ನವದೆಹಲಿ:ತನ್ನ ಮಕ್ಕಳನ್ನು ಕಾಪಾಡಿಕೊಳ್ಳಲು ಎಷ್ಟು ತೊಂದರೆ ಆದರೂ ಸರಿಯೇ ಅದನ್ನು ಎದುರಿಸಲು ತಾಯಿ ತನ್ನ ಪ್ರಾಣವನ್ನೇ ಮುಡಿಪಾಗಿಡುತ್ತಾಳೆ ಎಂಬುದು ಅಕ್ಷರಶಃ ಸತ್ಯ. ಇದು ಮೂಕ ಪ್ರಾಣಿ-ಪಕ್ಷಿಗಳಿಗೂ ಹೊರತಾಗಿಲ್ಲ ಎಂಬುದಕ್ಕೆ ಈ ತಾಜಾ ಉದಾಹರಣೆ ಸಾಕ್ಷಿಯಾಗಿದೆ.
ಮರಕುಟಿಗ ಪಕ್ಷಿಯೊಂದು ತನ್ನ ಮರಿಯನ್ನು ಹಾವಿನ ದಾಳಿಯಿಂದ ರಕ್ಷಿಸಿಕೊಳ್ಳಲು ಅದರ ವಿರುದ್ಧ ಹೋರಾಡಿದ ವಿಡಿಯೋವನ್ನು ಭಾರತೀಯ ಅರಣ್ಯಾಧಿಕಾರಿ ಸುಸಾಂತ ನಂದಾ ಅವರು ಭಾನುವಾರವಷ್ಟೇ ತಮ್ಮ ಟ್ವಿಟರ್​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಸದ್ಯ ವಿಡಿಯೋ ಸಾಮಾಜಿಕ ಜಾಲತಾಣಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.
ಈ ಗ್ರಹದ ಮೇಲಿನ ಎಲ್ಲ ಶಕ್ತಿಯು ತಾಯಿಯ ಪ್ರೀತಿಯನ್ನು ಎಂದಿಗೂ ಸೋಲಿಸಲಾಗದು. ಮರಕುಟಿಕಗವೊಂದು ತನ್ನ ಮರಿಗಳನ್ನು ಕಾಪಾಡಲು ಹಾವಿನೊಂದಿಗೆ ಸೆಣಸಾಡಿದೆ ಎಂದು ವಿಡಿಯೋ ಕುರಿತು ಬರೆದುಕೊಂಡಿದ್ದಾರೆ.
27 ಸೆಕೆಂಡಿನ ವಿಡಿಯೋದಲ್ಲಿ ಮರದ ಪೊಟರೆಯಲ್ಲಿ ಕುಳಿತ ಮರಕುಟಿಗವೊಂದು ಏನನ್ನೋ ಕುಟುಕುತ್ತಿರುತ್ತದೆ. ತಕ್ಷಣ ನೋಡಿದರೆ ಹಾವೊಂದು ಪೊಟರೆಯಿಂದ ಧುತ್ತನೇ ಹೊರ ಬರುತ್ತದೆ. ಬಳಿಕ ಹಾವು ಮತ್ತು ಮರಕುಟಿಗ ನಡುವೆ ಕಾದಾಟ ನಡೆಯುತ್ತದೆ. ಕೊನೆಗೂ ಹಾವನ್ನು ಮಣಿಸಿದ ಮರಕುಟಿಗ ತನ್ನ ಮರಿಗಳನ್ನು ಯಶಸ್ವಿಯಾಗಿ ರಕ್ಷಿಸಿಕೊಳ್ಳುತ್ತದೆ.
ಈ ಅದ್ಭುತ ದೃಶ್ಯವನ್ನು ಈಗಾಗಲೇ 11 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಣೆ ಮಾಡಿದ್ದು, ಸುಮಾರು 300ಕ್ಕೂ ಹೆಚ್ಚು ರೀಟ್ವೀಟ್​ಗಳನ್ನು ಪಡೆದುಕೊಂಡಿದೆ. ವಿಡಿಯೋ ನೋಡಿ ಅಚ್ಚರಿ ವ್ಯಕ್ತಪಡಿಸಿರುವ ನೆಟ್ಟಿಗರು ತಾಯಿಗಿಂತ ದೇವರಿಲ್ಲ ಎಂದು ಕಾಮೆಂಟ್​ಗಳ ಸುರಿಮಳೆಗೈದಿದ್ದಾರೆ.(ಏಜೆನ್ಸೀಸ್​)
All the forces on this planet, will never beat that of a mothers love.Wood pecker saving its chicks after a fierce air duel with the snake👍🏻pic.twitter.com/mvBo7OWN74
— Susanta Nanda (@susantananda3)March 1, 2020

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + 1 =
Remember me
