ನವದೆಹಲಿ:ಬೀದಿನಾಯಿಗಳನ್ನು ಕಂಡರೆ ಭಯ ಪಟ್ಟು ದೂರ ಓಡುವವರ ಮಧ್ಯೆ ಇಲ್ಲೊಂದು ಗುಂಪು ಮಾಡಿರುವ ಕೆಲಸ ನೋಡಿದ್ರೆ ನೀವೂ ಖಂಡಿತವಾಗಿಯೂ ಆಶ್ಚರ್ಯಪಡುತ್ತಿರಾ. ಇವರಿಗೆ ಇರುವ ಪ್ರಾಣಿಗಳ ಪ್ರೀತಿ ಸೋಶಿಯಲ್​​ ಮೀಡಿಯಾದಲ್ಲಿ ಸಖತ್​​ ವೈರಲ್​​ ಆಗಿದೆ.
ಇದನ್ನೂ ಓದಿ:ಶ್ವಾನ ಪಾಲಕರು ಬೇಕಾಗಿದ್ದಾರೆ!; ಅಬ್ಬಬ್ಬಾ..ಊಟ-ವಸತಿ ಜತೆ ಕೋಟಿ ರೂ. ಸಂಬಳ….
ಗೆಳೆಯರ ತಂಡವೊಂದು ಬೀದಿ ನಾಯಿಗೆ ಸೀಮಂತ ಮಾಡಿದ್ದು, ಅದರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾರೆ. ವೀಡಿಯೋ ನೋಡಿದ ನೆಟ್ಟಿಗರು ಗೆಳೆಯರ ಈ ತಂಡದ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ನಾಳೆಯಿಂದಲೇ ಅನ್ನಭಾಗ್ಯ ಯೋಜನೆ ಜಾರಿ: 5 ಕೆಜಿ ಅಕ್ಕಿ ಜತೆ ಖಾತೆಗೆ ಜಮಾ ಆಗಲಿದೆ ಹಣ
ಹುಡುಗ ಹುಡುಗಿಯರಿರುವ ಗೆಳೆಯರ ಬಳಗ ನಾಯಿಗೆ ಹೂವಿನ ಮಾಲೆಯನ್ನು ಹಾಕಿ ಅರಶಿಣ ಕುಂಕುಮ ಹಾಕಿ ಹಳದಿ ಬಣ್ಣದ ಶಾಲನ್ನು ಹೊದಿಸಿ ಅದರಿಷ್ಟದ ಆಹಾರ ನೀಡುತ್ತಾರೆ. ನಂತರ ಅದರೊಂದಿಗೆ ನಿಂತು ಗೆಳೆಯರು ಫೋಟೋ ತೆಗೆಸಿಕೊಂಡಿದ್ದಾರೆ. ಈ ವಿಡಿಯೋಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ:ಆದಿಪುರುಷ್​​ ಸಿನಿಮಾಗೆ ಟಕ್ಕರ್​ ನೀಡಲು ಮುಂದಿನ ವಾರದಿಂದ ಟಿವಿಯಲ್ಲಿ ಪ್ರಸಾರವಾಗಲಿದೆ ರಾಮಾಯಣ!
A post shared by Bharath Chandran (@a.bharath_c)
ಬೀದಿನಾಯಿಯೊಂದರ ‘ಬೇಬಿ ಶವರ್’ನ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಲೈಕ್‌ಗಳನ್ನು ಪಡೆಯುತ್ತಿದೆ. ಇನ್​ಸ್ಟಾಗ್ರಾಮ್​​ ಬಳಕೆದಾರ ಭರತ್ ಚಂದ್ರನ್ ಎಂಬ ವ್ಯಕ್ತಿ ಈ ಪೋಸ್ಟ್ ಮಾಡಿದ್ದು, “ಬೀದಿ ನಾಯಿಗಳ ಬಗ್ಗೆ ದ್ವೇಷ, ಅಸಹ್ಯ ಮತ್ತು ತಿರಸ್ಕಾರದಿಂದ ತುಂಬಿರುವ ಜಗತ್ತಿನಲ್ಲಿ, ಇಲ್ಲಿ ನಾವು ಬೇಬಿ ಶವರ್ ಅನ್ನು ಆಚರಿಸುತ್ತಿದ್ದೇವೆ. ಸುರಕ್ಷಿತ ಹೆರಿಗೆಯನ್ನು ಹೊಂದುತ್ತಾಳೆ. ನಾಯಿಮರಿಗಳಿಗೆ ಲಸಿಕೆ ಹಾಕಲಾಗುತ್ತದೆ ಮತ್ತು ದತ್ತು ಪಡೆಯಲು ನೀಡಲಾಗುತ್ತದೆ. ಪ್ರೀ-ಬುಕಿಂಗ್ ಓಪನ್ ಆಗಿದೆ ಎಂದು ಬರೆದುಕೊಂಡಿದ್ದಾರೆ. ನೆಟ್ಟಿಗರು ಈ ವಿಡಿಯೋ ನೋಟಿ ಮೆಚ್ಚುಗೆ ಸೂಚಿಸಿ ಕಾಮೆಂಟ್​​ ಮಾಡುತ್ತಿದ್ದಾರೆ.
ಎಲೆಕ್ಟ್ರಿಕ್ ವಾಹನಗಳಾಗಿ BMTC ಡೀಸೆಲ್ ಬಸ್ಸುಗಳ ಪರಿವರ್ತನೆ, ಮರುಬಳಕೆ; ತೈವಾನ್‌ ಕಂಪನಿಗಳ ಆಸಕ್ತಿ


ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:five × two =
Remember me
