ಮುಂಬೈ:ಮಹಾರಾಷ್ಟ್ರದ ಭಿವಾಂಡಿ ಮೂಲದ ವ್ಯಕ್ತಿಯೊಬ್ಬ ತನ್ನ ಪತ್ನಿಗೆ ಅನಿರೀಕ್ಷಿತ ಉಡುಗೊರೆಯೊಂದನ್ನು ನೀಡುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ. ಮೊಣಕಾಲು ಉದ್ದದ ಸುಮಾರು 1 ಕೆ.ಜಿ ತೂಕದ ಮಂಗಳಸೂತ್ರವನ್ನು ಪತ್ನಿಗೆ ಉಡುಗೊರೆಯಾಗಿ ನೀಡಿರುವ ಮುಂಬೈ ವ್ಯಕ್ತಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.
ಉಡುಗೊರೆ ನೀಡಿದ ವ್ಯಕ್ತಿಯ ಹೆಸರು ಬಾಲಾ. ವೈರಲ್​ ವಿಡಿಯೋ ಪೊಲೀಸರ ಗಮನ ಸೆಳೆಯುತ್ತಿದ್ದಂತೆ ಎಚ್ಚೆತ್ತುಕೊಂಡ ಪೊಲೀಸರು ಬಾಲಾ ಮನೆಗೆ ಭೇಟಿ ನೀಡಿ ವಿಚಾರಿಸಿದಾಗ ಅಸಲಿ ವಿಚಾರ ಬೆಳಕಿಗೆ ಬಂದಿದೆ.
ಪತ್ನಿಗೆ ನೀಡಿರುವ ಆಭರಣ ಸಾಮಾಜಿಕ ಜಾಲತಾಣದಲ್ಲಿ ತುಂಬಾ ಗಮನ ಸೆಳೆದಿದೆ. ಇದರ ಬೆನ್ನಲ್ಲೇ ಬಾಲಾರನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಲಾಯಿತು. ಆಭರಣ ಸಂಪೂರ್ಣ ಚಿನ್ನವಲ್ಲ. ಅದು ಚಿನ್ನದ ಪ್ಲೇಟ್​ ಉಳ್ಳ ಮಂಗಳಸೂತ್ರ ಎಂದು ಬಾಲಾ ಬಾಯ್ಬಿಟ್ಟಿದ್ದಾರೆ.
ಇದು ಕೇವಲ ಅನುಕರಣೆಯಷ್ಟೇ, ಜ್ಯುವೆಲ್ಲರಿ ಶಾಪ್​ನಿಂದ ಕೇವಲ 38,000 ರೂಪಾಯಿಗೆ ಕೊಂಡು ತಂದೆ ಎಂದು ಬಾಲಾ ಹೇಳಿಕೆ ನೀಡಿ, ಆಧಾರಗಳನ್ನು ತೋರಿದ ಬಳಿಕ ಅವರನ್ನು ಠಾಣೆಯಿಂದ ಬಿಟ್ಟು ಕಳುಹಿಸಲಾಗಿದೆ.

ಘಟನೆ ಬಗ್ಗೆ ಮಾತನಾಡಿರುವ ಪೊಲೀಸ್​ ಅಧಿಕಾರಿಯೊಬ್ಬರು ವಿಡಿಯೋ ವೈರಲ್​ ಆಗುತ್ತಿದ್ದಂತೆ ಅದು ನಮ್ಮ ಗಮನಕ್ಕೆ ಬಂದಿತು. ಹೆಚ್ಚು ಚಿನ್ನಾಭರಣವನ್ನು ಹೊಂದುವುದು ಮತ್ತು ಅದನ್ನು ಸಾರ್ವಜನಿಕವಾಗಿ ಪ್ರದರ್ಶಿಸುವುದು ಅಪರಾಧ. ಈ ಬಗ್ಗೆ ತನಿಖೆ ನಡೆಸಿದ ಬಳಿಕ ಬಾಲಾರನ್ನು ಠಾಣೆಗೆ ಕರೆಸಲಾಯಿತು. ಚಿನ್ನದ ಮಂಗಳಸೂತ್ರ ನಕಲಿ ಎಂದು ಬಾಲಾ ಒಪ್ಪಿಕೊಂಡರು. ಜ್ಯುವೆಲ್ಲರಿ ಶಾಪ್​ನಲ್ಲಿ 38 ಸಾವಿರ ರೂಪಾಯಿಗೆ ಖರೀದಿಸಿದ್ದಾಗಿ ಹೇಳಿದರು. ಬಳಿಕ ಅವರನ್ನು ಶಾಪ್​ಗೆ ಕರೆದೊಯ್ದು ಪರಿಶೀಲಿಸಲಾಯಿತು. ಅದು ನಕಲಿ ಎಂಬುದು ತಿಳಿದುಬಂದಿತು ಎಂದಿದ್ದಾರೆ.
ಕೊನೆಯಲ್ಲಿ ಸಲಹೆಯೊಂದನ್ನು ನೀಡಿದ ಪೊಲೀಸ್​ ಅಧಿಕಾರಿ ಚಿನ್ನದ ಆಭರಣಗಳನ್ನು ಈ ರೀತಿ ಪ್ರದರ್ಶಿಸಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಈ ರೀತಿ ಮಾಡಿದರೆ ಕಿಡಿಗೇಡಿಗಳಿಗೆ ಮುಕ್ತ ಆಹ್ವಾನ ನೀಡಿದಂತಾಗುತ್ತದೆ ಎಂದು ಎಚ್ಚರಿಸಿದ್ದಾರೆ.(ಏಜೆನ್ಸೀಸ್​)
VIDEO| ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿ ಭಾಷಾಭಿಮಾನ ಮೆರೆದ ಕೇರಳ ಶಾಸಕ!

ಭಯ ಹುಟ್ಟಿಸಿದ ಹ್ಯಾಪಿ ಹೈಪೋಕ್ಸಿಯಾ: ಆತಂಕ ಮೂಡಿಸುತ್ತಿದೆ ಹಠಾತ್ ಸಾವು

ಕರಾವಳಿಯಲ್ಲಿ ಗೋಚರಿಸಿದ ಮತ್ಸ್ಯಕನ್ಯೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − eight =
Remember me
