ಭುವನೇಶ್ವರ್:ಒಡಿಶಾದ ಸಿಮಿಲಿಪಾಲ್​ ಹುಲಿ ಸಂರಕ್ಷಿತಾರಣ್ಯದಲ್ಲಿ ಅಪರೂಪದ ಕಪ್ಪುಬಣ್ಣದ ಹುಲಿ ಪತ್ತೆಯಾಗಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಕಪ್ಪು ಹುಲಿಗಳನ್ನು ಮೆಲನಿಸ್ಟಿಕ್ ಹುಲಿಗಳು ಎಂದು ಸಹ ಕರೆಯಲಾಗುತ್ತದೆ.
ಈ ವಿಶೇಷ ಪ್ರಾಣಿಯ ದೃಶ್ಯವನ್ನು ಕ್ಯಾಮೆರಾ ಟ್ರ್ಯಾಪ್​ ಸಾಧನದಿಂದ ಸೆರೆಹಿಡಿಯಲಾಗಿದೆ. ವನ್ಯಜೀವಿಗಳ ಜನಸಂಖ್ಯೆ ಮತ್ತು ಪರಸ್ಪರ ಕ್ರಿಯೆಗಳನ್ನು ಮೇಲ್ವಿಚಾರಣೆ ಮಾಡಲು ಈ ಕ್ಯಾಮೆರಾ ಟ್ರ್ಯಾಪ್​ ಸಾಧನವನ್ನು ಬಳಸಲಾಗುತ್ತದೆ. ಹುಲಿಯ ಚರ್ಮ ಮತ್ತು ಕೂದಲು ಹೆಚ್ಚು ಕಪ್ಪು ವರ್ಣದಿಂದ ಕೂಡಿದೆ.
ಕಪ್ಪು ವರ್ಣದ ಹುಲಿಯ ವಿಡಿಯೋವನ್ನು ಐಎಫ್​ಎಸ್​ (ಭಾರತೀಯ ಅರಣ್ಯ ಸೇವೆ) ಅಧಿಕಾರಿ ಹಾಗೂ ಭಾರತ ಸರ್ಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದಲ್ಲಿ ಅರಣ್ಯಗಳ ಮಹಾನಿರೀಕ್ಷಕರಾಗಿರುವ ರಮೇಶ್​ ಪಾಂಡೆ ಅವರು ಶೇರ್​ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ:ಪತ್ನಿಗೆ ಸೀಮಂತ ಮಾಡಿ ತವರಿಗೆ ಕಳುಹಿಸಿಕೊಟ್ಟ ಪತಿ ನಾಪತ್ತೆ​: 1 ವರ್ಷವಾದ್ರೂ ಬಾರದ ಗಂಡ, ಧರಣಿ ಕುಳಿತ ಮಹಿಳೆ
ಪಾಂಡೆ ಅವರು ಈ ಅಪರೂಪದ ದೃಶ್ಯವನ್ನು ಸಾರ್ವಜನಿಕರ ಗಮನಕ್ಕೆ ತಂದ ಬಳಿಕ ಕಪ್ಪು ಬಣ್ಣದ ಹುಲಿ ಮತ್ತು ಸಿಮಿಲಿಪಾಲ್ ಸಂರಕ್ಷಿತಾರಣ್ಯದ ಬಗ್ಗೆ ಜಾಲತಾಣದಲ್ಲಿ ಬಹಳಷ್ಟು ಚರ್ಚೆಯಾಗುತ್ತಿದೆ.
ಒಡಿಶಾದ ಸಿಮಿಲಿಪಾಲ್​ ಹುಲಿ ಸಂರಕ್ಷಿತಾರಣ್ಯದಲ್ಲಿ ಕ್ಯಾಮೆರಾ ಟ್ರ್ಯಾಪ್​ನಲ್ಲಿ ಸೆರೆಯಾದ ಸುಂದರ ಕಪ್ಪು ಬಣ್ಣದ ಹುಲಿಯ ದೃಶ್ಯವಿದು. ಹುಲಿಗಳ ಜನಸಂಖ್ಯೆಯಲ್ಲಿನ ಆನುವಂಶಿಕ ರೂಪಾಂತರಗಳಿಂದಾಗಿ ನಾವು ಕಪ್ಪು ಹುಲಿಗಳನ್ನು ನೋಡಬಹುದಾದ ಏಕೈಕ ಸ್ಥಳ ಸಿಮಿಲಿಪಾಲ್​ ಸಂರಕ್ಷಿತಾರಣ್ಯವಾಗಿದೆ ಎಂದು ರಮೇಶ್​ ಪಾಂಡೆ ಅವರು ಬರೆದುಕೊಂಡಿದ್ದಾರೆ.
Beautiful camera trap video of a melanistic tiger in Similipal Tiger Reserve, Odisha, the only place where we see blackish tigers because of genetic mutations in the population.pic.twitter.com/KXqvjX8tvs
— Ramesh Pandey (@rameshpandeyifs)August 1, 2023

ಈ ಕ್ಯಾಮೆರಾ ಟ್ರ್ಯಾಪ್​ ಅನ್ನು ಸಾಮಾನ್ಯವಾಗಿ ಮಂಡಿಯ ಎತ್ತರದಲ್ಲಿ ಅವಳಡಿಸಲಾಗುತ್ತದೆ. ಅಂದರೆ, ನೆಲದಿಂದ ಎರಡು ಅಡಿ ಎತ್ತರದಲ್ಲಿ ಇರಿಸಲಾಗುತ್ತದೆ. ಕ್ಯಾಮೆರಾ ಕಳ್ಳತನವನ್ನು ತಡೆಗಟ್ಟಲು ಗಟ್ಟಿಮುಟ್ಟಾದ ಮರಗಳಲ್ಲಿ ಅಳವಡಿಸಲಾಗುತ್ತದೆ. ವನ್ಯಜೀವಿ ನಡವಳಿಕೆಯನ್ನು ಸೆರೆಹಿಡಿಯಲು ಈ ಕ್ಯಾಮೆರಾಗಳನ್ನು ಬಳಸಲಾಗುತ್ತದೆ.(ಏಜೆನ್ಸೀಸ್​)
ಕಡೆಗೂ ಮಹೇಶ್​ ಬಾಬು ಫ್ಯಾನ್ಸ್​ಗಳ ಬೇಡಿಕೆ ಈಡೇರಿಸಿದ ‘ಗುಂಟೂರು ಕಾರಂ’ ಚಿತ್ರತಂಡ

ಪತ್ನಿಗೆ ಸೀಮಂತ ಮಾಡಿ ತವರಿಗೆ ಕಳುಹಿಸಿಕೊಟ್ಟ ಪತಿ ನಾಪತ್ತೆ​: 1 ವರ್ಷವಾದ್ರೂ ಬಾರದ ಗಂಡ, ಧರಣಿ ಕುಳಿತ ಮಹಿಳೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − four =
Remember me
