ನವದೆಹಲಿ :ಜಪಾನಿನ ರಾಜಧಾನಿಯಲ್ಲಿ ಒಲಿಂಪಿಕ್ಸ್​ನಲ್ಲಿ ಭಾರತದ ಕ್ರೀಡಾಪಟುಗಳು ಬಾಕ್ಸಿಂಗ್ ಮತ್ತು ಕುಸ್ತಿ ಪಂದ್ಯಗಳನ್ನು ಆಡುತ್ತಿದ್ದರೆ, ಭಾರತದ ರಾಜಧಾನಿಯಲ್ಲಿ ರಾಜಕಾರಣಿಗಳು ಮಾತಿನ ಪಂದ್ಯಾವಳಿಯಲ್ಲಿ ತೊಡಗಿದ್ದಾರೆ! ಈ ರೀತಿಯಾಗಿ ಘರ್ಷಣೆಯಲ್ಲಿ ತೊಡಗಿದ ಪಂಜಾಬ್​ನ ಇಬ್ಬರು ವಿಪಕ್ಷ ಸಂಸದರ ವಾಗ್ವಾದದ ದೃಶ್ಯವು ಮಾಧ್ಯಮದವರ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ನಿನ್ನೆಯಷ್ಟೆ, ಕಾಂಗ್ರೆಸ್ ನಾಯಕ ರಾಹುಲ್​ ಗಾಂಧಿ ಅವರು ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಎಲ್ಲಾ ವಿರೋಧಪಕ್ಷಗಳೂ ಒಂದಾಗಿವೆ ಎಂದು ತೋರಿಸಲು ಬ್ರೇಕ್​ಫಾಸ್ಟ್​ ಮೀಟಿಂಗ್ ಇಟ್ಟುಕೊಂಡಿದ್ದರು. ಆದರೆ ಇಂದು ಬೆಳಿಗ್ಗೆ ದೆಹಲಿಯಲ್ಲಿ ಸಂಸತ್ತಿನ ಹೊರಗೆ ಕಾಂಗ್ರೆಸ್​ನ ರವನೀತ್​ ಸಿಂಗ್ ಬಿಟ್ಟು ಮತ್ತು ಅಕಾಲಿ ದಳದ ಹರಸಿಂರತ್ ಕೌರ್​ ಬಾದಲ್​, ಸಣ್ಣ ಜಗಳವನ್ನೇ ಪ್ರದರ್ಶಿಸಿದ್ದಾರೆ.
#WATCH| Delhi: A verbal spat broke out between Shiromani Akali Dal MP Harsimrat Kaur Badal and Congress MP Ravneet Singh Bittu over Central Government's three Farm Laws.pic.twitter.com/y9oAykOzy1
— ANI (@ANI)August 4, 2021

ವಿವಾದಿತ ಕೃಷಿ ಕಾನೂನುಗಳ ವಿರುದ್ಧ ಫಲಕಗಳನ್ನು ಹಿಡಿದು ನಿಂತಿದ್ದ ಅಕಾಲಿ ದಳದ ಮಾಜಿ ಸಚಿವೆ ಹರಸಿಂರತ್​ ಕೌರ್​​ ಅವರತ್ತ ಬೆಟ್ಟು ಮಾಡಿದ ರವನೀತ್​ ಸಿಂಗ್ ಬಿಟ್ಟು ಅವರು, “ಕೇಂದ್ರ ಸಂಪುಟವು (ಕೃಷಿ)ಮಸೂದೆಯನ್ನು ಈಕೆ ಸಚಿವರಾಗಿದ್ದಾಗಲೇ ಪಾಸ್ ಮಾಡಿತು. ಇವರು (ಅಕಾಲಿ ದಳ) ಡ್ರಾಮಾ ಮಾಡುವುದನ್ನು ನಿಲ್ಲಿಸಬೇಕು. ಕಾನೂನಿನ ವಿರುದ್ಧ ಸಚಿವರಾಗಿದ್ದಾಗ ಇವರು ಒಂದೂ ಮಾತನಾಡಲಿಲ್ಲ” ಎಂದು ಸುದ್ದಿಗಾರರಿಗೆ ಹೇಳಿದರು.
ಇದನ್ನೂ ಓದಿ:ಬೊಮ್ಮಾಯಿ ಸಂಪುಟದಲ್ಲಿ ಬೆಣ್ಣೆನಗರಿಗಿಲ್ಲ ಸಚಿವ ಸ್ಥಾನ
ಕೌರ್​ ಅವರು ಕಳೆದ ವರ್ಷ ಕೃಷಿ ಕಾನೂನುಗಳ ಬಗ್ಗೆ ಪ್ರತಿಭಟನೆ ಹೆಚ್ಚಿದ ನಂತರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಕಾಂಗ್ರೆಸ್​ ನಾಯಕನ ಮಾತಿಗೆ ಪ್ರತಿಕ್ರಿಯಿಸಿದ ಕೌರ್​, “ದಯವಿಟ್ಟು ಅವರನ್ನು ಕೇಳಿ…. ಅದೆಲ್ಲಾ ನಡೆಯುತ್ತಿರುವಾಗ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಎಲ್ಲಿದ್ದರು? ಈ ಪಾರ್ಟಿಯು(ಕಾಂಗ್ರೆಸ್) ವಾಕೌಟ್​ ನಡೆಸುವ ಮೂಲಕ ಮಸೂದೆಗಳ ಅಂಗೀಕಾರಕ್ಕೆ ಸಹಾಯ ಮಾಡಿದವು. ಇವರು ಸುಳ್ಳು ಹೇಳುವುದನ್ನು ನಿಲ್ಲಿಸಬೇಕು” ಎಂದರು.
ಈ ಸಂಸದರ ಕೂಗಾಟವನ್ನೆಲ್ಲಾ ದಾಖಲಿಸಿಕೊಂಡ ಮಾಧ್ಯಮದವರು, ಸರ್ಕಾರದ ವಿರುದ್ಧ ವಿಪಕ್ಷಗಳು ಒಂದಾಗಿ ನಿಲ್ಲುವುದಿಲ್ಲವೇ ಎಂದದ್ದಕ್ಕೆ, ಕಾಂಗ್ರೆಸ್ ಸಂಸದ ಬಿಟ್ಟು, “ಏನು ಏಕತೆ? ಇವರು(ಅಕಾಲಿದಳ) ಮಸೂದೆಗಳನ್ನು ಪಾಸ್ ಮಾಡಿಸಿದರು.. ಇವರೊಂದಿಗೆ ಏನು ಏಕತೆ? ಐದು ದಿನಗಳಾದವು… ಅವರನ್ನು ಕೇಳಿ ಪಕ್ಷದ ಮುಖ್ಯಸ್ಥ ಸುಖಬೀರ್​ ಸಿಂಗ್ ಬಾದಲ್ ಎಲ್ಲಿದ್ದಾರೆ ಅಂತ” ಎಂದು ಹೇಳಿ ಒಳನಡೆದರು.(ಏಜೆನ್ಸೀಸ್)
ಬೊಮ್ಮಾಯಿ ಸಂಪುಟದಲ್ಲಿ ಬೆಣ್ಣೆನಗರಿಗಿಲ್ಲ ಸಚಿವ ಸ್ಥಾನ

ಒಲಿಂಪಿಕ್ಸ್​: ಮೊದಲನೇ ಎಸೆತದಲ್ಲೇ ಫೈನಲ್ಸ್​​ಗೆ ಆಯ್ಕೆಯಾದ ಭಾರತದ ನೀರಜ್​ ಚೋಪ್ರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − 14 =
Remember me
