ನವದೆಹಲಿ:ಬಹುತೇಕರಿಗೆ ಐಎಎಸ್ ಅಥವಾ ಐಪಿಎಸ್ ಅಧಿಕಾರಿಯ ಜೀವನ ಪಯಣದ ಬಗ್ಗೆ ತಿಳಿದುಕೊಳ್ಳಲು ಬಯಸುತ್ತಾರೆ. ಅಧಿಕಾರಿಗಳ ವೃತ್ತಿಜೀವನದ ಬಗ್ಗೆ ಮಾತ್ರವಲ್ಲದೆ ಅವರ ವೈಯಕ್ತಿಕ ಜೀವನದ ಬಗ್ಗೆಯೂ ಜನರು ಆಸಕ್ತಿ ವಹಿಸುತ್ತಾರೆ. ಇದೀಗ ಐಪಿಎಸ್ ಅಧಿಕಾರಿ ಅಭಿಷೇಕ್ ಪಲ್ಲವ ಅವರ ಅಧಿಕೃತ ನಿವಾಸದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ‘ಆಫೀಸರ್ಸ್ ಆನ್ ಡ್ಯೂಟಿ’ ಎಂಬ ಪೇಜ್ ಮೂಲಕ ಯೂಟ್ಯೂಬ್​ನಲ್ಲಿ ವಿಡಿಯೋ ಪೋಸ್ಟ್ ಮಾಡಲಾಗಿದೆ.
ಐಪಿಎಸ್ ಅಧಿಕಾರಿ ಅಭಿಷೇಕ್ ಪಲ್ಲವ ಅವರ ಸರ್ಕಾರಿ ನಿವಾಸವನ್ನು ವಿಡಿಯೋದಲ್ಲಿ ನೋಡಬಹುದು. ಬಹಳ ವಿಶಾಲ ಪ್ರದೇಶದಲ್ಲಿ ಅಧಿಕೃತ ನಿವಾಸ ಹರಡಿಕೊಂಡಿದೆ. ಮಹಾದ್ವಾರದ ಮೂಲಕ ಮನೆಗೆ ಪ್ರವೇಶಿಸುವ ಅಭಿಷೇಕ್, ಒಂದು ಅಂತಸ್ತಿನ ಸರ್ಕಾರಿ ಬಂಗಲೆಯನ್ನು ತಲುಪುತ್ತಾರೆ. ಬಂಗಲೆಯ ಬಾಲ್ಕನಿಯಲ್ಲಿ ಒಂದು ಸ್ವಿಂಗ್ ಸಹ ಗೋಚರಿಸುತ್ತದೆ. ಬಂಗಲೆಯ ಮುಂದೆಯೇ ಗಾರ್ಡನ್​ ಪ್ರದೇಶವೂ ಇದೆ. ಅದರ ಸುತ್ತಲೂ ಗಿಡಗಳು ಕಾಣಸಿಗುತ್ತವೆ.
2013ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿರುವ ಅಭಿಷೇಕ್ ಪಲ್ಲವ ಅವರ ಸರ್ಕಾರಿ ಮನೆಯಲ್ಲಿ ದೊಡ್ಡ ಉದ್ಯಾನ ಪ್ರದೇಶವೂ ಇದೆ. ಶೆಡ್ ಅಡಿಯಲ್ಲಿ ಕುಳಿತುಕೊಳ್ಳುವ ಸ್ಥಳವೂ ಇದೆ. ಉದ್ಯಾನದಲ್ಲಿ ಐಪಿಎಸ್ ಅಧಿಕಾರಿ ಪತ್ರಿಕೆ ಓದುವ ಉಯ್ಯಾಲೆಯೂ ಇದೆ. ಉದ್ಯಾನದಲ್ಲಿ ಮರದ ಮನೆ ಕೂಡ ಗೋಚರಿಸುತ್ತದೆ. ಅದನ್ನು ತಲುಪಲು ಏಣಿಯನ್ನೂ ಅಳವಡಿಸಲಾಗಿದೆ.
ಮನೆಯು ಐಷಾರಾಮಿ ಮತ್ತು ಸುಂದರವಾಗಿಯು ಕಾಣುತ್ತದೆ. ಛತ್ತೀಸ್‌ಗಢದ ದಾಂತೇವಾಡದಲ್ಲಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕೆಲಸ ಶುರು ಮಾಡಿದ ನಂತರ ಅಭಿಷೇಕ್ ಪಲ್ಲವರಿಗೆ ಈ ಬಂಗಲೆ ಸಿಕ್ಕಿದೆ.(ಏಜೆನ್ಸೀಸ್​)

ಆಶೀರ್ವಾದ ಪಡೆದು ಕಬ್ಬಿನ ಹಾಲು ಕುಡಿದು ಸ್ವಾಮೀಜಿಯೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದ ಜನರು!

ಸಿನಿಮಾದಲ್ಲಿ ನಟಿಸುವುದಾದರೆ… ನಟಿ ಕಾಜಲ್​ಗೆ ಪತಿ ಗೌತಮ್​ ವಿಧಿಸಿದ ಕಠಿಣ ಷರತ್ತು ಹೀಗಿದೆ…

ರೈಲ್ವೆ ಗೇಟ್​ ಬಂದ್​: ತಡವಾಗಿ ಬಂದ ರೈಲಿನಿಂದಾಗಿ ರೈಲ್ವೆ ಉದ್ಯೋಗಿ ದುರಂತ ಸಾವು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × two =
Remember me
