ನವದೆಹಲಿ:ಕೇಂದ್ರದ ಮೂರು ವಿವಾದಿತ ಕೃಷಿ ಕಾನೂನುಗಳನ್ನು ವಾಪಸ್​​ ಪಡೆಯುವ ಪ್ರಧಾನಿ ನರೇಂದ್ರ ಮೋದಿ ಅವರ ನಿರ್ಧಾರವನ್ನು ದೇಶದ ಅನೇಕ ಗಣ್ಯರು ಸ್ವಾಗತಿಸಿದ್ದಾರೆ. ಪ್ರಮುಖ ವಿರೋಧಪಕ್ಷವಾದ ಕಾಂಗ್ರೆಸ್​ನ​ ನಾಯಕ ಹಾಗೂ ಸಂಸದ ರಾಹುಲ್​ ಗಾಂಧಿ ಕೂಡ ಟ್ವೀಟ್​ ಮಾಡಿ ರೈತರ ಈ ಗೆಲುವಿಗೆ ಶುಭಾಶಯ ಕೋರಿದ್ದಾರೆ.
“ದೇಶದ ಅನ್ನದಾತನು ಸತ್ಯಾಗ್ರಹದಿಂದ ಅಹಂಕಾರದ ತಲೆಯನ್ನು ತಗ್ಗಿಸಿಬಿಟ್ಟ! ಅನ್ಯಾಯದ ವಿರುದ್ಧದ ಈ ವಿಜಯಕ್ಕೆ ಅಭಿನಂದನೆಗಳು” ಎಂದು ಹೇಳಿರುವ ರಾಗಾ, “ಜೈ ಹಿಂದ್​, ಜೈ ಹಿಂದ್​ ಕಾ ಕಿಸಾನ್​” ಎಂದು ಉದ್ಗರಿಸಿದ್ದಾರೆ. ಜೊತೆಗೇ, ರೈತ ಮುಖಂಡರ ಹೋರಾಟವನ್ನು ಆರಂಭದಿಂದ ಬೆಂಬಲಿಸುತ್ತಾ ಬಂದಿರುವ ರಾಹುಲ್ ಗಾಂಧಿ, ಈ ಸಂದರ್ಭದಲ್ಲಿ, ತಮ್ಮ ಹಿಂದಿನ ಸಂದರ್ಶನದ ವಿಡಿಯೋ ತುಣುಕೊಂದನ್ನು ಶೇರ್​ ಮಾಡಿದ್ದಾರೆ.
देश के अन्नदाता ने सत्याग्रह से अहंकार का सर झुका दिया।अन्याय के खिलाफ़ ये जीत मुबारक हो!
जय हिंद, जय हिंद का किसान!#FarmersProtesthttps://t.co/enrWm6f3Sq
— Rahul Gandhi (@RahulGandhi)November 19, 2021

ಕಳೆದ ಜನವರಿ 14 ರ ಈ ವಿಡಿಯೋ ಪೋಸ್ಟ್​ನಲ್ಲಿ, “ಕೃಷಿ ಕಾನೂನುಗಳ ವಿರುದ್ಧದ ಹೋರಾಟದಲ್ಲಿ ನಾನು ರೈತರನ್ನು ಸಂಪೂರ್ಣವಾಗಿ ಬೆಂಬಲಿಸುತ್ತೇನೆ. ಅವರ ಬಗ್ಗೆ ನನಗೆ ಹೆಮ್ಮೆ ಇದೆ. ನನ್ನ ಮಾತನ್ನು ನೆನಪಿಟ್ಟುಕೊಳ್ಳಿ… ಈ ಕಾನೂನುಗಳನ್ನು ಸರ್ಕಾರ ಮುಂದೊಂದು ದಿನ ವಾಪಸ್​​ ಪಡೆಯಲೇಬೇಕಾಗುತ್ತದೆ” ಎಂದು ರಾಹುಲ್​ ಗಾಂಧಿ ಸುದ್ದಿಗಾರರಿಗೆ ಹೇಳಿರುವುದು ದಾಖಲಾಗಿದೆ.(ಏಜೆನ್ಸೀಸ್​​)
ಚುನಾವಣೆ ಬಂದ್ರೆ ಹಿಂದು-ಮುಸ್ಲಿಂ ಅಂತೀರಿ! ಬಿಜೆಪಿ ವಿರುದ್ಧ ತೆಲಂಗಾಣ ಸಿಎಂ ಆಕ್ರೋಶ

VIDEO| ನಟಿ ನಯನತಾರಾ ಜನ್ಮದಿನ… ಹೀಗಿತ್ತು ಬರ್ತ್​​ಡೇ ಪಾರ್ಟಿ!

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:four × three =
Remember me
