ನವದೆಹಲಿ:ವೆಲ್ಸಪನ್​ ಇಂಡಿಯಾ ಸಿಇಒ ದೀಪಾಲಿ ಗೊಯೆಂಕಾ ಅವರು ತನ್ನ ಕಂಪನಿಯ ಉದ್ಯೋಗಿಗಳೊಂದಿಗೆ ಹೆಜ್ಜೆ ಹಾಕಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.
ಮಂಗಳವಾರ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಕಾಣಿಸಿಕೊಂಡಿದೆ. ವಿಡಿಯೋದಲ್ಲಿ ವೆಲ್ಸ್​ಪನ್​ ಇಂಡಿಯಾ ಸಿಇಒ ಮತ್ತು ಕಂಪನಿಯ ಜಂಟಿ ವ್ಯವಸ್ಥಾಪಕ ನಿರ್ದೇಶಕರು ಬಾಲಿವುಡ್​ನ ಸ್ಟ್ರೀಟ್​ ಡ್ಯಾನ್ಸರ್​ 3ಡಿ ಚಿತ್ರದ ಮುಕಾಬುಲ್ಲಾ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ವೇಳೆ ಉದ್ಯೋಗಿಗಳು ಕೂಡ ತಮ್ಮ ಕೆಲಸವನ್ನು ಬಿಟ್ಟು ಸಿಇಒ ಜತೆಗೆ ಹೆಜ್ಜೆ ಹಾಕಿದ್ದಾರೆ. ಕೊನೆಯಲ್ಲಿ ಒಬ್ಬರಿಗೊಬ್ಬರು ಚಪ್ಪಾಳೆ ತಟ್ಟುವ ಮೂಲಕ ವಿಡಿಯೋ ಕೊನೆಗೊಳ್ಳುತ್ತದೆ.
Rare to see a CEO dance and have fun in an office setting. That’s the way to create a happy culture@DipaliGoenka#welspun.pic.twitter.com/B6LAd2u3tr
— Harsh Goenka (@hvgoenka)February 18, 2020

ದೀಪಾಲಿ ಗೊಯೆಂಕಾ ಅವರ ವಿಡಿಯೋವನ್ನು ಲಕ್ಷಾಂತರ ಮಂದಿ ವೀಕ್ಷಣೆ ಮಾಡಿದ್ದು, ಆರೋಗ್ಯಯುತ ಕೆಲಸದ ಸಂಸ್ಕೃತಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಆರ್​ಪಿಜಿ ಎಂಟರ್ಪ್ರೈಸಸ್​ ಚೇರ್ಮನ್​ ಹರ್ಷ್​ ಗೊಯೆಂಕ ಅವರು ಕೂಡ “ಕರ್ತವ್ಯ ಸ್ಥಳದಲ್ಲಿ ಒಳ್ಳೆಯ ಸಂಸ್ಕೃತಿ” ಹಾಗೂ ಸಿಇಒ ಡ್ಯಾನ್ಸ್​ ಮಾಡುವಂತಹದು ಅಪರೂಪದ ಕ್ಷಣವೆಂದು ಹೊಗಳಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ದೀಪಾಲಿ ಗೊಯೆಂಕಾ ಅವರು ಧನ್ಯವಾದ ತಿಳಿಸಿ, ನಿಮ್ಮ ಕಚೇರಿಯಲ್ಲಿಯೂ ಇಂಥದ್ದೇ ಕ್ಷಣವನ್ನು ನೋಡಲು ಇಚ್ಛಿಸಿರುವುದಾಗಿ ತಿಳಿಸಿದ್ದಾರೆ.
Thanks for the shoutout@hvgoenka. Would love to see your#WorkPlaceHappy! 💃🏼
— Dipali Goenka (@DipaliGoenka)February 19, 2020

ದೀಪಾಲಿ ಗೊಯೆಂಕಾ ಅವರು ಕೂಡು ವಿಡಿಯೋವನ್ನು ಶೇರ್​ ಮಾಡಿಕೊಂಡಿದ್ದು, ಬಿಸಿನೆಸ್​ ಟೈಕೂನ್​ಗಳಾದ ಆನಂದ್​ ಮಹೀಂದ್ರಾ, ಗೌತಮ್​ ಅದಾನಿ ಮತ್ತು ಕಿರಣ್​ ಮಜೂಂದರ್​ ಶಾಗೆ ಟ್ಯಾಗ್​ ಮಾಡಿ, ಇದು ನನ್ನ ಕೆಲಸದ ಸ್ಥಳ. ನಿಮ್ಮ ಸ್ಥಳ ಹೇಗಿದೆ? ಎಂದು ಕೇಳಿದ್ದಾರೆ.
ಸದ್ಯ ದೀಪಾಲಿ ಗೊಯೆಂಕಾ ಅವರ ವಿಡಿಯೋ ಮಾತ್ರ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿದ್ದು, ಅನೇಕ ನೆಟ್ಟಿಗರು ಕಾಮೆಂಟ್​ಗಳ ಸುರಿಮಳೆಗೈದಿದ್ದಾರೆ.(ಏಜೆನ್ಸೀಸ್​)
Hi@anandmahindra@gautam_adani@kiranshawthis is my#WorkPlaceHappy. What’s yours?"https://t.co/Jn7aLZUWPl
— Dipali Goenka (@DipaliGoenka)February 19, 2020

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + one =
Remember me
