ಪಟ್ನಾ:‘ಯಾರೇ ಕೂಗಾಡಲಿ, ಊರೇ ಹೋರಾಡಲಿ ನಿನ ನೆಮ್ಮದಿಗೆ ಭಂಗವಿಲ್ಲ! ಎಮ್ಮೇ… ನಿನಗೆ ಸಾಟಿ ಇಲ್ಲ’ ಎಂದು ಡಾ. ರಾಜ್​ಕುಮಾರ್​ ಅವರು ಚಿತ್ರದಲ್ಲಿ ಹಾಡಿ ಕುಣಿದಿದ್ದು ನೀವು ನೋಡಿದ್ದೀರಿ. ಈಗ ಇಂಧನಗಳ ಬೆಲೆ ಹೆಚ್ಚಾಗಿದೆ ಎನ್ನುತ್ತಾ ರಾಜಕಾರಣಿ ಒಬ್ಬರು, ಎಮ್ಮೆಯ ಸವಾರಿ ಮಾಡಿಕೊಂಡು ಚುನಾವಣಾ ಕಣ ಪ್ರವೇಶಿಸಿರುವುದನ್ನು ನೋಡಿ!
ಹೌದು! ಪಂಚಾಯತಿ​ ಚುನಾವಣೆ ಅಭ್ಯರ್ಥಿಯೊಬ್ಬರು, ಎಮ್ಮೆಯ ಮೇಲೆ ಕುಳಿತುಕೊಂಡು ಬಂದು ನಾಮಪತ್ರ ಸಲ್ಲಿಸಿರುವ ಕುತೂಹಲಕಾರಿ ಘಟನೆ ಬಿಹಾರದಲ್ಲಿ ನಡೆದಿದೆ. ಕಟಿಹಾರ್​ ಜಿಲ್ಲೆಯ ರಾಮಪುರ ಪಂಚಾಯತ್​ ಸದಸ್ಯನಾಗಲು ಬಯಸಿರುವ ಆಜಾದ್​ ಅಲಂ ಎಂಬುವರೇ ಈ ಅಭ್ಯರ್ಥಿ.
#WATCH| Bihar Panchayat Polls 2021: Azad Alam, a candidate from Katihar district's Rampur panchayat arrived to file his nomination on a buffalo yesterdaypic.twitter.com/CBIF0bbqPl
— ANI (@ANI)September 13, 2021

ಹಲವಾರು ಸಮರ್ಥಕರೊಂದಿಗೆ ರಸ್ತೆಯಲ್ಲಿ ಎಮ್ಮೆಯ ಮೇಲೆ ಕುಳಿತು ಮೆರವಣಿಗೆ ಬಂದ ಅಲಂ ಅವರು, “ನಾನು ಗೋವುಗಳನ್ನು ಸಾಕುವವನು. ನನಗೆ ಪೆಟ್ರೋಲ್​ ಅಥವಾ ಡೀಸೆಲ್​ ಬೆಲೆ ತೆರಲು ಸಾಧ್ಯವಿಲ್ಲ. ಅದಕ್ಕೇ ಎಮ್ಮೆಯ ಮೇಲೆ ಬಂದಿದ್ದೇನೆ” ಎಂದು ಹೇಳಿದ್ದಾರೆಂದು ಎಎನ್​ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ರಾಜ್ಯದಲ್ಲಿ ಪಂಚಾಯಿತಿ ಚುನಾವಣೆಗಳ ಪ್ರಕ್ರಿಯೆ ಆರಂಭವಾಗಿದ್ದು, ಸೆಪ್ಟೆಂಬರ್ 24 ರಿಂದ ಡಿಸೆಂಬರ್​ 12 ರವರೆಗೆ 11 ಹಂತಗಳಲ್ಲಿ ಮತದಾನ ನಡೆಯಲಿದೆ.(ಏಜೆನ್ಸೀಸ್)
ಗುಜರಾತ್​ ನೂತನ ಸಿಎಂ ಆಗಿ ಭೂಪೇಂದ್ರಭಾಯ್​ ಪಟೇಲ್​ ಆಯ್ಕೆ

ಹೃದಯ, ಶ್ವಾಸಕೋಶಗಳಿಗೆ ಬಲ ನೀಡುವ ಯೋಗಾಸನವಿದು; ಹೆದೆಯೇರಿಸಿದ ಬಿಲ್ಲಿನಂತೆ ಕಾಣುವ ಭಂಗಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × three =
Remember me
