ನವದೆಹಲಿ:ಕೋಣೆಯೊಂದರಲ್ಲಿ ಕುಳಿತು ಮಳೆಯನ್ನು ವಿಡಿಯೋದಲ್ಲಿ ರೆಕಾರ್ಡ್ ಮಾಡುತ್ತಿದ್ದ ಮಹಿಳೆಗೆ ಪಕ್ಕದಲ್ಲೇ ಮರದ ಮೇಲೆ ಸಿಡಿಲು ಬಡಿದಿದ್ದು, ಆಕೆ ಶಾಕ್​ಗೆ ಗುರಿಯಾಗಿದ್ದಾಳೆ. ಇದರ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್​ ಆಗುತ್ತಿದೆ.
ಇದನ್ನೂ ಓದಿ:ತಿಮ್ಮಪ್ಪ ಭಕ್ತರಿಗೆ ಟಿಟಿಡಿ ಸೂಚನೆ..ನವೆಂಬರ್ ತಿಂಗಳ ಸೇವೆಗಳ ಟಿಕೆಟ್ ಬಿಡುಗಡೆ!
ಆಕಾಶದಲ್ಲಿ ಕಾರ್ಮೋಡಗಳು ಕವಿದಿರುತ್ತವೆ. ಹೊಟೇಲ್ ಕೋಣೆಯಲ್ಲಿದ್ದ ಮಹಿಳೆ ಮೊಬೈಲ್​ನಿಂದ ವೀಡಿಯೋ ಮಾಡಲು ಮುಂದಾಗುತ್ತಾರೆ. ಆಗ ಹೊರಗೆ ಮರವೊಂದರ ಇದ್ದಕ್ಕಿದ್ದಂತೆ ಸಿಡಿಲು ಬಡಿದಿದೆ. ಇದೆಲ್ಲವೂ ವಿಡಿಯೋದಲ್ಲಿ ದಾಖಲಾಗಿದೆ. ಆದರೆ, ಮಹಿಳೆ ಆಘಾತಕ್ಕೊಳಗಾಗಿದ್ದು, ತಕ್ಷಣವೇ ವಿಡಿಯೋ ರೆಕಾರ್ಡ್ ಮಾಡುವುದನ್ನು ನಿಲ್ಲಿಸಿದ್ದಾರೆ. ಸಿಡಿಲಿನ ದೃಶ್ಯ ಆಗಲೇ ಕ್ಯಾಮರಾದಲ್ಲಿ ಸೆರೆಯಾಗಿದೆ. ಇದನ್ನು ಶೇರ್ ಮಾಡಿದ್ದು, ಹೀಗಾಗುತ್ತದೆ ಎಂದು ನಿರೀಕ್ಷಿಸಿರಲಿಲ್ಲ ಎಂದು ಆಕೆ ಹೇಳಿದ್ದಾರೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಜನರು ಬೆಚ್ಚಿಬಿದ್ದಿದ್ದಾರೆ. ಇಷ್ಟು ದೊಡ್ಡ ಸಿಡಿಲು ಬಡಿದು ಮರಕ್ಕೆ ಬಡಿದಿದ್ದರೂ ಹಾನಿಯಾಗದಿರುವುದು ಜನರಲ್ಲಿ ಅಚ್ಚರಿ ಮೂಡಿಸಿದೆ ಎಂದು ನೆಟ್ಟಿಗರೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ಗುಡುಗಿನ ಸದ್ದು ತುಂಬಾ ಭಯಾನಕವಾಗಿದೆ ಎಂದು ಮತ್ತೊಬ್ಬ ವ್ಯಕ್ತಿ ಅಭಿಪ್ರಾಯಪಟ್ಟಿದ್ದಾರೆ. ಸಿಡಿಲು ಬಡಿದಿದ್ದಕ್ಕೆ ಒಮ್ಮೆ ನಮ್ಮ ಮನೆಯ ಡೋರ್ ಬೆಲ್ ಕೆಳಗೆ ಬಿದ್ದಿತ್ತು ಎಂದು ಮತ್ತೊಬ್ಬ ವ್ಯಕ್ತಿ ಹೇಳಿದ್ದಾರೆ. ಪ್ರಸ್ತುತ ವೀಡಿಯೋ ವೈರಲ್​ ಆಗಿದೆ.
ಎಲೆಕ್ಟ್ರಿಕ್ ಬೈಕ್ ಖರೀದಿಸಿದ..ಬಳಿಕ ಏನಾಯ್ತು ನೋಡಿ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:fifteen − twelve =
Remember me
