ನವದೆಹಲಿ:ಪಾನಮತ್ತ ವ್ಯಕ್ತಿಯೊಬ್ಬ ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಾಲಿವಾಲ್​​ ಅವರನ್ನು ಕಾರಿನಲ್ಲಿ​ ಎಳೆದೊಯ್ದ ಅಮಾನವೀಯ ಘಟನೆಗೆ ಸಂಬಂಧಿಸಿದ ವಿಡಿಯೋ ಇದೀಗ ಬಿಡುಗಡೆಯಾಗಿದೆ.
ರಜಿನಿ ಸಿಂಗ್​ ಎಂಬುವರು ತಮ್ಮ ಟ್ವಿಟರ್​ ಖಾತೆಯಲ್ಲಿ ವಿಡಿಯೋ ಪೋಸ್ಟ್​ ಮಾಡಿದ್ದಾರೆ. ಲಾರಿ ಒಂದರ ಹಿಂಭಾಗ ತಲೆಗೆ ವೇಲ್​ ಸುತ್ತಿಕೊಂಡು ನಿಂತಿರುವ ಸ್ವಾತಿ ಅವರ ಬಳಿಗೆ ಬಿಳಿ ಬಣ್ಣದ ಕಾರು ಬಂದು ನಿಲ್ಲುತ್ತದೆ. ಬಳಿಕ ಕಾರು ಚಾಲಕ ಮತ್ತು ಸ್ವಾತಿ ನಡುವೆ ಏನೋ ಸಂಭಾಷಣೆ ನಡೆಯುತ್ತದೆ. ಬಳಿಕ ಅಲ್ಲಿಂದ ಪರಾರಿಯಾಗುವ ಕಾರು ಚಾಲಕ ಮತ್ತೆ ಯೂಟರ್ನ್​ ಹೊಡೆದುಕೊಂಡು ಬಂದು ಸ್ವಾತಿ ಬಳಿ ನಿಲ್ಲಿಸಿ ಏನನ್ನೋ ಕೇಳುತ್ತಾನೆ. ಈ ವೇಳೆ ಚಾಲಕನ ಕಿಟಕಿ ಪಕ್ಕ ಸ್ವಾತಿ ತೆರಳುತ್ತಾರೆ. ಮಾತನಾಡುವಾಗ ಕಾರಿನ ಕಿಟಕಿ ಗಾಜಿಗೆ ಸ್ವಾತಿ ಅವರ ಕೈ ಸಿಲುಕಿಕೊಳ್ಳುತ್ತದೆ. ಬಳಿಕ ಆಕೆಯನ್ನು ಸ್ವಲ್ಪ ದೂರ ಎಳೆದುಕೊಂಡು ಹೋಗುತ್ತಾನೆ. ಅಷ್ಟರಲ್ಲಿ ಸ್ವಾತಿ ಅವರು ಕೂಗಿಕೊಂಡಾಗ ಕಾರು ಚಾಲಕ ಅಲ್ಲಿಂದ ಪರಾರಿಯಾಗುವ ದೃಶ್ಯ ವಿಡಿಯೋದಲ್ಲಿದೆ.
स्वाति मालीवाल का रियलिटी चेक#SwatiMaliwalpic.twitter.com/EKRZUJd5LX
— rajni singh (@imrajni_singh)January 20, 2023

ದೆಹಲಿಯ ಉಪ ಪೊಲೀಸ್​ ಆಯುಕ್ತ (ದಕ್ಷಿಣ) ಚಂದನ್​ ಚೌಧರಿ ಅವರ ಪ್ರಕಾರ ಈ ಘಟನೆ ಜನವರಿ 19ರಂದು ಬೆಳಗಿನ ಜಾವ 3.11 ಕ್ಕೆ ನಡೆದಿದೆ. ಈ ಸಮಯದಲ್ಲಿ ಒಂದು ಪಿಸಿಆರ್ ಕರೆ ಬಂದಿತು. ಏಮ್ಸ್​ ಬಸ್​ ನಿಲ್ದಾಣದ ಬಳಿ ಮಹಿಳೆಯೊಬ್ಬಳನ್ನು ಕಾರಿನಲ್ಲಿ ಎಳೆದೊಯ್ಯಲಾಗಿದೆ ಎಂಬ ಮಾಹಿತಿ ಸಿಕ್ಕಿತ. ಗರುಡ 1 (ದಕ್ಷಿಣ ಜಿಲ್ಲೆಯಲ್ಲಿ ವಿಶೇಷ ಗಸ್ತು ವಾಹನ) ಸಿಬ್ಬಂದಿಯೇ ಕಂಟ್ರೋಲ್​ ರೂಮ್​ಗೆ ಕರೆ ಮಾಡಿದ್ದರು. ಏಮ್ಸ್​ನ ಗೇಟ್​ ನಂಬರ್​ 2ರ ಎದುರಿಗಿರುವ ಫುಟ್​ಪಾತ್​ನಲ್ಲಿ ಮಹಿಳೆಯೊಬ್ಬಳು ನಿಂತಿರುವುದು ಕಂಡುಬಂದು, ಆಕೆಯನ್ನು ವಿಚಾರಿಸಿದಾಗ ಈ ಸಂಗತಿ ಬಯಲಾಗಿದೆ ಎಂದು ಡಿಸಿಪಿ ತಿಳಿಸಿದರು.
ಓರ್ವ ವ್ಯಕ್ತಿ ಬಲೇನೋ ಕಾರು ಚಲಾಯಿಸುತ್ತಿದ್ದ. ಆತ ಕುಡಿದಿದ್ದ ಮತ್ತು ನನ್ನ ಬಳಿ ಕಾರು ನಿಲ್ಲಿಸಿ, ಒಳಗೆ ಕುಳಿತುಕೊಳ್ಳುವಂತೆ ಕೆಟ್ಟ ಉದ್ದೇಶದಿಂದ ಕೇಳಿದ. ನಾನು ತಿರಸ್ಕರಿಸಿದಾಗ ಅಲ್ಲಿಂದ ಹೊರಟ ಆತ, ಮತ್ತೆ ಸರ್ವೀಸ್​ ಲೇನ್​ನಲ್ಲಿ ಯೂಟರ್ನ್​ ಮಾಡಿಕೊಂಡು ಬಂದು, ಮತ್ತೆ ಕಾರಿನ ಒಳಗೆ ಕುಳಿತುಕೊಳ್ಳುವಂತೆ ಹೇಳಿದ. ನಾನು ಮತ್ತೆ ತಿರಸ್ಕರಿಸಿ, ಆತನಿಗೆ ಛೀಮಾರಿ ಹಾಕಲು ಚಾಲಕನ ಸೀಟಿನ ಪಕ್ಕ ತೆರಳಿದೆ. ಈ ವೇಳೆ ದಿಢೀರನೇ ಕಿಟಕಿ ಬಾಗಿಲು ಮುಚ್ಚಿದ. ನನ್ನ ಕೈ ಕಿಟಕಿ ಗಾಜಿನ ಮಧ್ಯೆ ಸಿಲುಕಿತು. ನಂತರ ಸುಮಾರು 10 ರಿಂದ 15 ಮೀಟರ್​ ದೂರ ನನ್ನನ್ನು ಎಳೆದೊಯ್ದ ಎಂದು ಸ್ವಾತಿ ಅವರು ಪೊಲೀಸರಿಗೆ ಮಾಹಿತಿ ನೀಡಿದರು.
ಬಲೇನೋ ವಾಹನವನ್ನು ಬರುಡ ಗಸ್ತು ಪಡೆ ಅದೇ ದಿನ 3.34ಕ್ಕೆ ವಶಕ್ಕೆ ಪಡೆಯಲಾಗಿದೆ. ಆರೋಪಿಯನ್ನು ಬಂಧಿಸಲಾಗಿದೆ. ಮೊದಲು ಸಂತ್ರಸ್ತೆಯ ಗುರುತು ಪತ್ತೆಯಾಗಿರಲಿಲ್ಲ. ಆ ಬಳಿಕ ಸಂತ್ರಸ್ತೆ ಸ್ವಾತಿ ಮಾಲಿವಾಲ್​ ಎಂದು ತಿಳಿಯಿತು. ಅವರು ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ. ಕೋಟ್ಲಾ ಮುಬಾರಕ್ ಪುರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಯನ್ನು ಸಂಗಮ್ ವಿಹಾರ್ ನಿವಾಸಿ ಹರೀಶ್ ಚಂದ್ರ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.(ಏಜೆನ್ಸೀಸ್​)
3 ದಿನಗಳ ಅಂತಾರಾಷ್ಟ್ರೀಯ ಸಿರಿಧಾನ್ಯ ಮೇಳಕ್ಕೆ ಚಾಲನೆ: ಗ್ರಾಹಕರನ್ನು ಕೈ ಬೀಸಿ ಕರೆಯುತ್ತಿವೆ ತರಹೇವಾರಿ ಸಿರಿಧಾನ್ಯ

70ರ ದಶಕದಲ್ಲಿ 1 ಮಸಾಲೆ ದೋಸೆ ಬೆಲೆ ಎಷ್ಟಿತ್ತು ಗೊತ್ತಾ? ಹಳೆಯ ಬಿಲ್​ ನೋಡಿದ್ರೆ ಹುಬ್ಬೇರೋದು ಖಚಿತ!

ಸುಕೇಶ್ ನನ್ನ ಬದುಕು ನರಕ ಮಾಡಿದ: ದೂರು ದಾಖಲಿಸಿದ ನಟಿ ಜಾಕ್​ಲೀನ್ ಫರ್ನಾಂಡಿಸ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − twelve =
Remember me
