ಬಲರಾಮಪುರ್​​ :ಉತ್ತರಪ್ರದೇಶದ ಬಲರಾಮಪುರ ಜಿಲ್ಲೆಯಲ್ಲಿ ಕರೊನಾ ರೋಗಿಯ ಶವವನ್ನು ಸೇತುವೆಯ ಮೇಲಿಂದ ನದಿಗೆ ಎಸೆಯುತ್ತಾ ಇಬ್ಬರು ಪುರುಷರು ಕ್ಯಾಮೆರಾ ಕಣ್ಣಿಗೆ ಸಿಕ್ಕುಬಿದ್ದಿದ್ದಾರೆ. ಪ್ಲಾಸ್ಟಿಕ್​ನಿಂದ ಸುತ್ತಿರುವ ಶವವನ್ನು ಸೇತುವೆಯ ಕಾಂಪೌಂಡ್​ ಮೇಲಿಟ್ಟು ಬಿಸಾಡಲು ಸಿದ್ಧವಾಗುತ್ತಿದ್ದ ದೃಶ್ಯದ ವಿಡಿಯೋ, ಜಾಲತಾಣದಲ್ಲಿ ವೈರಲ್ ​ಆದ ಹಿನ್ನೆಲೆಯಲ್ಲಿ ಪೊಲೀಸರು ಕೇಸು ದಾಖಲಿಸಿದ್ದಾರೆ.
ಕಳೆದ ದಿನಗಳಲ್ಲಿ ಗಂಗಾ ಮತ್ತು ಯಮುನಾ ನದಿಯಲ್ಲಿ ಶವಗಳು ತೇಲಿ ಬರುತ್ತಿದ್ದು ಅವು ಕರೊನಾ ರೋಗಿಗಳದ್ದೇ ಎಂಬ ಆತಂಕಕ್ಕೆ ಉತ್ತರಪ್ರದೇಶ ಮತ್ತು ಬಿಹಾರದ ಕೆಲವು ಗ್ರಾಮಗಳ ಜನರು ಈಡಾಗಿದ್ದರು. ಯಾವುದೇ ಶವವನ್ನು ನದಿಗೆ ಬಿಸಾಡಬಾರದೆಂದು ಅಧಿಕಾರಿಗಳು ಜನರನ್ನು ಆಗ್ರಹಿಸಿದ್ದಾರೆ. ಅಂತಹುದರಲ್ಲಿ ಅಂತ್ಯಕ್ರಿಯೆಗಾಗಿ ಕುಟುಂಬಸ್ಥರಿಗೆ ನೀಡಲಾಗಿದ್ದ ಶವವನ್ನು ಬಲರಾಮಪುರದ ಸೇತುವೆಯಿಂದ ರಪ್ತಿ ನದಿಗೆ ಬಿಸಾಡಿ ವಿಲೇವಾರಿ ಮಾಡಲು ಪ್ರಯತ್ನಿಸುತ್ತಿದ್ದ ಪ್ರಸಂಗ ಬೆಳಕಿಗೆ ಬಂದಿದೆ.
ಇದನ್ನೂ ಓದಿ:ನಡುಬೀದಿಯಲ್ಲಿ ಬಡಿಗೆ ಹಿಡಿದು ಬಡಿದಾಡಿಕೊಂಡ ಕುಟುಂಬಸ್ಥರು; ಆಸ್ತಿಗಾಗಿ ಅಕ್ಕಪಕ್ಕದವರ ಹೊಡೆದಾಟ..
ದಾರಿಹೋಕರೊಬ್ಬರು ಸೆರೆಹಿಡಿದಿರುವ ಈ ಕುರಿತಾದ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ. ಯುವ ಕಾಂಗ್ರೆಸ್​ ಅಧ್ಯಕ್ಷ ಬಿ.ವಿ.ಶ್ರೀನಿವಾಸ್​ ಅವರು, “ಕಸವನ್ನು ಎಸೆಯುತ್ತಿಲ್ಲ.. ನದಿಗೆ ಶವವನ್ನು ಎಸೆಯುತ್ತಿದ್ದಾರೆ. ಇದು ‘ಉತ್ತಮ ಪ್ರದೇಶ’ದ ಬಲರಾಮಪುರದ ಚಿತ್ರಣ” ಎಂದು ವ್ಯಂಗ್ಯ ಟಿಪ್ಪಣಿ ಬರೆದು ಟ್ವೀಟ್ ಮಾಡಿದ್ದಾರೆ.
ये 'कूड़ा' नही, नदी में लाश फेंकी जा रही है,तस्वीरें 'उत्तम-प्रदेश' के बलरामपुर की है…
pic.twitter.com/xiJPsYKB30
— Srinivas BV (@srinivasiyc)May 30, 2021

ಹೀಗೆ ಎಸೆಯಲ್ಪಟ್ಟ ಶವವು ರಾಜ್ಯದ ಸಿದ್ಧಾರ್ಥನಗರ ಜಿಲ್ಲೆಯ ಸೊಹ್ರತ್​ಗಡದ ನಿವಾಸಿಯಾಗಿದ್ದ ಪ್ರೇಂ ನಾಥ್ ಮಿಶ್ರ ಎಂಬುವರದಾಗಿತ್ತು ಎಂದು ಬಲರಾಮಪುರ ಮುಖ್ಯ ವೈದ್ಯಾಧಿಕಾರಿ ವಿಜಯ್ ಬಹದೂರ್ ಸಿಂಗ್ ಇಂದು ತಿಳಿಸಿದ್ದಾರೆ.
“ಮೇ 25 ರಂದು ಕೋವಿಡ್​ 19 ಸೋಂಕು ತಗುಲಿದ್ದ ಪ್ರೇಂನಾಥ್ ಮಿಶ್ರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೇ 28 ರಂದು ಅವರು ಮೃತಪಟ್ಟರು. ದೇಹವನ್ನು ಕೋವಿಡ್ ಪ್ರೊಟೊಕಾಲ್​ನಂತೆ ಕುಟುಂಬದ ಸದಸ್ಯರಿಗೆ ನೀಡಲಾಗಿತ್ತು. ವೈರಲ್​ ಆಗಿರುವ ವಿಡಿಯೋದಲ್ಲಿ ಶವವನ್ನು ರಪ್ತಿ ನದಿಗೆ ಬಿಸಾಡುತ್ತಿರುವುದನ್ನು ಕಾಣಬಹುದು” ಎಂದು ಸಿಂಗ್ ಹೇಳಿದ್ದಾರೆ. ಈ ಬಗ್ಗೆ ಕೊತ್ವಾಲಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದಿದ್ದಾರೆ.(ಏಜೆನ್ಸೀಸ್)
ಬಿಎಸ್​​ವೈ ನಿವಾಸಕ್ಕೆ ಶಾಸಕರ ನಿಯೋಗ ! ಯೋಗೇಶ್ವರ್​ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹ

ಭಾರತೀಯ ವಿದ್ಯಾರ್ಥಿನಿಗೆ ಯುಎಇ ಗೋಲ್ಡನ್ ವೀಸಾ !

‘ಮನ್​​ ಕಿ ಬಾತ್’​​ನಲ್ಲಿ ಬೆಂಗಳೂರಿನ ರೈಲ್ವೆ ಪೈಲೆಟ್​ಗೆ ಮೆಚ್ಚುಗೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + one =
Remember me
