ಘಾಜಿಯಾಬಾದ್​ :ವಿದ್ಯುತ್ ಕಳವು ಮಾಡುತ್ತಿದ್ದ ಉತ್ತರಪ್ರದೇಶದ ನಿವಾಸಿಯೊಬ್ಬ ದಾಳಿಗೆ ಬಂದ ಇಲಾಖಾ ಅಧಿಕಾರಿಗಳಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುತ್ತಾ, ಕ್ಯಾಮೆರಾ ಕಣ್ಣಿಗೆ ಸಿಕ್ಕಿಬಿದ್ದಿದ್ದಾನೆ. ಯಾರಿಗೂ ಗೊತ್ತಾಗದಂತೆ ತಾನು ಅಕ್ರಮವಾಗಿ ಏರ್ಪಡಿಸಿದ್ದ ಕಳ್ಳಸಂಪರ್ಕವನ್ನು ತುಂಡರಿಸಲು ಹೋದ ವಿದ್ಯುತ್​ ಕಳ್ಳನ ನಗೆ ತರಿಸುವ ವಿಡಿಯೋ ತುಣುಕು ಜಾಲತಾಣದಲ್ಲಿ ವೈರಲ್ ಆಗಿದೆ.
ಯುಪಿಯ ಘಾಜಿಯಾಬಾದ್​​ನ ಮುರಾದ್​ನಗರ್​ ಪ್ರದೇಶದಲ್ಲಿ ಕೆಲವು ನಿವಾಸಿಗಳು ಅಕ್ರಮವಾಗಿ ವಿದ್ಯುತ್ ವೈರ್​ಗಳಿಗೆ ಕೇಬಲ್​ ಜೋಡಿಸಿ ವಿದ್ಯುತ್​ ಕದಿಯುತ್ತಿದ್ದ ಸುಳಿವು ಬಂದಿತ್ತು. ಈ ಮೇರೆಗೆ ವಿದ್ಯುತ್ ಇಲಾಖೆ ಅಧಿಕಾರಿಗಳು ಮನೆಯೊಂದರ ಮೇಲೆ ದಾಳಿ ನಡೆಸಲು ಬಂದರು. ಹೀಗೆ ಮನೆ ಬಾಗಿಲಿಗೆ ಬಂದು ನಿಂತ ಅಧಿಕಾರಿಗಳಿಗೆ ಕದ ತೆರೆಯದೆ, ನಿವಾಸಿಯೊಬ್ಬ ಮೆಲ್ಲಗೆ ಟೆರೇಸ್​ ಮೇಲೆ ಹೋಗಿ, ತೆವಳುತ್ತಾ, ತಾನು ಜೋಡಿಸಿಟ್ಟಿದ್ದ ಕಳ್ಳ ಸಂಪರ್ಕವನ್ನು ತುಂಡರಿಸಲು ಪ್ರಯತ್ನಿಸಿದ.
मामला मुरादनगर का बताते हैं। इस घर में बिजली चोरी हो रही थी। चेकिंग टीम इस व्यक्ति को दरवाजा खोलने के लिए आवाज लगाई, परंतु दरवाजा नहीं खुला। बिजली चोरी संदेह होने पर लाइनमैन को बराबर वाले घर पर चढ़कर वीडियोग्राफी कर रहा था। फिर देखिए क्या हुआ!!@ankushtofficialpic.twitter.com/f7gLyhXyJK
— SANJAY TRIPATHI (@sanjayjourno)July 13, 2021

ಆದರೆ, ಇಲಾಖೆಯ ಲೈನ್​ಮನ್​ ಒಬ್ಬರು ಒಂದು ಹೆಜ್ಜೆ ಮುಂದಾಗಿ, ಪಕ್ಕದ ಮನೆಯ ಟೆರೇಸಿನಿಂದ ಬಂದು ವಿಡಿಯೋ ಮಾಡುತ್ತಿದ್ದುದು ಆತನಿಗೆ ಗೊತ್ತಿರಲಿಲ್ಲ. ವಿದ್ಯುತ್​ ಕಳ್ಳನು ತನ್ನ ಕಳ್ಳತನದ ಪುರಾವೆಯನ್ನು ನಾಶಪಡಿಸಿ ಪಾರಾಗುವ ಪ್ರಯತ್ನದಲ್ಲಿದ್ದಾಗ, ಅವನನ್ನು ರೆಡ್​ ಹ್ಯಾಂಡೆಡ್​ ಆಗಿ ಹಿಡಿದ ಲೈನ್​ಮನ್​, ‘ನಾನು ಇಲ್ಲೇ ನಿಂತಿದ್ದೇನಪ್ಪ’ ಎಂದು ಹಿಂದಿ ಭಾಷೆಯಲ್ಲಿ ಉದ್ಗರಿಸುವುದು ವಿಡಿಯೋದಲ್ಲಿ ಕೇಳಿಬಂದಿದೆ.(ಏಜೆನ್ಸೀಸ್)
ಡಿಕೆಶಿ ಮುಂದೆಯೇ ‘ಮುಂದಿನ ಸಿಎಂ ಸಿದ್ದರಾಮಯ್ಯ’ ಎಂಬ ಕೂಗು!

ಕೇಂದ್ರ ಸರ್ಕಾರಿ ನೌಕರರಿಗೆ ಶುಭ ಸುದ್ದಿ: ಶೇ. 28 ಕ್ಕೆ ಏರಿತು ಡಿಎ, ಡಿಆರ್​!

ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲು ಹೈಕೋರ್ಟ್​ ಗ್ರೀನ್ ಸಿಗ್ನಲ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + 13 =
Remember me
