ಲಖನೌ:ಕೊಳಕು ವಿಚಾರದಲ್ಲಿ ಮಹಾರಾಷ್ಟ್ರದ ನಾಂದೇಡ್​ನಲ್ಲಿರುವ ಸರ್ಕಾರಿ​ ಆಸ್ಪತ್ರೆ ಈ ಹಿಂದೆ ಸುದ್ದಯಾಗಿತ್ತು. ಇದೀಗ ಉತ್ತರ ಪ್ರದೇಶದ ಮೊರದಾಬಾದ್​ನಲ್ಲಿರುವ ಸರ್ಕಾರಿ ಆಸ್ಪತ್ರೆ ಸಹ ತನ್ನ ನ್ಯೂನತೆ ವಿಚಾರವಾಗಿ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ.
ರೋಗಿಗಳನ್ನು ಉಪಚರಿಸುವ ಆಸ್ಪತ್ರೆ ತುಂಬಾ ಶುಚಿಯಾಗಿರಬೇಕು ಮತ್ತು ಇಲಿ, ನಾಯಿಯಂತಹ ಜೀವಿಗಳಿಂದ ಮುಕ್ತವಾಗಿರಬೇಕು. ಆದರೆ, ಮೊರಾದಬಾದ್​ನಲ್ಲಿರುವ ಸರ್ಕಾರಿ ಆಸ್ಪತ್ರೆಯ ಒಳಗೆ ಬೀದಿ ನಾಯಿಯೊಂದು ಪ್ರವೇಶ ಮಾಡಿ, ರೋಗಿಯ ಬೆಡ್​ ಪಕ್ಕದಲ್ಲಿ ಇಟ್ಟಿದ್ದ ಆಹಾರವನ್ನು ತಿಂದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಆಸ್ಪತ್ರೆಯ ಅವ್ಯವಸ್ಥೆ ಕಂಡು ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.
ವೈರಲ್​ ವಿಡಿಯೋ ಗಮನಕ್ಕೆ ಬರುತ್ತಿದ್ದಂತೆ ಮೊರಾದಬಾದ್​ ಜಿಲ್ಲಾಸ್ಪತ್ರೆಯ ಮುಖ್ಯ ವೈದ್ಯಕೀಯ ಅಧಿಕಾರಿ (ಸಿಎಂಒ) ತನಿಖೆಗೆ ಆದೇಶ ಹೊರಡಿಸಿದ್ದಾರೆ. 30 ಸೆಕೆಂಡ್​ ವಿಡಿಯೋದಲ್ಲಿ ಬೀದಿ ನಾಯಿಯೊಂದು ರೋಗಿಯ ಬೆಡ್​ ಪಕ್ಕದಲ್ಲಿ ಇರುವ ಆಹಾರದ ಪ್ಯಾಕೆಟ್​ ಮತ್ತು ಹಾಲನ್ನು ಸೇವಿಸಿದೆ. ಆಸ್ಪತ್ರೆಯ ಒಳಾಂಗಣದಲ್ಲಿ ಇಂಥದ್ದೊಂದು ಘಟನೆ ನಡೆದಿರುವುದು ನಿಜಕ್ಕೂ ದುರಾದೃಷ್ಟಕರ.
ये दुर्लभ तस्वीर उत्तर प्रदेश के मुरादाबाद ज़िला अस्पताल की है। मरीज़ बेड पर लेटा है और बग़ल में रखा उसका खाना आवारा कुत्ता खा रहा।@DMMoradabad#Moradabad@Comm_Moradabad@CMOfficeUPpic.twitter.com/SeflNOp4Kb
— UP Moradabad (@Up_Moradabad)October 10, 2023

ಸಿಎಂಒ ಡಾ. ಕುಲದೀಪ್ ಸಿಂಗ್ ಮಾತನಾಡಿ ವಿಡಿಯೋವನ್ನು ನನ್ನ ಗಮನಕ್ಕೆ ತರಲಾಗಿದ್ದು, ಆಸ್ಪತ್ರೆಯ ಮುಖ್ಯ ವೈದ್ಯಕೀಯ ಅಧೀಕ್ಷಕರ (CMS) ನೇತೃತ್ವದಲ್ಲಿ ಈ ವಿಷಯದ ಬಗ್ಗೆ ತನಿಖೆಗೆ ಆದೇಶಿಸಿದ್ದೇಬೆ. ಆಸ್ಪತ್ರೆಯ ವಾರ್ಡ್‌ಗೆ ಯಾವುದೇ ಪ್ರಾಣಿ ಪ್ರವೇಶಿಸಿದೇ ಇರದಂತೆ ಭದ್ರತೆ ಕೈಗೊಳ್ಳಲು ಸೂಚನೆ ನೀಡಿದ್ದೇನೆ ಎಂದು ಹೇಳಿದ್ದಾರೆ.
ಸುದ್ದು ಮಾಡಿತ್ತು ನಾಂದೇಡ್​ ಆಸ್ಪತ್ರೆಇತ್ತೀಚೆಗಷ್ಟೇ ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ 48 ಗಂಟೆಗಳಲ್ಲಿ 31 ಸಾವುಗಳು ಸಂಭವಿಸಿತ್ತು. ಇದು ಸ್ಥಳೀಯ ಮಟ್ಟದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಇಡೀ ಆಸ್ಪತ್ರೆಗೆ ಗಬ್ಬು ನಾರುತ್ತಿತ್ತು. ಆಸ್ಪತ್ರೆಯ ಪಕ್ಕದಲ್ಲೇ ಹಂದಿಗಳು ಓಡಾಡುವ ವಿಡಿಯೋಗಳು ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದವು.
ಘಟನೆ ತಿಳಿದ ಕೂಡಲೇ ಶಿವಸೇನಾ ಸಂಸದ ಹೇಮಂತ್ ಪಾಟೀಲ್ ಆಸ್ಪತ್ರೆಗೆ ಭೇಟಿ ನೀಡಿ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದರು. ತಿಂಗಳಿಂದ ಬಳಕೆಯಾಗದೆ ಉಳಿದಿರುವ ಸ್ನಾನಗೃಹಗಳು ಕೊಳಕಿನಿಂದ ತುಂಬಿರುವುದು ಕಂಡುಬಂದಿತ್ತು. ಮಕ್ಕಳ ಬ್ಲಾಕ್‌ನಲ್ಲಿರುವ ಶೌಚಾಲಯಗಳಿಗೆ ಬೀಗ ಹಾಕಲಾಗಿದ್ದು, ಮಹಿಳೆಯರ ಬ್ಲಾಕ್‌ನಲ್ಲಿ ಮದ್ಯದ ಬಾಟಲಿಗಳು ತುಂಬಿರುವುದನ್ನು ಕಂಡಿದ್ದರು. ಆಸ್ಪತ್ರೆಯ ಸುತ್ತಮುತ್ತ ಹಂದಿಗಳು ಸೇರಿದಂತೆ ಹಲವು ಪ್ರಾಣಿಗಳು ಓಡಾಡುತ್ತಿದ್ದವು. ಇದೆಲ್ಲವನ್ನು ಗಮನಿಸಿದ ಸಂಸದರು ಆಸ್ಪತ್ರೆಯ ಡೀನ್ ಕೈಯಿಂದಲೇ ಶೌಚಾಲಯವನ್ನು ಕ್ಲೀನ್​ ಮಾಡಿಸಿದ್ದರು. ಇದು ಕೂಡ ವಿವಾದಕ್ಕೆ ಗುರಿಯಾಗಿತ್ತು.(ಏಜೆನ್ಸೀಸ್​)
VIDEO | ನಾಂದೇಡ್ ಸರ್ಕಾರಿ ಆಸ್ಪತ್ರೆಯಲ್ಲಿ 31 ಸಾವು; ಡೀನ್ ಕೈಯಲ್ಲಿ ಶೌಚಾಲಯ ಸ್ವಚ್ಛಗೊಳಿಸಿದ ಬಿಜೆಪಿ ಸಂಸದ

ಶ್ರೀದೇವಿ ಗ್ಲಾಮರ್​ಗಾಗಿ ಮಾಡಿದ ಆ ಡೈಯಟ್ ಅಷ್ಟು ಡೇಂಜರ್ರಾ? ಆರೋಗ್ಯ ನಿಪುಣರು ಹೇಳುವುದು ಸಹ….

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − six =
Remember me
