ಮಧ್ಯಪ್ರದೇಶ:ಯುವಕನೊಬ್ಬ ಜೀವಂತ ನವಿಲನ್ನು ಹಿಡಿದುಕೊಂಡು, ಅದರ ಗರಿಗಳನ್ನು ಕಿತ್ತೆಸೆದು ಚಿತ್ರಹಿಂಸೆ ಕೊಡುತ್ತಿರುವ ಭಯಾನಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆ ಮಧ್ಯಪ್ರದೇಶದ ಕಟ್ನಿ ಜಿಲ್ಲೆಯಲ್ಲಿ ನಡೆದಿದ್ದು, ಅತುಲ್ ಎಂಬಾತ ಆರೋಪಿ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
#Bhopal: A man stripping the feathers off a peacock in#MadhyaPradesh's Katni has created a furore on social media.Police have identified the accused and say they are looking for the accused.@Anurag_DwaryVideopic.twitter.com/r4tc4PoWk1— Siraj Noorani (@sirajnoorani)May 21, 2023
#Bhopal: A man stripping the feathers off a peacock in#MadhyaPradesh's Katni has created a furore on social media.Police have identified the accused and say they are looking for the accused.@Anurag_DwaryVideopic.twitter.com/r4tc4PoWk1
ವೈರಲ್ ಆಗಿರುವ ವಿಡಿಯೋದಲ್ಲಿ ಯುವಕ ಜೀವಂತ ನವಿಲಿನ ಗರಿಗಳನ್ನು ಅಮಾನುಷವಾಗಿ ಕಿತ್ತೆಸೆಯುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಈ ವೇಳೆ ಯುವಕನ ಪಕ್ಕದಲ್ಲಿ ಯುವತಿಯೊಬ್ಬಳು ಇರುವುದು ವಿಡಿಯೋದಲ್ಲಿ ಕಂಡು ಬಂದಿದೆ. ಈ ಬಗ್ಗೆ ಅರಣ್ಯಾಧಿಕಾರಿ ಗೌರವ್ ಶರ್ಮಾ ಪ್ರತಿಕ್ರಿಯಿಸಿದ್ದು, ವೈರಲ್ ಆಗಿರುವ ವಿಡಿಯೋದಲ್ಲಿ ಕಂಡು ಬಂದಿರುವ ಬೈಕ್ ನಂಬರ್ ಆಧರಿಸಿ ತಪ್ಪಿತಸ್ಥ ಯುವಕ ಯಾರೆಂಬುದನ್ನು ಗುರುತಿಸಲಾಗಿದೆ. ಯುವಕನನ್ನು ವಶಕ್ಕೆ ಪಡೆಯಲೆಂದು ಪೊಲೀಸರು ಹೋದಾಗ ಆತ ಆತನ ಮನೆಯಲ್ಲಿರಲಿಲ್ಲ. ಸದ್ಯದಲ್ಲೇ ಆತನನ್ನು ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.
ವಿಡಿಯೋ ವೈರಲ್ ಆಗುತ್ತಿದ್ದಂತೆ ಯುವಕನ ಕೃತ್ಯದ ಬಗ್ಗೆ ನೆಟ್ಟಿಗರು ಕಿಡಿಕಾರಿದ್ದಾರೆ. ಪ್ರಾಣಿ-ಪಕ್ಷಗಳನ್ನು ಹಿಂಸಿಸುವುದು ಕಾನೂನು ಬಾಹಿರವಾಗಿದೆ. ತಪ್ಪಿತಸ್ಥ ಯುವಕನಿಗೆ ತಕ್ಕ ಶಿಕ್ಷೆ ಆಗಬೇಕು. ಕೂಡಲೇ ಆತನನ್ನು ಪೊಲೀಸರು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ. ಸದ್ಯ ತಲೆಮರೆಸಿಕೊಂಡಿರುವ ಯುವಕನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + eight =
Remember me
