ನವದೆಹಲಿ:ಸವಾರನೊಬ್ಬ ನದಿಯಲ್ಲಿ ಬೈಕ್​ ಚಲಾಯಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ನೀವೇನು ತಮಾಷೆ ಮಾಡ್ತಿಲ್ಲ ತಾನೇ ಅಂತ ಅಂದುಕೊಳ್ಳಬೇಡಿ. ಈ ವಿಡಿಯೋ ನೋಡಿದರೆ ನೀವು ಹೌದು ಎನ್ನುತ್ತೀರಿ. ವಿಡಿಯೋ ನೋಡಿ ನೆಟ್ಟಿಗರು ಸಹ ಹುಬ್ಬೇರಿಸಿದ್ದಾರೆ.
ಮೋಟಾರ್​ ಆಕ್ಟೇನ್​ ಹೆಸರಿನ ಟ್ವಿಟರ್​ ಪೇಜ್​​ನಲ್ಲಿ ವಿಡಿಯೋ ಶೇರ್​ ಮಾಡಲಾಗಿದೆ. ಸಣ್ಣ ವಿಡಿಯೋ ತುಣುಕಿನಲ್ಲಿ ಬೈಕ್​ ಮೇಲೆ ಕುಳಿತಿರುವ ವ್ಯಕ್ತಿ ನದಿಯ ಒಳಗೆ ಬೈಕ್​ ಇಳಿಸಿಕೊಂಡು ಸುಮಾರು ದೂರದವರೆಗೆ ನದಿಯಲ್ಲಿ ಬೈಕ್​ ಚಲಾಯಿಸಿಕೊಂಡು ಹೋಗಿ ಗುರಿ ತಲುಪಿರುವ ದೃಶ್ಯ ಇದೆ.
ಇದನ್ನೂ ಓದಿ:ಬಯಲು ಶೌಚದ ವೇಳೆ ಗುಪ್ತಾಂಗದ ಮೂಲಕದ ದೇಹ ಪ್ರವೇಶಿಸಿತಂತೆ ಹಾವು! ಇದು ಸಾಧ್ಯವೇ? ವೈದ್ಯರು ಹೇಳಿದ್ದೇನು?
The perfect example of "Where there is a will there's a way"Thoughts about this? Very clever or just very risky?pic.twitter.com/FgYfaFlOtt
— MotorOctane (@MotorOctane)April 6, 2023

ಸೂಕ್ತ ಉದಾಹರಣೆಯಂತೆಮನಸ್ಸಿದ್ದರೆ ಮಾರ್ಗ ಎಂಬುದಕ್ಕೆ ಈ ವಿಡಿಯೋ ಸೂಕ್ತ ಉದಾಹರಣೆ ಎಂದು ವಿಡಿಯೋಗೆ ಅಡಿಬರಹ ನೀಡಲಾಗಿದೆ. ಅಲ್ಲದೆ, ಈ ಬಗ್ಗೆ ಆಲೋಚಸಿ, ಇದು ತುಂಬಾ ಬುದ್ಧಿವಂತಿಯೇ? ಅಥವಾ ತುಂಬಾ ಅಪಾಯಕಾರಿಯೇ? ಎಂದು ವಿಡಿಯೋ ಕುರಿತು ಪ್ರಶ್ನಿಸಲಾಗಿದೆ.
ಭಾರೀ ವೀಕ್ಷಣೆಜಾಲತಾಣ ವೇದಿಕೆಯಲ್ಲಿ ವಿಡಿಯೋ ವೈರಲ್​ ಆಗಿದೆ. ಈವರೆಗೂ 4 ಲಕ್ಷಕ್ಕೂ ಅಧಿಕ ಮಂದಿ ವಿಡಿಯೋ ವೀಕ್ಷಣೆ ಮಾಡಿದ್ದಾರೆ. 2 ಸಾವಿರಕ್ಕೂ ಹೆಚ್ಚು ಮಂದಿ ವಿಡಿಯೋ ಇಷ್ಟಪಟ್ಟಿದ್ದು, ನೂರಾರು ಮಂದಿ ಕಾಮೆಂಟ್​ಗಳ ಮಹಾಪೂರವನ್ನೇ ಹರಿಸಿದ್ದಾರೆ.
ಇದನ್ನೂ ಓದಿ:ಥಿಯೇಟರ್​ ಒಳಗೆ ನೋಡ ನೋಡ್ತಿದ್ದಂತೆ ಯುವಕ.. ಕಹಿ ಘಟನೆ ಬಿಚ್ಚಿಟ್ಟ ಲೈಂಗಿಕ ಶಿಕ್ಷಣದ ಯೂಟ್ಯೂಬರ್​
ನೆಟ್ಟಿಗರು ಹೇಳಿದ್ದೇನು?ನಿಸ್ಸಂಶಯವಾಗಿ ಇದು ಅಪಾಯಕಾರಿ. ನೀರು ಎಕ್ಸಾಸ್ಟ್ ಪ್ರವೇಶಿಸಿದರೆ ಎಂಜಿನ್‌ಗೆ ಏನಾಗುತ್ತದೆ? ನೆಟ್ಟಿಗರೊಬ್ಬರು ಕಾಮೆಂಟ್​ ಮಾಡಿದ್ದಾರೆ. ಇದು ಅಪಾಯ ಎನಿಸಿದರೂ ಆತ ಬಹಳ ಬುದ್ಧಿವಂತ ಎಂದು ಮತ್ತೋರ್ವ ನೆಟ್ಟಿಗ ಅಭಿಪ್ರಾಯಪಟ್ಟಿದ್ದಾರೆ. ಸ್ಥಳೀಯರಿಗೆ ಅವರ ನದಿಯ ಬಗ್ಗೆ ಚೆನ್ನಾಗಿ ತಿಳಿದಿರುತ್ತದೆ. ಅವರು ಬಾಲ್ಯದಿಂದಲೂ ಅಲ್ಲಿ ವಾಸಿಸುತ್ತಿದ್ದಾರೆ. ಇದು ಅಸ್ಸಾಂನಲ್ಲಿ ಸಾಮಾನ್ಯವಾಗಿದೆ ಎಂದು ಇನ್ನೋರ್ವ ನೆಟ್ಟಿಗ ಹೇಳಿದ್ದಾರೆ.(ಏಜೆನ್ಸೀಸ್​)
Obviously risky. What happens to the engine if the water enters the exhaust?
— Rishabh (@IBeatTheStreet)April 6, 2023

Locals know their river he must be living there since childhood, its common in Assam
— Pallava Srivatsa (@pallava352)April 6, 2023

ರಾಜಕೀಯದಲ್ಲಿ ಸಿನಿ ಗುಂಗು: ಪಕ್ಷದ ವರ್ಚಸ್ಸು ವೃದ್ಧಿ ಆಗಲಿಲ್ಲ, ವೈಯಕ್ತಿಕ ಛಾಪೂ ಮೂಡಿಸದ ತಾರೆಯರು

ಆಕಾಂಕ್ಷಿಗಳ ಪಟ್ಟು, ಕೈ ಇಕ್ಕಟ್ಟು: ದತ್ತ ಸವಾಲ್, ಜೆಡಿಎಸ್​ನತ್ತ ಆಚಾರ್, ತಹಸೀಲ್ದಾರ್…

‘ಸ್ವಾತಿ ಮುತ್ತಿನ ಮಳೆ‌ಹನಿಯೇ’ ಟೈಟಲ್‌ ವಿವಾದ; ರಮ್ಯಾ ಪರವಾಗಿ ಕೋರ್ಟ್​ ಆದೇಶ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:four × three =
Remember me
