ಮುಂಬೈ:ಆಟೋ ಚಾಲಕನೊಬ್ಬ ಮುಂಬೈನ ನಡುರಸ್ತೆಯಲ್ಲಿ ಬೈಕ್​ ಸವಾರನಿಗೆ ಗುದ್ದಿ ಪರಾರಿಯಾಗಿರುವ ವಿಡಿಯೋ ಇದೀಗ ಸಮಾಜಿಕ ಜಾಲತಾಣಗಳಲ್ಲಿ ಸಕತ್​ ವೈರಲ್​ ಆಗಿದೆ.
ಇದನ್ನೂ ಓದಿ:ಪಿಎಫ್​ಐ ಖಾತೆಗೆ 100 ಕೋಟಿ ರೂಪಾಯಿ ಜಮೆ! ಇಡಿ ತನಿಖೆಯಿಂದ ಬಯಲಾಯ್ತು ಸಂಘಟನೆಯ ನಿಜ ಬಣ್ಣ
ಆಟೋ ಚಾಲಕನೊಬ್ಬ ಬೈಕ್ ಸವಾರನೊಂದಿಗೆ ಜಗಳವಾಡುತ್ತಾನೆ. ಜಗಳ ನಿಲ್ಲಿಸಿ, ಎರಡೂ ಗಾಡಿಗಳು ಮುಂದೆ ಹೋಗುತ್ತವೆ. ಹೀಗೆ ಹೋಗುವಾಗ ಬೈಕಿನ ಪಕ್ಕದಲ್ಲೇ ಚಲಿಸುವ ಆಟೋ ಕೆಲವೇ ಸೆಕೆಂಡುಗಳಲ್ಲಿ ಬೈಕಿಗೆ ಗುದ್ದೇ ಬಿಡುತ್ತದೆ. ಆಟೋ ಗುದ್ದಿದ ಏಟಿಗೆ, ಬೈಕ್​ ಮತ್ತು ಸವಾರ ಎರಡೂ ರಸ್ತೆ ಮಧ್ಯೆ ಬೀಳುತ್ತಾರೆ. ಈ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣದ ತುಂಬೆಲ್ಲಾ ಹರಿದಾಡಿದೆ.
ಇದನ್ನೂ ಓದಿ:ಹೋಟೆಲ್​ ಬಿಲ್​ 2 ಸಾವಿರ ಆದ್ರೆ ಬರೋಬ್ಬರಿ 50 ಸಾವಿರ ರೂಪಾಯಿ ಟಿಪ್ಸ್​ ಕೊಡ್ತಾನೆ ಈ ಭೂಪ!
ಈ ವಿಡಿಯೋ ಹರಿದಾಡಿದ ತಕ್ಷಣ ಮುಂಬೈ ಪೊಲೀಸರು ಎಚ್ಚೆತ್ತುಕೊಂಡಿದ್ದು, ಆಟೋ ಚಾಲಕನಿಗಾಗಿ ಬಲೆ ಬೀಸಿದ್ದಾರೆ. ಗುರುವಾರದಂದು ಆಟೋ ಚಾಲಕನನ್ನು ಪತ್ತೆ ಹಚ್ಚಲಾಗಿದ್ದು, ಆತನನ್ನು ಬಂಧಿಸಲಾಗಿದೆ. ಮುಂಬೈನ ರಿಯಾಫಿಕ್​ ನಗರದ ಸಲ್ಮಾನ್​ ಸೈಯದ್​ ಬಂಧಿತ ಆರೋಪಿ. ಈತ ಕಿಶೋರ್​ ಹೆಸರಿನ ಬೈಕ್​ ಸವಾರನೊಂದಿಗೆ ಜಗಳವಾಡಿದ್ದು, ಅದೇ ದ್ವೇಷದಿಂದ ಬೈಕ್​ಗೆ ಗುದ್ದಿದ್ದಾಗಿ ಹೇಳಲಾಗಿದೆ. ಸಲ್ಮಾನ್​ ವಿರುದ್ಧ ಕೊಲೆ ಪ್ರಯತ್ನದ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. (ಏಜೆನ್ಸೀಸ್​)
ನಡುರೆಸ್ತೆಯಲ್ಲಿ ಬೈಕ್​ಗೆ ಗುದ್ದಿ ಪರಾರಿಯಾದ ಆಟೋ! ಹಾಗೆ ಮಾಡುವುದಕ್ಕೂ ಒಂದು ಕಾರಣವಿತ್ತು!pic.twitter.com/bBoG1xsD4B
— Vijayavani (@VVani4U)December 24, 2020

ಈ ಕೇಸ್​ ಸಾಲ್ವ್​ ಮಾಡೋಕೆ ಸಹಾಯ ಮಾಡಿದರೆ ನಿಮಗೆ ಸಿಗುತ್ತೆ 2.7 ಕೋಟಿ ರೂಪಾಯಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + 5 =
Remember me
