ನವದೆಹಲಿ:ಕಾಂಗ್ರೆಸ್​ ಸಂಸದ ರಾಹುಲ್​ ಗಾಂಧಿ ಅವರು ತಮ್ಮ ತಾಯಿ ಹಾಗೂ ಕಾಂಗ್ರೆಸ್​ ಅಧಿನಾಯಕಿ ಸೋನಿಯಾ ಗಾಂಧಿ ಮೇಲೆ ಎಷ್ಟೊಂದು ಪ್ರೀತಿ ಇಟ್ಟುಕೊಂಡಿದ್ದಾರೆ ಎಂಬುದನ್ನು ಹೊಸದಾಗಿ ಹೇಳಬೇಕಿಲ್ಲ. ಭಾರತ್​ ಜೋಡೋ ಯಾತ್ರೆ ಸಮಯದಲ್ಲಿ ತಾಯಿ-ಮಗನ ಬಾಂಧವ್ಯ ಸಾರುವ ಸಾಕಷ್ಟು ಫೋಟೋಗಳು ವೈರಲ್​ ಆಗಿದ್ದವು. ಅದರಲ್ಲಿ ವಿಶೇಷವಾಗಿ ತಾಯಿಯ ಶೂ ಲೇಸ್​ ಕಟ್ಟುವ ಫೋಟೋ ಎಲ್ಲರ ಗಮನ ಸೆಳೆದಿತ್ತು. ಇದೀಗ ಮತ್ತೊಂದು ವಿಡಿಯೋ ತಾಯಿ-ಮಗನ ಬಾಂಧವ್ಯಕ್ಕೆ ತಾಜಾ ಸಾಕ್ಷಿಯಾಗಿದೆ.
ಹೊಸ ವರ್ಷವನ್ನು ಸ್ವಾಗತಿಸಲು ಇಡೀ ಜಗತ್ತೇ ಎದುರು ನೋಡುತ್ತಿದೆ. ಈಗಾಗಲೇ ನ್ಯೂಜಿಲೆಂಡ್​ನ ಆಕ್ಲೆಂಡ್​ನಲ್ಲಿ ಹೊಸ ವರ್ಷಾಚರಣೆ ನಡೆದಿದೆ. ಭಾರತದಲ್ಲಿ ಕ್ಷಣಗಣನೆ ಆರಂಭವಾಗಿದೆ. ಇದರ ನಡುವೆ ರಾಹುಲ್​ ಗಾಂಧಿ ಅವರು ತಮ್ಮ ಪ್ರೀತಿಯ ಅಮ್ಮ ಸೋನಿಯಾ ಗಾಂಧಿ ಜತೆಗೂಡಿ ವಿಶೇಷ ಖಾದ್ಯವೊಂದನ್ನು ತಯಾರಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.
ಕಿತ್ತಳೆ ಮಾರ್ಮಲೇಡ್ ಬಗ್ಗೆ ಅನೇಕರು ಕೇಳಿರುತ್ತೀರಿ. ಈ ವಿಶೇಷ ಖಾದ್ಯವನ್ನು ರಾಹುಲ್​ ಗಾಂಧಿ ಅವರು ಸ್ವತಃ ಕೈಯ್ಯಾರೆ ಸಿದ್ಧಪಡಿಸಿದ್ದಾರೆ. ತಾಯಿಯೂ ಸಾಥ್​ ನೀಡಿದ್ದಾರೆ. ವಾಸ್ತವವಾಗಿ ಈ ಪಾಕವಿಧಾನವನ್ನು ರಾಹುಲ್ ಅವರು ತಮ್ಮ ಸಹೋದರಿ ಪ್ರಿಯಾಂಕಾ ವಾದ್ರಾ ಅವರಿಂದ ಕಲಿತಿದ್ದಾರೆ. ಇದಕ್ಕೆ ಸಂಬಂಧಿಸಿದ 5 ನಿಮಿಷದ ವಿಡಿಯೋವನ್ನು ತಮ್ಮ ಯೂಟ್ಯೂಬ್​ ಚಾನೆಲ್​ನಲ್ಲಿ ಹಂಚಿಕೊಂಡಿದ್ದಾರೆ. ಕಿತ್ತಳೆ ಹಣ್ಣಿನ ಮಾರ್ಮಲೇಡ್ ನನ್ನ ಅಮ್ಮನ ನೆಚ್ಚಿನ ಜಾಮ್ ಆಗಿದೆ ಮತ್ತು ಪ್ರಿಯಾಂಕಾ, ಕಾಲಾನಂತರದಲ್ಲಿ ಪಾಕವಿಧಾನದಲ್ಲಿ ನನ್ನನ್ನು ಪರಿಪೂರ್ಣಗೊಳಿಸಿದ್ದಾರೆ. ಈಗ ಈ ಸಂತೋಷಕರ ಜಾಡಿಗಳನ್ನು ತುಂಬಲು ನನ್ನ ಸರದಿ ಎಂದು ರಾಹುಲ್​ ಬರೆದುಕೊಂಡಿದ್ದಾರೆ.
ವಿಡಿಯೋದಲ್ಲಿ ಏನಿದೆ?ವಿಡಿಯೋದಲ್ಲಿ ಸೋನಿಯಾ ಮತ್ತು ರಾಹುಲ್ ತೋಟದಿಂದ ಕಿತ್ತಳೆ ಹಣ್ಣು ಕೀಳಲು ಬುಟ್ಟಿಯೊಂದಿಗೆ ಹೋಗುತ್ತಿರುವುದನ್ನು ಕಾಣಬಹುದು. ಬುಟ್ಟಿಯಲ್ಲಿ ತಂದ ಹಣ್ಣುಗಳನ್ನು ಅಡುಗೆಮನೆಯಲ್ಲಿ ಸ್ವಚ್ಛಗೊಳಿಸಲಾಗುತ್ತದೆ ಮತ್ತು ಕಿತ್ತಳೆ ಮಾರ್ಮಲೇಡ್ ರೆಸಿಪಿ ಮಾಡಲು ಆರಂಭಿಸುತ್ತಾರೆ. ಅಡುಗೆಮನೆಯಲ್ಲಿ ಇಬ್ಬರ ನಡುವೆ ನಡೆದ ಸಂಭಾಷಣೆಯಲ್ಲಿ ಸೋನಿಯಾ ಅವರು ಭಾರತೀಯ ಅಡುಗೆಗಳನ್ನು ಕಲಿಯಲು ಬಹಳ ಸಮಯ ತೆಗೆದುಕೊಂಡಿದ್ದರ ಬಗ್ಗೆ ತಿಳಿಸಿದರು. ಅಲ್ಲದೆ, ವಿಶೇಷವಾಗಿ ಕರಿಬೇವನ್ನು ಹೇಗೆ ತಿನ್ನಬೇಕೆಂದು ಹೇಳಿದರು. ನಂತರ ಸಂವಾದದಲ್ಲಿ ರಾಹುಲ್, ಬಿಜೆಪಿಯವರು ಈ ಜಾಮ್ ಕೇಳಿದರೆ ಕೊಡ್ತೀರಾ ಅಮ್ಮಾ? ಎಂದು ಕೇಳಿದರು. ಅದಕ್ಕೆ ಸೋನಿಯಾ, ಅವರು ನಮ್ಮ ಮೇಲೆಯೇ ಎಸೆಯುತ್ತಾರೆ ಎಂದು ಹೇಳಿದಾಗ ಇಬ್ಬರೂ ಜೋರಾಗಿ ನಗುತ್ತಾರೆ.

ರೆಸಿಪಿ ಪೂರ್ಣಗೊಂಡ ಬಳಿಕ ಅದನ್ನು ಗಾಜಿನ ಬಾಟಲಿಗಳಲ್ಲಿ ತುಂಬಿಸಲಾಗುತ್ತದೆ. ಬ್ರೌನ್ ಪೇಪರ್ ಮೇಲೆ ‘ಪ್ರೇಮ್ತೋ ಸೋನಿಯಾ, ರಾಹುಲ್’ ಎಂದು ಬರೆದ ಸಂದೇಶವನ್ನು ಬಾಟಲಿಗಳ ಮೇಲೆ ಅಂಟಿಸಲಾಗಿದೆ. ಕಾಂಗ್ರೆಸ್ ಭಾರತ್ ಜೋಡೋ ಯಾತ್ರಾ ಪ್ರಚಾರದ ಲಾಂಛನವು ವಿಡಿಯೋ ಉದ್ದಕ್ಕೂ ಗೋಚರಿಸುತ್ತದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ತಾಯಿ ಮತ್ತು ಮಗ ಎಷ್ಟು ಸರಳ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.(ಏಜೆನ್ಸೀಸ್​)
VIRAL VIDEO | ಅಳಿಲಿಗೆ ಬಾಟಲಿಯಿಂದ ನೀರುಣಿಸಿದ ವ್ಯಕ್ತಿ; ಹೃದಯಸ್ಪರ್ಶಿ ವಿಡಿಯೋ ವೈರಲ್

40 ನಿಮಿಷ ಸತ್ತು ಬದುಕಿದ ಮಹಿಳೆ! ಎಚ್ಚರಗೊಳ್ಳತ್ತಲೇ ಬಿಚ್ಚಿಟ್ಟಳು ಭಯಾನಕ ಸಂಗತಿ, ವೈದ್ಯರೇ ಶಾಕ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − 6 =
Remember me
