ಭೋಪಾಲ್​:ಮುಸ್ಲಿಂ ಮಹಿಳೆಗೆ ಡ್ರಾಪ್​ ನೀಡುತ್ತಿದ್ದ ಹಿಂದೂ ಪುರುಷನ ಬೈಕು ನಿಲ್ಲಿಸಿ ಹಲ್ಲೆ ಮಾಡಿದ್ದ ಪ್ರಕರಣ ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದಿತ್ತು. ಅದೇ ಮಾದರಿಯಲ್ಲಿ ಹಿಂದೂ ಯುವಕನೊಂದಿಗೆ ಹೋಗುತ್ತಿದ್ದ ಯುವತಿಯೊಬ್ಬಳ ಬುರ್ಖಾ ತೆಗೆಸಿರುವ ನೈತಿಕ ಗೂಂಡಾಗಿರಿಯ ಪ್ರಸಂಗ ಮಧ್ಯಪ್ರದೇಶದಿಂದ ವರದಿಯಾಗಿದೆ.
ರಾಜ್ಯದ ರಾಜಧಾನಿ ಭೋಪಾಲ್​ನ ಇಸ್ಲಾಮ್​ ನಗರದಲ್ಲಿ ಸ್ಕೂಟರಿನಲ್ಲಿ ಹೋಗುತ್ತಿದ್ದ ಯುವಕ-ಯುವತಿಯನ್ನು ಕೆಲವು ಮಂದಿ ಅಡ್ಡಗಟ್ಟಿದ್ದಾರೆ. ಹಿಂದೂ ಯುವಕನೊಂದಿಗೆ ಮುಸ್ಲಿಂ ಯುವತಿ ಹೋಗುತ್ತಿದ್ದಾಳೆಂಬ ಅನುಮಾನದಲ್ಲಿ ಆಕೆಗೆ ಬುರ್ಖಾ ತೆಗೆಯಿರಿ ಎಂದು ಗದರಿಸಿದ್ದಾರೆ. ಗುಂಪಿನಲ್ಲಿ ಒಬ್ಬ ನಮ್ಮ ಕೋಮಿಗೆ ನೀವು ಕೆಟ್ಟ ಹೆಸರು ತರುತ್ತಿದ್ದೀರಿ ಎಂದು ಹಿಂದಿಯಲ್ಲಿ ಹೇಳುತ್ತಿರುವಂತೇ ಯುವತಿಯು ಅಳುತ್ತಾ ಬುರ್ಖಾ ಬಿಚ್ಚಿಕೊಡುವುದು ವಿಡಿಯೋದಲ್ಲಿ ದಾಖಲಾಗಿದೆ.
A girl was forced to remove her burkha as the people suspected that the man on whose scooter she was riding pillion was a Hindu, in Islam Nagar, Bhopal on Saturday afternoon@ndtv@ndtvindiapic.twitter.com/66QPE5OJax
— Anurag Dwary (@Anurag_Dwary)October 16, 2021

ಆಕೆಯ ಮುಖಕ್ಕೆ ಸುತ್ತಿದ ಹಿಜಾಬ್​​ಅನ್ನೂ ತೆಗೆಯಿರಿ, ಎಲ್ಲರಿಗೂ ನೀವ್ಯಾರು ಎಂದು ಗೊತ್ತಾಗಲಿ ಎಂದು ನೈತಿಕ ಪೊಲೀಸ್​ಗಿರಿ ಮಾಡುವ ಆ ಜನರಿಗೆ ಬಿಟ್ಟುಬಿಡಿ ಎಂದು ಯುವಕ ಕೇಳಿಕೊಳ್ಳುತ್ತಿರುವುದೂ ದಾಖಲಾಗಿದೆ. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಈ ವರ್ತನೆಯನ್ನು ಖಂಡಿಸಿದ್ದಾರೆ.
ಸ್ಕೂಟರು ನಿಲ್ಲಿಸಿ ಗೂಂಡಾಗಿರಿ ಮಾಡಿದ ಇಬ್ಬರು ಪುರುಷರನ್ನು ಬಂಧಿಸಲಾಯಿತು. ಆದರೆ, ಯುವತಿಯು ದೂರು ನೀಡಲು ನಿರಾಕರಿಸಿದ ಕಾರಣ, ಯಾವುದೇ ಪ್ರಕರಣ ದಾಖಲಾಗಿಲ್ಲ. ಆದ್ದರಿಂದ ಮತ್ತೊಮ್ಮೆ ಈ ರೀತಿಯ ಕೃತ್ಯಗಳನ್ನು ಎಸಗದಂತೆ ಎಚ್ಚರಿಕೆ ನೀಡಿ ಬಿಡುಗಡೆ ಮಾಡಲಾಯಿತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿರುವುದಾಗಿ ವರದಿ ಹೇಳಿದೆ.(ಏಜೆನ್ಸೀಸ್)
ಬಿಲ್​ ಗೇಟ್ಸ್​ ಪುತ್ರಿಯ​ ವಿವಾಹ: ಈಜಿಪ್ಟಿನ ಕುದುರೆ ಸವಾರನ ಕೈಹಿಡಿದ ಜೆನ್ನಿಫರ್​

ಪ್ರೀತಿಸಿ ಮದುವೆಯಾದವಳ ಮೇಲೇ ಸಂಶಯ; ನಡೆದೇ ಹೋಯ್ತು ದುರಂತ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + 7 =
Remember me
