ಭೋಪಾಲ್​:ಮಧ್ಯಪ್ರದೇಶದ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಮ್ಮ ಪತ್ನಿಯ ಮೇಲೆ ಹಲ್ಲೆ ಮಾಡಿದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.
ಸೆಪ್ಟೆಂಬರ್​ 27ರಂದು ಘಟನೆ ನಡೆದಿದ್ದು, ಮಧ್ಯಪ್ರದೇಶದ ಹೆಚ್ಚುವರಿ ಪೊಲೀಸ್​ ಮಹಾನಿರ್ದೇಶಕ (ಎಡಿಜಿ) ಪುರುಷೋತ್ತಮ್​ ಶರ್ಮಾ ಭೋಪಾಲ್​ನಲ್ಲಿರುವ ತಮ್ಮ ನಿವಾಸದಲ್ಲಿ ಪತ್ನಿಯನ್ನು ಹಿಡಿದು ಎಳೆದಾಡಿ ನೆಲಕ್ಕೆ ನೂಕಿ ಹಲ್ಲೆ ಮಾಡಿದ್ದಾರೆ. ಈ ವೇಳೆ ವ್ಯಕ್ತಿಯೊಬ್ಬರು ಜಗಳ ಬಿಡಿಸಲು ಯತ್ನಿಸುತ್ತಾರೆ. ಅಲ್ಲದೆ, ಮನೆಯಲ್ಲಿದ್ದ ಎರಡು ನಾಯಿಗಳು ಸಹ ಸನ್ನಿವೇಶವನ್ನು ನೋಡಿ ಬೊಗಳುವುದು ವಿಡಿಯೋದಲ್ಲಿ ದಾಖಲಾಗಿದೆ.
ಇದನ್ನೂ ಓದಿ: Web Exclusive:ಕಬ್ಬು ಕಟಾವಿಗೂ ಕರೊನಾ ಕಂಟಕ; ‘ಕಾರ್ವಿುಕರ ಗ್ಯಾಂಗ್’ ಬರಲು ಹಿಂದೇಟು
ಪತ್ನಿಯತ್ತ ಬೊಟ್ಟು ಮಾಡಿ ಅವಳು ಚಾಕುವಿನಿಂದ ನನ್ನ ಮೇಲೆ ಹಲ್ಲೆ ಮಾಡಿದಳು ಎಂದು ಅಲ್ಲಿಯೇ ಇದ್ದ ವ್ಯಕ್ತಿಯ ಬಳಿ ಹೇಳುತ್ತಾರೆ. ಈ ಮಹಿಳೆಯು ಸಹ ಪ್ರತಿಕ್ರಿಯಿಸಿದ್ದು, ಅವರೇನಾದರೂ ನನ್ನ ಮೇಲೆ ಹಲ್ಲೆ ಮಾಡಿದರೆ, ನಾನು ಕತ್ತರಿಯಿಂದ ದಾಳಿ ಮಾಡಬೇಕಾಗುತ್ತದೆ ಎಂದಿದ್ದಾರೆ. ಕೊನೆಯಲ್ಲಿ ಇದು ನನ್ನ ಆಸ್ತಿ ಎಂದು ಪುರೋಷತ್ತಮ್​ ಹೇಳುವುದು ವಿಡಿಯೋದಲ್ಲಿ ರೆಕಾರ್ಡ್​ ಆಗಿದೆ.
Purshottam Sharma, Special DG, MP brutally assaults his wife😳It seems domestic violence rises with education & status in India!!!pic.twitter.com/yx9US5n7dB
— Seema Choudhary (@Seems3r)September 28, 2020

ರಾಷ್ಟ್ರೀಯ ಮಹಿಳಾ ಆಯೋಗವು ಸಹ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ಪುರುಷೋತ್ತಮ್​ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಿ, ಇಂತಹ ಘಟನೆಗಳಿಂದ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂದು ಮುಖ್ಯಮಂತ್ರಿ ಶಿವರಾಜ್​ ಸಿಂಗ್​ ಚೌಹಾಣ್​ಗೆ ಪತ್ರ ಬರೆದಿದ್ದಾರೆ.
ಇದೇ ವೇಳೆ ಶರ್ಮಾ ಮಗ ನೀಡಿದ ದೂರಿನ ಆಧಾರದ ಮೇಲೆ ಮಧ್ಯಪ್ರದೇಶ ಸರ್ಕಾರವೂ ಶರ್ಮಾ ಅವರನ್ನು ಕರ್ತವ್ಯದಿಂದ ತೆಗೆದುಹಾಕಲಾಗಿದೆ. ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಶರ್ಮಾ, ಇದೊಂದು ಅಪರಾಧವಲ್ಲ, ಕೌಟಂಬಿಕ ಕಲಹವಷ್ಟೇ ಎಂದು ಸಮರ್ಥಿಸಿಕೊಂಡಿದ್ದಾರೆ.
ಇದನ್ನೂ ಓದಿ:ಶಾಲೆ ತೆರೆಯಲು ಶುರುವಾಗಿದೆ ಸಿದ್ಧತೆ; ಏನೆಲ್ಲ ನಿಯಮ ಪಾಲನೆಯಾಗಬೇಕು ಎಂದು ಹೇಳಿದ ಶಿಕ್ಷಣ ಇಲಾಖೆ
ನಾನು ಮದುವೆಯಾಗಿ 32 ವರ್ಷಗಳಾಯಿತು. 2008ರಿಂದಲೂ ಪತ್ನಿ ನನ್ನ ವಿರುದ್ಧ ದೂರುತ್ತಲೇ ಬಂದಿದ್ದಾಳೆ. ಅಂದಿನಿಂದಲೂ ನನ್ನ ಜತೆಯಲ್ಲೇ ವಾಸಿಸುತ್ತಾ ನನ್ನೆಲ್ಲಾ ಸೌಲಭ್ಯ ಮತ್ತು ವಿದೇಶಿ ಪ್ರವಾಸ ಸೇರಿದಂತೆ ಎಲ್ಲವನ್ನು ಅನುಭವಿಸಿದ್ದಾಳೆ. ನಾನು ಹಿಂಸಾತ್ಮಕ ವ್ಯಕ್ತಿಯೂ ಅಲ್ಲ ಅಥವಾ ಅಪರಾಧಿಯೂ ಅಲ್ಲ. ನನ್ನ ಪತ್ನಿ ನನಗೆ ಗೊತ್ತಿಲ್ಲದೆ ಮನೆಯಲ್ಲಿ ಕ್ಯಾಮೆರಾ ಅಳವಡಿಸಿದ್ದಾಳೆಂದು ಶರ್ಮಾ ದೂರಿದ್ದಾರೆ.(ಏಜೆನ್ಸೀಸ್​)
If my nature is abusive then she should've complained earlier. This is a family dispute, not a crime. I am neither a violent person nor a criminal. It is unfortunate that I have to go through this. My wife stalks me & has put cameras in the house: Additional DG Purshottam Sharmahttps://t.co/R58xF8daTD
— ANI (@ANI)September 28, 2020

ಚೀನಾ ಅಸ್ತ್ರಕ್ಕೆ ಪ್ರಬಲ ಪ್ರತ್ಯಸ್ತ್ರ; ಬ್ರಹ್ಮೋಸ್​, ನಿರ್ಭಯ್​ ಕ್ಷಿಪಣಿಗಳ ಬಲ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + seven =
Remember me
