್ಲಾ ಕೇಂದ್ರ ಕಾರಾಗೃಹದಿಂದ ಹೊರಬಂದ ಮಹಾರಾಷ್ಟ್ರದ ಕೈದಿಯೊಬ್ಬನ ವಿಡಿಯೋ ದೃಶ್ಯಾವಳಿಗಳು ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.
ಕೆಲವು ದಿನಗಳ ಹಿಂದೆ ಮಹಾರಾಷ್ಟ್ರದಿಂದ ಕರೆತಂದ ಕೈದಿಗಳನ್ನು ದರ್ಗಾ ಜೈಲ್ ನಲ್ಲಿರಿಸಲಾಗಿದೆ. ಇದೇ ಜೈಲ್ ನಲ್ಲಿ ರೌಡಿ ಶೀಟರ್ ಶೇಖ್ ಮೊಹಮ್ಮದ್ ಮೋದಿ ಮತ್ತಿತರೂ ಇದ್ದಾರೆ. ಕೊಲೆ ಪ್ರಕರಣದಲ್ಲಿ ಅಂದರ್ ಆಗಿರುವ ಮೋದಿ ಮತ್ತು ಕೆಲವು ಸಹಚರರು ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆಂಬುದು ವಿಡಿಯೋ ಮಾಡಿರುವ ಕೈದಿಯ ಅಳಲು.
ಅಷ್ಟಕ್ಕೂ ತಮ್ಮ ಮೇಲಿನ ಹಲ್ಲೆಗೆ ರಾಮನ ಪೂಜೆಯೇ ಕಾರಣ, ಅಯೋಧ್ಯೆಯಲ್ಲಿ ರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆ ಜೈಲಿನಲ್ಲಿ ನಮ್ಮ ಧರ್ಮಕ್ಕೆ ಅನುಸಾರವಾಗಿ ಪೂಜೆ ಮಾಡುತ್ತಿದ್ದಾಗಿ ಮೋದಿ ಹಾಗೂ ಅವನ ಸಹಚರರು ಸೇರಿ ಹಲ್ಲೆ ಮಾಡಿದ್ದಾರೆ, ಹೀಗಾಗಿ ಪ್ರಧಾನಿ ಮೋದಿ ಹಾಗೂ ಯೋಗಿ ಆದಿತ್ಯ ನಾಥ ಅವರು ತಮಗೆ ರಕ್ಷಣೆ ಕೊಡಬೇಕೆಂದು ಆ ಕೈದಿ ಬೇಡಿಕೊಂಡಿದ್ದಾನೆ. ಅದರ ವಿಡಿಯೋ ದೃಶ್ಯಾವಳಿಗಳು ವ್ಯಾಪಕವಾಗಿ ಹರಿದಾಡುತ್ತಿವೆ.
ಅಷ್ಟಕ್ಕೂ ಜೈಲಿನಲ್ಲಿ ಈ ಕೈದಿಗೆ ವಿಡಿಯೋ ಮಾಡಲು ಅವಕಾಶ ಕಲ್ಪಿಸಿದ್ದು ಯಾರು? ಮೊಬೈಲ್ ಒಳಗಡೆ ತೆಗೆದುಕೊಂಡು ಹೋಗಿದ್ದೇಗೆ? ವಿಡಿಯೋ ಮಾಡಿ ಹೊರಗೆ ಬಿಟ್ಟಿದ್ದು ಯಾರು? ಎಂಬ ಚರ್ಚೆಗೆ ಜೈಲು ಅಧಿಕಾರಿಯೇ ಉತ್ತರಿಸಬೇಕಿದೆ. ಈ ಬಗ್ಗೆ ಎಸ್ ಪಿ ಋಷಿಕೇಶ ಸೋನಾವಣೆ ಅವರನ್ನು ಸಂಪರ್ಕಿಸಲಾಗಿ ಆ ಬಗ್ಗೆ ಪರಿಶೀಲಿಸುವ ಅಗತ್ಯವಿದೆ ಎಂದಿದ್ದಾರೆ.
ಬೆಂಗಳೂರು ಅಂತಾರಾಷ್ಟ್ರೀಯ ಗ್ರಾಂಡ್​ ಮಾಸ್ಟರ್ಸ್​ ಚೆಸ್​ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದ ಮಿತ್ರಭಾ; ರೋಚಕ ಫೈನಲ್​ ಹಣಾಹಣಿ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:17 − five =
Remember me
