ಇಸ್ಲಾಮಾಬಾದ್​:ನಾಳೆ ಭಾರತದ ಪ್ರಧಾನ ಮಂತ್ರಿ, ಪಾಕಿಸ್ತಾನ ಕ್ರಿಕೆಟ್​ಗೆ ಫಂಡ್​ ಮಾಡಬಾರದು ಎಂದು ಯೋಚಿಸಿದಲ್ಲಿ, ಪಾಕಿಸ್ತಾನ ಕ್ರಿಕೆಟ್​ ಬೋರ್ಡ್​(ಪಿಸಿಬಿ) ಕುಸಿದುಬೀಳಬಹುದು ಎಂದು ಪಿಸಿಬಿ ಚೇರ್​ಮನ್​ ರಮೀಜ್​ ರಾಜ ಹೇಳಿದ್ದಾರೆ.
“ಪಾಕಿಸ್ತಾನ ಕ್ರಿಕೆಟ್​ ಬೋರ್ಡ್​ನ ಶೇಕಡ 50ರಷ್ಟು ಫಂಡಿಂಗ್​ ಐಸಿಸಿಯಿಂದ ಬರುತ್ತದೆ. ಐಸಿಸಿಯನ್ನು ಶೇಕಡ 90 ರಷ್ಟು ಫಂಡ್ ಮಾಡುವುದು ಭಾರತದ ಮಾರುಕಟ್ಟೆ. ಆದ್ದರಿಂದ ಪಾಕ್​ ಕ್ರಿಕೆಟ್​ನ ಅಸ್ತಿತ್ವ ಭಾರತದ ಬಿಸಿನೆಸ್​ ಹೌಸ್​ಗಳ ಕೈಯಲ್ಲಿದೆ. ನಾಳೆ ಭಾರತದ ಪ್ರಧಾನಿ ಪಿಸಿಬಿಗೆ ಫಂಡ್​ ಮಾಡಬಾರದು ಎಂದು ಯೋಚಿಸಿದಲ್ಲಿ, ನಮ್ಮ ಕ್ರಿಕೆಟ್ ಬೋರ್ಡ್​ ಕುಸಿದುಬೀಳುತ್ತದೆ. ಇದು ಭಯ ಹುಟ್ಟಿಸುವ ವಿಚಾರವಾಗಿದೆ” ಎಂದು ರಾಜಾ ಹೇಳಿದ್ದಾರೆ.
“50% of PCB is run on ICC funding. 90% of ICC is run on BCCI funding. India is running PCB. Modi can shut down PCB the day he wants.”
– PCB Chairman, Ramiz Rajapic.twitter.com/4DOqJOQLGJ
— Amit Malviya (@amitmalviya)October 7, 2021

ಪಾಕಿಸ್ತಾನದಲ್ಲಿ ನಡೆಯುತ್ತಿರುವ ಕ್ರಿಕೆಟ್​ ಸಂಬಂಧದ ಉನ್ನತ ಮಟ್ಟದ ಸಭೆಯೊಂದರಲ್ಲಿ ರಾಜ ಈ ಮಾತುಗಳನ್ನು ಆಡುತ್ತಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಐಸಿಸಿ ಮೇಲಿನ ಅವಲಂಬನೆಯನ್ನು ಪಿಸಿಬಿ ಕಡಿಮೆ ಮಾಡಿಕೊಳ್ಳಬೇಕು ಎಂದು ಹೇಳಿರುವ ಅವರು, ಜೊತೆಯಲ್ಲೇ ಪಾಕ್​ ಕ್ರಿಕೆಟ್​ಗೆ ದೇಶೀಯವಾಗಿ ಪೂರಕ ಅರ್ಥವ್ಯವಸ್ಥೆ ಕಲ್ಪಿಸುವುದು ಬಹಳ ಮುಖ್ಯ ಎಂದಿದ್ದಾರೆ ಎಂದು ವರದಿ ತಿಳಿಸಿದೆ.(ಏಜೆನ್ಸೀಸ್)
ರಾಜ್ಯದಲ್ಲಿ ಕಾಂಗ್ರೆಸ್ ಎರಡು ಹೋಳಾಗುವುದರಲ್ಲಿ ಅಚ್ಚರಿ ಇಲ್ಲ: ಈಶ್ವರಪ್ಪ

ಲಖೀಂಪುರ್​ ಖೇರಿ ಘಟನೆ: ನಿವೃತ್ತ ನ್ಯಾಯಮೂರ್ತಿಗಳ ತನಿಖಾ ಆಯೋಗ ನೇಮಕ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − nine =
Remember me
