ಲಖನೌ:ಶಾಪ್​ ಒಂದರ ಮುಂದೆ ಪಾರ್ಕ್​ ಮಾಡಿದ್ದ ಟ್ರ್ಯಾಕ್ಟರ್​ ಇದ್ದಕ್ಕಿದ್ದಂತೆ ಚಾಲನೆಗೊಂಡು ಶಾಪ್​ನತ್ತ ನುಗ್ಗಿ ಗಾಜನ್ನು ಪುಡಿ ಪುಡಿ ಮಾಡಿದ ಘಟನೆ ಉತ್ತರ ಪ್ರದೇಶದ ಬಿಜನೂರ್​ ಎಂಬಲ್ಲಿ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.
ಪ್ರಸಿದ್ಧ ಶೂ ಅಂಗಡಿಯೊಂದರ ಹೊರಗೆ ನಿಂತಿದ್ದ ಟ್ರ್ಯಾಕ್ಟರ್ ಏಕಾಏಕಿ ಚಾಲಕನಿಲ್ಲದೇ ತಾನಾಗಿಯೇ ಸ್ಟಾರ್ಟ್​ ಆಗಿ ಶೋರೂಂ ಒಳಗೆ ನುಗ್ಗಿ ಅಂಗಡಿಯ ಗ್ಲಾಸ್ ಗೇಟ್ ಒಡೆದು ಹಾಕಿದೆ. ನಂಬಲು ಅಸಾಧ್ಯವಾದ ಘಟನೆ ನೋಡಿ ಶೋರೂಮ್​ನ ನೌಕರರು ಬೆಚ್ಚಿಬಿದ್ದಿದ್ದಾರೆ.
ಇದನ್ನೂ ಓದಿ:ಬಾಯಿಗೆ ಹಗ್ಗ ಕಟ್ಟಿರೋ ಸ್ಥಿತಿಯಲ್ಲಿ ಮೊಸಳೆ‌ ಪತ್ತೆ: ಆಹಾರ ಸೇವಿಸಲಾಗದೇ ನದಿಯಿಂದ ರಸ್ತೆಗೆ ಎಂಟ್ರಿ
ಟ್ರ್ಯಾಕ್ಟರ್​ ನುಗ್ಗಿ ಬರುವಾಗ ಪಕ್ಕಕ್ಕೆ ಸರಿದು ನಿಲ್ಲುವ ಮೂಲಕ ನೌಕರರು ಗಾಯಗಳಿಂದ ಪಾರಾಗಿದ್ದಾರೆ. ಅದೇ ವೇಳೆ ಅಂಗಡಿಯ ವ್ಯಕ್ತಿಯೊಬ್ಬರು ಮುಂದೆ ಬಂದು ಟ್ರ್ಯಾಕ್ಟರ್ ಅನ್ನು ನಿಲ್ಲಿಸಿದರು. ಅಂಗಡಿಗೆ ಭಾರೀ ಹಾನಿಯಾಗಿದ್ದು, ಮುಂಭಾಗದ ಸಂಪೂರ್ಣ ಗಾಜಿನ ರಚನೆಯು ಒಡೆದು ಹೋಗಿದೆ.
ವರದಿಗಳ ಪ್ರಕಾರ ಮುಂಬರುವ ಹೋಳಿ ಹಬ್ಬದ ತಯಾರಿಗಾಗಿ ಪೊಲೀಸರು ಬಿಜ್ನೋರ್ ಪೊಲೀಸ್ ಠಾಣೆಯಲ್ಲಿ ಶಾಂತಿ ಸಮಿತಿಯ ಸಭೆಯನ್ನು ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ. ಈ ಸಭೆಯಲ್ಲಿ ಟ್ರ್ಯಾಕ್ಟರ್ ಮಾಲೀಕ ಕಿಶನ್ ಕುಮಾರ್ ಕೂಡ ಭಾಗಿಯಾಗಿದ್ದರು. ಪೊಲೀಸ್ ಠಾಣೆಯಿಂದ ಸ್ವಲ್ಪ ದೂರದಲ್ಲಿರುವ ಚಪ್ಪಲಿ ಅಂಗಡಿಯ ಮುಂದೆ ತನ್ನ ಟ್ರ್ಯಾಕ್ಟರ್ ನಿಲ್ಲಿಸಲಾಗಿತ್ತು. ಸರಿಸುಮಾರು ಒಂದು ಗಂಟೆಯ ನಂತರ ಪಾರ್ಕ್​ ಮಾಡಿದ್ದ ಟ್ರ್ಯಾಕ್ಟರ್ ಇದ್ದಕ್ಕಿದ್ದಂತೆ ಸ್ಟಾರ್ಟ್​ ಆಗಿ ಅಂಗಡಿಯತ್ತ ನುಗ್ಗಿತ್ತು. ಈ ಘಟನೆ ನಿಗೂಢತೆಗೂ ಸಾಕ್ಷಿಯಾಗಿದೆ.
ಇದನ್ನೂ ಓದಿ:ವಿಶೇಷ ಕ್ರಿಕೆಟರ್ ಸೈಯಾಮಿ; ನೈಜ ಘಟನೆಯಿಂದ ಸ್ಫೂರ್ತಿ ಪಡೆದ ಚಿತ್ರದಲ್ಲಿ ನಟನೆ
ಒಂದೆಡೆ ಅಂಗಡಿ ಮಾಲೀಕನಿಗೆ ಈ ಘಟನೆಯಿಂದ ಭಾರೀ ನಷ್ಟವಾದರೆ, ಮತ್ತೊಂದೆಡೆ ಈ ವಿಲಕ್ಷಣ ಘಟನೆಯ ವಿಡಿಯೋ ಆನ್‌ಲೈನ್‌ನಲ್ಲಿ ಭಾರೀ ವೈರಲ್ ಆದ ನಂತರ ನಗರದ ಜನರು ಈ ಬಗ್ಗೆ ಚರ್ಚಿಸತೊಡಗಿದ್ದಾರೆ. ಆದರೆ, ಶೋರೂಮ್​ನಲ್ಲಿ ಆಗಿರುವ ನಷ್ಟವನ್ನು ಭರಿಸುವಂತೆ ಶೂ ಶೋಮ್​ ವ್ಯವಸ್ಥಾಪಕರು ಟ್ರ್ಯಾಕ್ಟರ್ ಮಾಲೀಕರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.(ಏಜೆನ್ಸೀಸ್​)
Amazing incident…The tractor ran without a driver, broke the glass and entered the shoe showroom.The viral CCTV video is from#Bijnorof#UP.pic.twitter.com/YUzTKEPFcA
— Jes Bhullar (@jesbhullar)March 2, 2023

ಖ್ಯಾತ ಟಿಕ್​ಟಾಕರ್​ ಖಾಸಗಿ ವಿಡಿಯೋ ಲೀಕ್​: ಯಾರನ್ನು ನಂಬುವುದು ಅಂತ ಕಣ್ಣೀರಿಟ್ಟ ಯುವತಿ

ಹೆರಿಗೆಗೆಂದು ಆಸ್ಪತ್ರೆಗೆ ಹೋಗುವಾಗ ಗರ್ಭಿಣಿ ಪತ್ನಿ, ಪತಿ ಸಜೀವ ದಹನ: ನಿಗೂಢ ಪ್ರಶ್ನೆಗೆ ಕೊನೆಗೂ ಸಿಕ್ತು ಉತ್ತರ

ಖ್ಯಾತ ಟಿಕ್​ಟಾಕರ್​ ಖಾಸಗಿ ವಿಡಿಯೋ ಲೀಕ್​: ಯಾರನ್ನು ನಂಬುವುದು ಅಂತ ಕಣ್ಣೀರಿಟ್ಟ ಯುವತಿ

ಹಂಪಿ ಸ್ಮಾರಕಗಳ ಮೇಲೆ ನೃತ್ಯ ಪ್ರಕರಣ: ಮಂಡ್ಯ ಮೂಲದ ದೀಪಕ್​ ಗೌಡ ಬಂಧನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + six =
Remember me
