ಗಾಜಿಯಾಬಾದ್‌:ಚಲಿಸುವ ಬೈಕ್‌ನಲ್ಲಿ ದಂಪತಿ ತಬ್ಬಿಕೊಂಡು ಪ್ರಯಾಣಿಸುತ್ತಿರುವ ವಿಡಿಯೋ ವೈರಲ್​ ಆಗುತ್ತಿದ್ದಂತೆ, ಈ ಜೋಡಿ ಸಂಕಷ್ಟಕ್ಕೆ ಸಿಲುಕಿಕೊಂಡಿದೆ.
ಗಾಜಿಯಾಬಾದ್‌ನ ಇಂದಿರಾಪುರಂ ಪ್ರದೇಶದ ಬಳಿ (NH9) ರಾಷ್ಟ್ರೀಯ ಹೆದ್ದಾರಿ 9ರಲ್ಲಿ ಚಲಿಸುವ ಬೈಕ್‌ನಲ್ಲಿ, ಬೈಕ್‌ನ ಇಂಧನ ಟ್ಯಾಂಕ್ ಮೇಲೆ ಕುಳಿತ ಯುವತಿ, ಬೈಕ್​ ಸವಾರನನ್ನು ತಬ್ಬಿಕೊಂಡಿದ್ದರು. ಈ ವಿಡಿಯೋ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ.
ವಿಡಿಯೋದಲ್ಲಿ ಏನಿದೆ?:ಪುರುಷ ದ್ವಿಚಕ್ರ ವಾಹನವನ್ನು ಸವಾರಿ ಮಾಡುತ್ತಿರುವಾಗ ಮಹಿಳೆ ಬೈಕ್‌ನ ಪೇಟ್ರೋಲ್​​​​ ಟ್ಯಾಂಕ್ ಮೇಲೆ ತಬ್ಬಿ ಕುಳಿತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.
#गाजियाबादमें आशिक मिजाज बाइक सवार की वीडियो हुई वायरल इंदिरापुरम के NH 9 का बताया जा रहा है ।
वो कहते है ना –“हम तो मरेंगे सनम तुम्हे साथ लेके मरेंगे ”परनियम कानून ताक पर रख के ही सफर करेंगे ।@Gzbtrafficpol@uptrafficpolice@sacchayugnewspic.twitter.com/xPmSgzbfmO
— Akash Kumar (@Akashkchoudhary)June 20, 2023
ಈ ದೃಶ್ಯಾವಳಿಗಳು ವೈರಲ್ ಆಗಿದ್ದು, ವಿಡಿಯೋಗೆ ಪ್ರತಿಕ್ರಿಯಿಸಿರುವ ಯುಪಿ ಪೊಲೀಸರು ಅಗತ್ಯ ಕ್ರಮ ಕೈಗೊಳ್ಳುವಂತೆ ಘಾಜಿಯಾಬಾದ್ ಪೊಲೀಸ್ ಘಟಕಕ್ಕೆ ಸೂಚಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಇಂತಹ ಘಟನೆಗಳು ವರದಿಯಾಗಿದ್ದು, ಅಗತ್ಯ ಕಾನೂನು ಕ್ರಮಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ.
ಹೆಲ್ಮೆಟ್ ಧರಿಸದಿರುವುದು ಸೇರಿದಂತೆ ವಿವಿಧ ಉಲ್ಲಂಘನೆಗಳಿಗಾಗಿ ಗಾಜಿಯಾಬಾದ್ ಟ್ರಾಫಿಕ್ ಪೊಲೀಸರು ಈ ಜೋಡಿಗೆ 21 ಸಾವಿರ ರೂ. ದಂಡ ವಿಧಿಸಿದ್ದಾರೆ.
11 ಮಂದಿ ಕೂಲಿಕಾರರ ಕೈಗೆ ಸರಪಳಿ ಕಟ್ಟಿ ಬಾವಿ ತೋಡುತ್ತಿರುವ ಗುತ್ತಿಗೆದಾರ; ಮುಂದೇನಾಯ್ತು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + three =
Remember me
