ನವದೆಹಲಿ:ಅಪ್ರಾಪ್ತೆಯೊಬ್ಬಳ ಮೇಲೆ ಬೈಕ್​ನಲ್ಲಿ ಬಂದ ದುಷ್ಕರ್ಮಿಗಳಿಬ್ಬರು ಆ್ಯಸಿಡ್​ ದಾಳಿ ಮಾಡಿರುವ ಘಟನೆ ನೈಋತ್ಯ ದೆಹಲಿಯ ದ್ವಾರಕದಲ್ಲಿಂದು (ಡಿ.14) ನಡೆದಿದೆ. ಗಂಭೀರವಾಗಿ ಗಾಯಗೊಂಡಿರುವ 17 ವರ್ಷದ ಸಂತ್ರಸ್ತೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮುಖದ ತುಂಬೆಲ್ಲ ಆ್ಯಸಿಡ್​ ಬಿದ್ದಿದ್ದು, ಕಣ್ಣಿನ ಒಳಗೂ ನುಗ್ಗಿದೆ. ಇದರ ಪರಿಣಾಮ ಸಂತ್ರಸ್ತೆಯ ಸ್ಥಿತಿ ಗಂಭೀರವಾಗಿರುವುದಾಗಿ ಆಕೆಯ ತಂದೆ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಇಬ್ಬರು ಶಂಕಿತರಲ್ಲಿ ಓರ್ವನನ್ನು ಹುಡುಗಿ ಗುರುತಿಸಿದ್ದು, ಆತನನ್ನು ವಶಕ್ಕೆ ಪಡೆದಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಘಟನೆಗೆ ಸಂಬಂಧಿಸಿದ ಸಿಸಿಟಿವಿ ದೃಶ್ಯಾವಳಿ ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಹುಡುಗಿಯರಿಬ್ಬರು ರಸ್ತೆಯ ಒಂದು ಬದಿಯಲ್ಲಿ ನಡೆದು ಹೋಗುವಾಗ ಎದುರಿಗೆ ಬರುವ ಬೈಕ್​ ಒಂದು ಹುಡುಗಿಯರ ಬಳಿ ನಿಧಾನಿಸುತ್ತದೆ. ಈ ವೇಳೆ ಹಿಂಬದಿಯ ಸವಾರ ಸಂತ್ರಸ್ತೆಯ ಮೇಲೆ ಆ್ಯಸಿಡ್​ ಎರಚಿ, ಅಲ್ಲಿಂದ ಪರಾರಿಯಾಗುತ್ತಾನೆ. ಆ್ಯಸಿಡ್​ ಬಿದ್ದ ಕೂಡಲೇ ತನ್ನ ಮುಖ ಹಿಡಿದುಕೊಂಡು ತುಂಬಾ ನೋವಿನಿಂದ ಸಂತ್ರಸ್ತೆ ಓಡಿ ಹೋಗುವ ದೃಶ್ಯ ವಿಡಿಯೋದಲ್ಲಿದೆ.
देश की राजधानी में दिन दहाड़े एक स्कूली बच्ची पर 2 बदमाश दबंगई से तेज़ाब फेंककर निकल जाते हैं… क्या किसी को भी अब क़ानून का डर है ? क्यों तेज़ाब पर बैन नहीं लगाया जाता ? SHAMEpic.twitter.com/kaWWQYey7A
— Swati Maliwal (@SwatiJaiHind)December 14, 2022

17 ಮತ್ತು 13 ವರ್ಷದ ನನ್ನಿಬ್ಬರು ಹೆಣ್ಣು ಮಕ್ಕಳು ಇಂದು ಬೆಳಗ್ಗೆ ಒಟ್ಟಿಗೆ ಹೊರಗಡೆ ಹೋದರು. ಈ ವೇಳೆ ದಿಢೀರನೇ ಇಬ್ಬರು ವ್ಯಕ್ತಿಗಳು ಬೈಕ್​ ಮೇಲೆ ಬಂದು ನನ್ನ ಹಿರಿಯ ಮಗಳಿಗೆ ಆ್ಯಸಿಡ್​ ಎರಚಿ ಪರಾರಿಯಾಗಿದ್ದಾರೆ. ಆರೋಪಿಗಳು ತಮ್ಮ ಮುಖವನ್ನು ಮುಚ್ಚಿಕೊಂಡಿದ್ದರು ಎಂದು ಸಂತ್ರಸ್ತೆಯ ತಂದೆ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಯಾರಿಂದಾದರೂ ಕಿರುಕುಳ ಇರುವ ಬಗ್ಗೆ ನಿಮ್ಮ ಮಗಳು ನಿಮಗೆ ಎಂದಾದರೂ ದೂರು ನೀಡಿದ್ದಳೇ ಎಂದು ಪ್ರಶ್ನೆ ಮಾಡಿದಾಗ, ಉತ್ತರಿಸಿದ ತಂದೆ ಇಲ್ಲ ಎಂದರು. ಒಂದು ವೇಳೆ ಕಿರುಕುಳದ ಬಗ್ಗೆ ಹೇಳಿದಿದ್ದರೆ, ನಾನು ಅವಳೊಂದಿಗೆ ಎಲ್ಲ ಕಡೆ ಹೋಗುತ್ತಿದ್ದೆ. ಸಹೋದರಿಯರು ಮೆಟ್ರೋದಲ್ಲಿ ಒಟ್ಟಿಗೆ ಶಾಲೆಗೆ ಹೋಗುತ್ತಾರೆ ಎಂದು ಹೇಳಿದರು. ಎಂದೂ ಕೂಡ ಕಿರುಕುಳದ ಬಗ್ಗೆ ಮಗಳ ಹೇಳಿಲ್ಲ ಎಂದು ಆಕೆಯ ತಾಯಿಯೂ ಕೂಡ ತಿಳಿಸಿದರು.
ದೆಹಲಿ ಮಹಿಳಾ ಸಮಿತಿ ಮುಖ್ಯಸ್ಥೆ ಸ್ವಾತಿ ಮಲಿವಾಲ್ ಘಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಇಂತಹ ಘೋರ ಅಪರಾಧಗಳನ್ನು ತಡೆಯಲು ಆಸಿಡ್ ಮಾರಾಟವನ್ನು ಏಕೆ ನಿರ್ಬಂಧಿಸಲು ಸಾಧ್ಯವಿಲ್ಲ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಆಗ್ರಹಿಸಿದ್ದಾರೆ.(ಏಜೆನ್ಸೀಸ್​)
ವಿಡಿಯೋ ಮಾಡಿ ನೆರವು ಕೊಡಿಸ್ತೀವಿ ಅಂತಾ ಹಾಸಿಗೆ ಹಿಡಿದ ವ್ಯಕ್ತಿಗೆ ವಂಚನೆ: ಕೇಬಲ್​ ಟಿವಿ ಮಾಲೀಕ, ಉದ್ಯೋಗಿಗಳಿಗೆ ಶಾಕ್​

ಜೈಲು ಪಾಲಾಗಲಿದ್ದಾರೆ ಅನುಭವ ಸಿನಿಮಾ ಖ್ಯಾತಿಯ ಅಭಿನಯಾ! ಹೈಕೋರ್ಟ್​ನಿಂದ 2 ವರ್ಷ ಶಿಕ್ಷೆ ಪ್ರಕಟ

ಪವಿತ್ರಾ ಲೋಕೇಶ್ ಬಳಿಕ ಕೆಲ ಯೂಟ್ಯೂಬರ್ಸ್​ಗೆ ಶಾಕ್​ ಕೊಟ್ಟ ನಟ ನರೇಶ್! ಕೋರ್ಟ್​ನಿಂದ ಹೊರಬಿತ್ತು ಆದೇಶ​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight − 3 =
Remember me
