ಲಖನೌ:ತರಗತಿ ನಡೆಸುವ ಬದಲು ಶಾಲೆಯ ಮುಖ್ಯ ಶಿಕ್ಷಕಿಯೊಬ್ಬರು ಚಕ್ಕರ್ ಹಾಕಿ ಸ್ಕೂಲಿನ ಆವರಣದಲ್ಲೇ ಫೇಶಿಯಲ್​ ಮಾಡಿಸಿಕೊಂಡು ಪೇಚಿಗೆ ಸಿಲುಕಿರುವ ಘಟನೆ ಉತ್ತರಪ್ರದೇಶದ ಉನ್ನಾವೋದಲ್ಲಿ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಸಾಕಷ್ಟು ಖಂಡನೆಗೆ ಗುರಿಯಾಗಿದೆ.
ಮುಖ್ಯ ಶಿಕ್ಷಕಿ ಶಾಲೆಯ ಆವರಣದಲ್ಲೇ ಫೇಶಿಯಲ್​ ಮಾಡಿಸಿಕೊಳ್ಳುತ್ತಿರುವುದನ್ನು ವಿಡಿಯೋ ಮಾಡಿದ ಸಹವರ್ತಿ ಮೇಲೆ ಇಟ್ಟಿಗೆಯಿಂದ ಹೊಡೆದು, ಕೈ ಕಚ್ಚಿ ಹಲ್ಲೆ ನಡೆಸಲಾಗಿದೆ. ಇತ್ತ ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಈ ಬಗ್ಗೆ ತನಿಖೆ ಕೈಗೊಂಡಿದ್ದು, ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
Kalesh b/w head master & another teacher over Head master school cook se facial kara rahi thi ,ek teacher ne video bana li toh uske hath par Kat liya📍Bighapur, Unnao UPpic.twitter.com/9dli9gzXau
ಇದನ್ನೂ ಓದಿ:ಪಂಜಾಬ್​ ವಿರುದ್ಧದ ಪಂದ್ಯದಲ್ಲಿ ವಿಶೇಷ ದಾಖಲೆಗಳನ್ನು ಬರೆದ ರೋಹಿತ್​ ಶರ್ಮಾ; ಏನದು?
ಉನ್ನಾವೋದಲ್ಲಿರುವ ದಾದಾಮೌ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಸಂಗೀತಾ ಸಿಂಗ್ ಅವರು ತರಗತಿಯನ್ನು ತೆಗೆದುಕೊಳ್ಳುವ ಬದಲು ಶಾಲೆಯ ಅಡುಗೆಮನೆಯೊಳಗೆ ಫೇಶಿಯಲ್ ಮಾಡಿಸಿಕೊಳ್ಳುತ್ತಿದ್ದರು. ಇದನ್ನು ನೋಡಿದ ಮತ್ತೋರ್ವ ಶಿಕ್ಷಕಿ ಅನಮ್​ ಖಾನ್​ ಇದನ್ನು ವಿಡಿಯೋ ಮಾಡಿಕೊಂಡಿದ್ದಾರೆ.
ವಿಡಿಯೋ ಮಾಡುತ್ತಿರುವುದನ್ನು ಕಂಡ ಸಂಗೀತಾ ಸಿಂಗ್  ನಾನು ಏನಾದರೂ ಮಾಡುತ್ತೇನೆ ಅದನ್ನು ಕೇಳಲು ನೀನ್ಯಾರು ಎಂದು ಬಾಯಿಗೆ ಬಂದಂತೆ ಮಾತನಾಡಲು ಶುರು ಮಾಡಿದ್ದಾರೆ. ಬಳಿಕ ಅನಮ್​ ಖಾನ್​ ಮೇಲೆ ಇಟ್ಟಿಗೆಯಿಂದ ಹೆಲ್ಲೆಗೆ ಮುಂದಾಗಿದ್ದು, ಅವರ ಕೈಕಚ್ಚಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − three =
Remember me
