ಜೈಪುರ:ಚಲಿಸುವ ಬೈಕ್​ ಮೇಲೆ ಪ್ರೇಮಿಗಳು ರೊಮ್ಯಾನ್ಸ್​ ಮಾಡುವುದು ಇತ್ತೀಚೆಗೆ ಟ್ರೆಂಡ್​ ಆಗಿರುವಂತೆ ಕಾಣುತ್ತಿದೆ. ಏಕೆಂದರೆ, ದಿನಕ್ಕೊಂದು ಇಂತಹ ಪ್ರಕರಣಗಳು ವರದಿಯಾಗುತ್ತಲೇ ಇದೆ. ಇದೀಗ ವೇಗವಾಗಿ ಚಲಿಸುತ್ತಿದ್ದ ಬೈಕ್​ ಮೇಲೆ ಪ್ರೇಮಿಗಳಿಬ್ಬರು ಸರಸವಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.
ಈ ಘಟನೆ ರಾಜಸ್ಥಾನದ ಅಜ್ಮೇರ್​ನಲ್ಲಿ ಸೋಮವಾರ ಮಧ್ಯರಾತ್ರಿ ನಡೆದಿದೆ. ಯುವತಿ ಪೆಟ್ರೋಲ್​ ಟ್ಯಾಂಕ್​ ಮೇಲೆ ಕುಳಿತು ಬೈಕ್​​ ಸವಾರರನ್ನು ಅಪ್ಪಿಕೊಂಡು, ಚುಂಬಿಸುತ್ತಿರುವ ದೃಶ್ಯ ವಿಡಿಯೋದಲ್ಲಿದೆ. ಇಬ್ಬರು ಅಜ್ಮೇರ್​ನಿಂದ ಪುಷ್ಕರ್​ಗೆ ಪ್ರಯಾಣಿಸುವಾಗ ಮಾರ್ಗ ಮಧ್ಯೆ ಅನುಚಿತವಾಗಿ ವರ್ತಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್​ ಆಗುತ್ತಿದ್ದಂತೆ ಅಜ್ಮೇರದಲ್ಲಿರುವ ಕ್ರಿಶ್ಚಿಯನ್​ ಗಂಜ್​ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದರು. ಕೊನೆಗೆ ಬೈಕ್​ ಸವಾರನ ಮಾಹಿತಿ ಪತ್ತೆಹಚ್ಚಲಾಯಿತು. ಆತನನ್ನು ಸಾಹಿಲ್​ ಎಂದು ಗುರುತಿಸಲಾಗಿದೆ. ಆತ ಅಜ್ಮೇರ್​ನ ಫೈ ಸಾಗರ್​ ರಸ್ತೆಯ ನಿವಾಸಿಯಾಗಿದ್ದು, ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಸಾಕಷ್ಟು ವಿಚಾರಣೆಯ ಬಳಿಕ ತನ್ನೊಂದಿಗೆ ಇದ್ದ ಯುವತಿಯ ಬಗ್ಗೆ ಸಾಹಿಲ್​ ಮಾಹಿತಿ ನೀಡಿದ್ದಾನೆ. ಇದೀಗ ಆ ಯುವತಿಗೂ ಪೊಲೀಸರು ಸಮನ್ಸ್​ ನೀಡಿದ್ದು, ಆಕೆಯು ಸಹ ವಿಚಾರಣೆಯನ್ನು ಎದುರಿಸಬೇಕಿದೆ.(ಏಜೆನ್ಸೀಸ್​)
अजमेर के पुष्कर रोड पर बाइक पर आशिकी, वीडियो वायरल#ajmer#ajmerviralvideo@AjmerpoliceRpic.twitter.com/aQCiumXilZ
— Jyoti Sharma (@JyotiSh61024918)February 7, 2023

ಕಬ್ಜ ಚಿತ್ರದಲ್ಲಿ ತಾನ್ಯಾ; ಉಪೇಂದ್ರ ಜತೆ ವಿಶೇಷ ಹಾಡಿನಲ್ಲಿ ಮಿಂಚಲಿರುವ ನಟಿ

ಎರಡರ ಬಳಿಕ ಒಂದು ಬಿಡುಗಡೆ!; ಕಾಂತಾರ ಚಿತ್ರಕ್ಕೂ ಮೊದಲೇ ಜೂಲಿಯೆಟ್ 2 ಪ್ಲ್ಯಾನ್

E10 ಯಶಸ್ಸು, E20 ಚಿತ್ತ: ಇ20 ಇಂಧನ ಎಂದರೇನು? ಪ್ರಯೋಜನಗಳೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × five =
Remember me
