ತಿರುವನಂತಪುರಂ:ದೂರು ಕೊಡಲು ಬಂದ ತಂದೆ-ಮಗಳ ಜತೆಯಲ್ಲಿ ತಿರುವನಂತಪುರಂನ ನೆಯ್ಯಡ್ರಾಮ್​ ಠಾಣೆಯ ಪೊಲೀಸ್​ ಅಧಿಕಾರಿಯೊಬ್ಬರು ಅಸಭ್ಯವಾಗಿ ವರ್ತಿಸಿದ ವಿಡಿಯೋವೊಂದು ವೈರಲ್​ ಆದ ಬೆನ್ನಲ್ಲೇ ಅಧಿಕಾರಿಯನ್ನು ಅಮಾನತ್ತು ಮಾಡಲಾಗಿದೆ.
ಗ್ರೇಡ್​ ಅಸಿಸ್ಟೆಂಟ್​ ಸಬ್​ ಇನ್ಸ್​ಪೆಕ್ಟರ್​ ಗೋಪಕುಮಾರ್​ ಅಮಾನತ್ತಾದ ಅಧಿಕಾರಿ. ಶನಿವಾರ ಅಮಾನತ್ತು ಮಾಡಲಾಗಿದ್ದು, ಅಧಿಕಾರಿ ವಿರುದ್ಧ ತನಿಖೆಗೆ ಆದೇಶ ಹೊರಡಿಸಲಾಗಿದೆ.
ನ. 24ರಂದು ತಿರುವನಂತಪುರಂನ ನಿವಾಸಿ ಸುದೇವನ್​ ಮತ್ತು ಆತನ ಮಗಳು ದೂರು ನೀಡಲು ಠಾಣೆಗೆ ಬಂದಿದ್ದರು. ಇನ್ನೊಬ್ಬ ಮಗಳು ನಾಪತ್ತೆಯಾಗಿರುವ ಬಗ್ಗೆ ದೂರು ನೀಡಲು ಬಂದಿದ್ದರು. ಈ ವೇಳೆ ಪ್ರಕರಣ ದಾಖಲಿಸಿಕೊಳ್ಳಲು ಎಸ್​ಐ ಹಿಂದೇಟು ಹಾಕಿದ್ದಾರೆ. ಇದು ವಾಗ್ವಾದಕ್ಕೆ ಕಾರಣವಾಗಿದ್ದು, ಎಸ್​ಐ ಸಂಯಮ ಕಳೆದುಕೊಂಡು ವರ್ತಿಸಿರುವುದನ್ನು ಸುದೇವನ್​ ತಮ್ಮ ಮೊಬೈಲ್​ನಲ್ಲಿ ಸೆರೆಹಿಡಿದಿದ್ದಾರೆ.
ಇದನ್ನೂ ಓದಿ:ಪತ್ನಿಯನ್ನೇ ಬರ್ಬರವಾಗಿ ಕೊಂದ; 9 ವರ್ಷಗಳ ಹಿಂದೆ ಪ್ರೀತಿಸಿ ಮದ್ವೆಯಾಗಿದ್ದವ ಹೀಗೇಕೆ ಮಾಡಿದ?
ವಿಡಿಯೋದಲ್ಲಿ ಏನಿದೆ?:ಮಫ್ತಿಯಲ್ಲಿರುವ ಪೊಲೀಸ್​ ಠಾಣೆಯ ಮುಂಭಾಗ ನಿಂತು ತಂದೆ-ಮಗಳೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ. ಪೊಲೀಸರೇ ಬೆದರಿಸಿದರೆ ದೂರು ನೀಡಲು ಯಾರು ಮುಂದೆ ಬರುತ್ತಾರೆ ಎಂದು ಸುದೇವನ್​ ಅಸಹಾಯಕರಾಗಿ ಮಾತನಾಡಿರುವುದು ವಿಡಿಯೋದಲ್ಲಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಎಸ್​ಐ ಹೌದು, ಇಲ್ಲಿ ಇದೇ ದಾರಿ ಎಂದು ದುರಹಂಕಾರದ ಮಾತುಗಳನ್ನಾಡಿದ್ದಾರೆ. ಕೊನೆಯಲ್ಲಿ ಎಸ್​ಐ ಅಸಭ್ಯ ವರ್ತನೆಯಿಂದ ಬೇಸತ್ತ ಸುದೇವನ್​ ಮಗಳು ಅಲ್ಲಿಂದ ಹೊರಡೋಣ ಎಂದು ತಂದೆಗೆ ಹೇಳುವುದು ವಿಡಿಯೋದಲ್ಲಿದೆ. ಅಲ್ಲದೆ, ಮಹಿಳೆ ವಿರುದ್ಧ ಎಸ್​ಐ ಅಶ್ಲೀಲ ಪದಪ್ರಯೋಗ ಮಾಡಿದ್ದು, ಆಕೆಯ ಅಳುತ್ತಿರುವುದು ಸಹ ಸೆರೆಯಾಗಿದೆ.
ದೂರು ದಾಖಲಿಸದೆ ತಂದೆಯ ಮುಂದೆಯೇ ಮಗಳೊಂದಿಗೆ ಅಸಭ್ಯವಾಗಿ ವರ್ತಿಸಿರುವ ಎಸ್​ಐ ನಡವಳಿಕೆ ಸರಿಯಲ್ಲ ಎಂದು ಅಮಾನತ್ತು ಮಾಡಿ ಆದೇಶ ಹೊರಡಿಸಲಾಗಿದೆ.(ಏಜೆನ್ಸೀಸ್​)

ಓವರ್ ಡೋಸೆಜ್ ಎಂಬುದು ಗೊತ್ತಿರಲಿಲ್ಲ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × three =
Remember me
