ಚೆನ್ನೈ:ವರ್ಷದ ಮೊದಲ ಹಬ್ಬ ಸಂಕ್ರಾಂತಿ ಪ್ರಯುಕ್ತ ತಮಿಳುನಾಡಿನಲ್ಲಿ ಗೂಳಿಗಳನ್ನು ಮಣಿಸಲಾಗುವ ಜಲ್ಲಿಕಟ್ಟು ಸ್ಫರ್ಧೆಯನ್ನು ಆಯೋಜಿಸಲಾಗಿದ್ದು, ಈಗಾಗಲೇ ಹಲವು ವಿಚಾರಗಳಿಗೆ ಈ ಕ್ರೀಡೆ ಹೆಸರುವಾಸಿಯಾಗಿದೆ. ಸ್ಫರ್ಧೆಯಲ್ಲಿ ಭಾಗಿಯಾಗುವ ಗೂಳಿಗಳಿಗೆ ಹೆಂಡ ಕುಡಿಸಿ ಖಾರದ ಪುಡಿಯನ್ನು ಕಣ್ಣುಗಳಿಗೆ ಮೆತ್ತಲಾಗುತ್ತದೆ ಎಂಬ ದೂರುಗಳು ಸಹ ಕೇಳಿಬಂದಿವೆ.
ಇದೀಗ ಅದೇ ರೀತಿಯ ಘಟನೆಯೊಂದು ನಡೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ತಮಿಳುನಾಡಿನ ಸೇಲಂ ಜಿಲ್ಲೆಯ ತಾರಮಂಗಲಂನಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಯುಟ್ಯೂಬರ್ ವಿರುದ್ಧ FIR ದಾಖಲಿಸಿದ್ದು, ಆತನಿಗಾಗಿ ಶೋಧ ನಡೆಸುತ್ತಿದ್ದಾರೆ.
ವೈರಲ್ ಆಗಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಜೀವಂತ ಹುಂಜವನ್ನು ಬಲವಂತವಾಗಿ ಗೂಳಿಗೆ ತಿನ್ನಿಸುತ್ತಿರುವುದನ್ನು ನೋಡಬಹುದಾಗಿದೆ. ಸುಮಾರು 2 ನಿಮಿಷ ಇರುವ ಈ ವಿಡಿಯೋದಲ್ಲಿ ಜಲ್ಲಿಕಟ್ಟುವಿನಲ್ಲಿ ಭಾಗಿಯಾಗುವ ಗೂಳಿ ಬಲವಂತವಾಗಿ ಅಗೆದು ತಿನ್ನುತ್ತಿರುವುದನ್ನು ನೋಡಬಹುದಾಗಿದೆ. ಈ ವಿಡಿಯೋವನ್ನು ರಘು ಎಂಬಾತ ತನ್ನ ಯುಟ್ಯೂಬ್​ ಚಾನೆಲ್​ನಲ್ಲಿ ಪೋಸ್ಟ್​ ಮಾಡಿದ್ದು, ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ.
Kicking rooster shoved down a herbivore’s throat. I can only imagine what havoc that’ll wreck to this poor animal’s system.“Jallikattu ready” it seems.It’s repulsive, it’s cruel and I’m hopeful that the@tnpoliceofflwill take cognizancepic.twitter.com/FlG5vTbJ7z
ಇದನ್ನೂ ಓದಿ:ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಆಹ್ವಾನ ತಿರಸ್ಕಾರ: ಅಂಬೇಡ್ಕರ್ ಮೊಮ್ಮಗ ನೀಡಿದ ಕಾರಣವೇನು?
ಈ ಕುರಿತು ಪ್ರೆತಿಕ್ರಿಯಿಸಿರುವ ಪ್ರಾಣಿಪ್ರಿಯ ಅರುಣ್​, ಗೂಳಿ ಸಸ್ಯಾಹಾರಿ ಪ್ರಾಣಿಯಾಗಿದ್ದು, ಅದಕ್ಕೆ ಹುಂಜವನ್ನು ತಿನ್ನಿಸುವ ಮೂಲಕ ವಿಕೃತಿ ಮೆರೆಯಲಾಗಿದೆ. ಒಂದು ವೇಳೆ ಜಲ್ಲಿಕಟ್ಟು ಪಂದ್ಯಾವಳಿಯಲ್ಲಿ ಈ ಎತ್ತು ಗೆದ್ದರೆ ಇದನ್ನು ನೋಡಿಕೊಂಡು ಅನೇಕ ಮಾಲೀಕರು ಇದನ್ನೇ ಅನುಸರಿಸುತ್ತಾರೆ. ಪೊಲೀಸರು ಹಾಗೂ ರಾಜ್ಯ ಸರ್ಕಾರ ಈ ಬಗ್ಗೆ ಕಠಿಣ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ತಾರಮಂಗಲಂ ಪೊಲೀಸ್​ ಠಾಣಾಧಿಕಾರಿ, ಘಟನೆ ಸಂಬಂಧ ಪ್ರಾಣಿಪ್ರಿಯರು ಹಾಗೂ ಹಲವರು ವೈರಲ್​ ವಿಡಿಯೋ ಕುರಿತು ಆಕ್ಷೇಪವೆತ್ತಿದ ಬೆನ್ನಲ್ಲೇ FIR ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಯುಟ್ಯೂಬರ್​ಗಾಗಿ ಶೋಧ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಮಾಹಿತಿಯನ್ನು ನೀಡಲಾಗುವುದು ಎಂದು ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + twenty =
Remember me
