ನವದೆಹಲಿ:ಅಂಗಡಿ ಮಾಲೀಕರೊಬ್ಬರಿಂದ 50 ಸಾವಿರ ರೂಪಾಯಿ ಲಂಚ ಪಡೆಯುವಾಗ ಪೊಲೀಸ್​ ಪೇದೆಯೊಬ್ಬರು ಸಿಬಿಐ ಅಧಿಕಾರಿಗಳಿಗೆ ರೆಡ್​ ಹ್ಯಾಂಡ್​ ಆಗಿ ಸಿಕ್ಕಿ ಬಿದ್ದಿರುವ ಘಟನೆ ನವದೆಹಲಿಯ ಮಂಗೋಲ್​ಪುರಿ ಪ್ರದೇಶದಲ್ಲಿ ನಡೆದಿದೆ.
ಬಂಧಿತ ಪೊಲೀಸ್​ ಪೇದೆಯನ್ನು ಭೀಮ್​ ಸಿಂಗ್​ ಎಂದು ಗುರುತಿಸಲಾಗಿದ್ದು, ಮಂಗೋಲ್​ಪುರಿ ಪ್ರದೇಶದಲ್ಲಿರುವ ಅಂಗಡಿ ಮಾಲೀಕರೊಬ್ಬರಿಗೆ ಪಾರ್ಕಿಂಗ್​ ಜಾಗದ ವಿಚಾರವಾಗಿ ಲಂಚ ಪಡೆಯುವ ವೇಳೆ ಸಿಬಿಐ ಬಲೆಗೆ ಬಿದ್ದಿದ್ದಾರೆ.
ಬಂಧಿತ ಪೇದೆ ಭೀಮ್​ ಸಿಂಗ್​ ಮಂಗೋಲ್​ಪುರಿ ಪ್ರದೇಶದಲ್ಲಿರುವ ಅಂಗಡಿ ಮಾಲೀಕರೊಬ್ಬರಿಗೆ ಪಾರ್ಕಿಂಗ್​ಗಾಗಿ ಸರ್ಕಾರಿ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿದ್ದೀರಾ ಎಂದು ಹೇಳಿ ಮೊದಲಿಗೆ ಧಮ್ಕಿ ಹಾಕಿದ್ದರು. ಈ ವಿಚಾರವನ್ನು ಮೇಲಿನ ಅಧಿಕಾರಿಗಳಿಗೆ ಹೇಳಿ ಅಂಗಡಿಯನ್ನು ಖಾಲಿ ಮಾಡಿಸುತ್ತೇನೆ ಎಂದು ಬೆದರಿಕೆ ಹಾಕಿ ಹೊರಟು ಹೋಗಿದ್ದರು.
ಇದನ್ನೂ ಓದಿ:ಪತಿ ವಿರುದ್ಧ ದೂರು ಕೊಡೋಳು ಇವಳೇ, ಬಳಿಕ ಜಾಮೀನು ಕೊಡಿಸೋಳು ಕೂಡ ಈಕೆನೇ; ಹೀಗ್ಯಾಕೆ ಎಂದ ನೆಟ್ಟಿಗರು
ಕೆಲ ದಿನಗಳ ಬಳಿಕ ಈ ಸಂಬಂದ ಅಂಗಡಿ ಮಾಲೀಕನೊಂದಿಗೆ ತಗಾದೆ ತೆಗೆದಿರುವ ಪೊಲೀಸ್​ ಪೇದೆ ಭೀಮ್​ ಸಿಂಗ್​ ವಿಚಾರವನ್ನು ಯಾರಿಗೂ ಹೇಳಬಾರದೆಂದರೆ 50 ಸಾವಿರ ರೂಪಾಯಿ ಲಂಚ ಕೊಡುವಂತೆ ಬೇಡಿಕೆ ಇಟ್ಟಿದ್ದಾನೆ. ಪೊಲೀಸ್​ ಪೇದೆಯ ಕಿರುಕುಳದಿಂದ ತೀವ್ರವಾಗಿ ಮನನೊಂದಿದ್ದ ಅಂಗಡಿ ಮಾಲೀಕ ಈ ಕುರಿತು ಸಿಬಿಐಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡು ಕಾರ್ಯಪ್ರವೃತ್ತರಾದ ಅಧಿಕಾರಿಗಳು ಆರೋಪಿಗೆ ಹಣ ಕೊಡಲು ಒಪ್ಪಿರುವುದಾಗಿ ಅಂಗಡಿ ಮಾಲೀಕನಿಗೆ ಹೇಳಲು ಸೂಚಿಸಿದ್ದಾರೆ. ಅಧಿಕಾರಿಗಖು ಹೇಳಿದಂತೆ ಕೇಳಿದ ಅಂಗಡಿ ಮಾಲೀಕ ಪೊಲೀಸ್​ ಪೇದೆಯನ್ನು ತನ್ನ ಅಂಗಡಿ ಬಳಿ ಬರುವಂತೆ ಹೇಳಿದ್ದಾನೆ. ಬಳಿಕ ಹಣ ಪಡೆಯಲು ಮೂವರು ಪೊಲೀಸ್​ ಪೇದೆಗಳೊಂದಿಗೆ ಆಗಮಿಸಿದ ಭೀಮ್​ ಸಿಂಗ್​​ ರೆಡ್​ ಹ್ಯಾಂಡ್​ ಆಗಿ ಸಿಬಿಐ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾನೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿರುವ ವಿಡಿಯೋದಲ್ಲಿ ಸಿಬಿಐ ಅಧಿಕಾರಿಗಳು ದಾಳಿ ಮಾಡುತ್ತಿದ್ದಂತೆ ಇನ್ನಿಬ್ಬರು ಪೊಲೀಸರು ಪೇದೆ ಭೀಮ್​ ಸಿಂಗ್​ನನ್ನು ಬಿಟ್ಟು ಓಡುತ್ತಿರುವುದು ಕಂಡು ಬರುತ್ತದೆ. ಅಧಿಕಾರಿಗಳು ಆತನನ್ನು ವಶಕ್ಕೆ ಪಡೆಯುತ್ತಿರುವ ದೃಶ್ಯ ಎಲ್ಲೆಡೆ ವೈರಲ್​ ಆಗಿದ್ದು, ತೀವ್ರ ಟೀಕೆಗೆ ಗುರಿಯಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + 2 =
Remember me
