ಸೊರೊ:ಅತ್ಯಂತ ವಿರಳವಾದ ಮತ್ತು ವಿಶಿಷ್ಟವಾದ ಹಳದಿ ಬಣ್ಣದ ಆಮೆಯೊಂದು ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ಪತ್ತೆಯಾಗಿದೆ. ಹೊಲದ ಬದಿಯಲ್ಲಿ ಇದು ಪತ್ತೆಯಾಗಿದ್ದು, ಗ್ರಾಮಸ್ಥರ ಗಮನಸೆಳೆದಿತ್ತು.
ಈ ಆಮೆಯನ್ನು ಮೊದಲು ಕಂಡ ರೈತನ ಹೆಸರು ಬಸುದೇವ ಮಹಾಪಾತ್ರ. ಸುಜನಾಪುರ ಗ್ರಾಮದಲ್ಲಿರುವ ಮಹಾಪಾತ್ರ ಅವರ ಕೃಷಿ ಜಮೀನಿನ ಬದಿಯಲ್ಲಿ ಈ ವಿರಳ ಆಮೆ ಪತ್ತೆಯಾಗಿತ್ತು. ಕೂಡಲೇ ಅವರು ಅದನ್ನು ತಮ್ಮ ಮನೆಗೆ ತಂದಿದ್ದರು. ಈ ವಿಷಯ ಗ್ರಾಮದಾದ್ಯಂತ ಹರಡಿ, ಆ ಆಮೆಯನ್ನು ನೋಡಲು ಗುಂಪು ಸೇರಿದ್ದರು.
ಮಹಾಪಾತ್ರ ಅವರು ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳಿ ವಿರಳ ಆಮೆಯ ವಿಚಾರ ಮುಟ್ಟಿಸಿದ್ದರು. ಅವರು ಮಹಾಪಾತ್ರ ಅವರಿಂದ ಆಮೆಯನ್ನು ತಮ್ಮ ವಶಕ್ಕೆ ತೆಗೆದುಕೊಂಡು ಎಲ್ಲರಿಗೂ ಪ್ರದರ್ಶಿಸುತ್ತ ಮೆರವಣಿಗೆ ಮಾಡುತ್ತ ಕೊಂಡೊಯ್ದರು.
ಬಾಲಾಸೋರ್​ನ ಸುಜನಾಪುರ ಗ್ರಾಮದಿಂದ ಸ್ಥಳೀಯರು ರಕ್ಷಿಸಿರುವ ಹಳದಿ ಬಣ್ಣದ ಆಮೆಯನ್ನು ಅರಣ್ಯಾಧಿಕಾರಿಗಳು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಇದು ವಿರಳವಾದ ಆಮೆಯಾಗಿದ್ದು, ಇದುವರೆಗೂ ಇಂತಹ ಆಮೆಯನ್ನು ನೋಡಿಯೇ ಇಲ್ಲ ಎಂದು ಅರಣ್ಯ ರಕ್ಷಕ ಬಿ.ಆಚಾರ್ಯ ಪ್ರತಿಕ್ರಿಯಿಸಿದ್ದಾರೆ.ಕಳೆದ ತಿಂಗಳು ಒಡಿಶಾದ ನಬರಂಗಪುರ ಜಿಲ್ಲೆಯ ಮೈದಲಾಪುರ ಪ್ರದೇಶದಲ್ಲಿ ವಿರಳ ಜಾತಿಯ 95 ಆಮೆಗಳನ್ನು ಅರಣ್ಯಾಧಿಕಾರಿಗಳು ಕಳ್ಳಸಾಗಣೆದಾರರಿಂದ ರಕ್ಷಿಸಿದ್ದರು.
Sign in to your account
Please enter an answer in digits:2 × 5 =
Remember me
