ಭಾರತೀಯ ಸೇನೆಯ ಯೋಧನೋರ್ವ ಮಂಜುಗಡ್ಡೆಯನ್ನೇ ಕಟ್ ಮಾಡಿ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ. ಈ ವಿಡಿಯೋವನ್ನು ಮಾಜಿ ಕ್ರಿಕೆಟರ್​ ವೀರೇಂದ್ರ ಸೆಹ್ವಾಗ್​ ಅವರು ಟ್ವಿಟರ್​​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ.
ನಮ್ಮ ಯೋಧರು ಹಿಮಾಚ್ಛಾದಿತ ಪ್ರದೇಶದಲ್ಲಿ, ಕೊರೆವ ಚಳಿಯಲ್ಲಿ ನಿಂತು ದೇಶ ಕಾಯುತ್ತಾರೆ. ಅದೆಷ್ಟೋ ಮಂದಿ, ಆ ಹಿಮದಡಿಯಲ್ಲಿಯೇ ಪ್ರಾಣವನ್ನೂ ಬಿಟ್ಟ ಉದಾಹರಣೆ ಇದೆ. ಅವರಿಗೆ ಯಾವುದೇ ಹಬ್ಬವಿರಲಿ, ಸಂಭ್ರಮವಿರಲಿ ಅಲ್ಲೇ, ತಾವಿದ್ದಲ್ಲೇ ಎಲ್ಲ ಸೇರಿ ಖುಷಿಯಿಂದ ಆಚರಿಸಿಕೊಳ್ಳುತ್ತಾರೆ.
ಇದೀಗ ಯೋಧನೋರ್ವ ಗಟ್ಟಿಯಾದ ಮಂಜುಗಡ್ಡೆಯನ್ನು ಕೇಕ್​​ನಂತೆ ಕತ್ತರಿಸಿ ತನ್ನ ಜನ್ಮದಿನ ಆಚರಣೆ ಮಾಡಿಕೊಂಡಿದ್ದಾರೆ. ಅವರೊಂದಿಗೆ ಇನ್ನೂ ನಾಲ್ವರು ಯೋಧರು ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. ಎಲ್ಲರೂ ಚಪ್ಪಾಳೆ ತಟ್ಟುತ್ತ, ತಮ್ಮ ಸಹೋದ್ಯೋಗಿ ಮಿತ್ರನಿಗೆ ಶುಭ ಕೋರಿದ್ದಾರೆ. ಕೇಕ್​ ಕಟ್​ ಮಾಡಿದ ಯೋಧ, ನಂತರ ಅದರ ತುಂಡನ್ನು ತನ್ನ ಸ್ನೇಹಿತರಿಗೆ ಕೊಡುವುದನ್ನು ವಿಡಿಯೋದಲ್ಲಿ ನೋಡಬಹುದು.ಇದನ್ನೂ ಓದಿ:ರಾಜಸ್ಥಾನದಲ್ಲಿ ಅಧಿಕಾರ ಹಿಡಿಯುವ ಬಿಜೆಪಿ ಹಾದಿ ಬಹಳ ಕಷ್ಟ, ಕಷ್ಟ
14 ಸೆಕೆಂಡ್​​ಗಳ ಈ ವಿಡಿಯೋವನ್ನು ಪೋಸ್ಟ್​ ಮಾಡಿಕೊಂಡ ವೀರೇಂದ್ರ ಸೆಹ್ವಾಗ್​ ಅವರು, ಯೋಧನೋರ್ವ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಚೀಸ್​ ಕೇಕ್​ನ್ನು ಮರೆತುಬಿಡಿ. ಹಿಮದ ಕೇಕ್​​ನ ಸೊಗಸು ಯೋಧರಿಗೆ ಮಾತ್ರ ಗೊತ್ತಿರಲು ಸಾಧ್ಯ. ಇವರ ತ್ಯಾಗ ಮತ್ತು ಉತ್ಸಾಹವನ್ನು ಬಣ್ಣಿಸಲು ಪದಗಳೇ ಸಾಕಾಗುವುದಿಲ್ಲ ಎಂದು ಕ್ಯಾಪ್ಷನ್​ ಬರೆದಿದ್ದಾರೆ.ವಿಡಿಯೋ ನೋಡಿದ ನೆಟ್ಟಿಗರೂ ಸಹ ಭಾವನಾತ್ಮಕವಾಗಿ ಕಾಮೆಂಟ್​ ಮಾಡಿದ್ದಾರೆ. ಲಕ್ಷಾಂತರ ಮಂದಿ ರೀಟ್ವೀಟ್ ಮಾಡಿಕೊಂಡಿದ್ದಾರೆ.
ಇನ್ನು ನೆಟ್ಟಿಗರೂ ಸಹ ಆ ಯೋಧನಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಇದು ಹೃದಯ ಸ್ಪರ್ಶಿ ವಿಡಿಯೋ ಎಂದು ಅನೇಕರು ಹೇಳಿದ್ದರು. ಮತ್ತೆ ಅನೇಕರು, ಯೋಧರಿಗೆ ಇಲ್ಲಿಂದಲೇ ಸೆಲ್ಯೂಟ್ ಎಂದು ಕಾಮೆಂಟ್​ ಮಾಡಿದ್ದಾರೆ. (ಏಜೆನ್ಸೀಸ್​)
https://www.facebook.com/VVani4U/videos/329750361759802/?t=0
A soldier celebrating his birthday.Forget cheese cake, the beauty of a Snow cake, which only a soldier knows.No word are enough to describe their sacrifices and resilience.pic.twitter.com/sr5xGSdUNU
— Virender Sehwag (@virendersehwag)July 12, 2020

ನಾನು ಮರಣಶಯ್ಯೆಯಲ್ಲಿದ್ದೇನೆ … ಸಾಯುವ 15 ಗಂಟೆ ಮುನ್ನ ಪೋಸ್ಟ್​ ಮಾಡಿದ್ದ ದಿವ್ಯಾ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + seven =
Remember me
