ಉತ್ತರ ಭಾರತದ ಕೆಲವು ರಾಜ್ಯಗಳಿಗೆ ಈಗ ಲಕ್ಷೋಪಲಕ್ಷ ಮಿಡತೆಗಳು ದಾಳಿ ಇಟ್ಟಿವೆ. ಕರೊನಾ ಲಾಕ್ ಡೌನ್ ನಿಂದ ಈಗಷ್ಟೇ ಹೊರಬಂದು ನಿಟ್ಟುಸಿರು ಬಿಟ್ಟಿರುವ ಜನರು, ಇವುಗಳ ಹಾವಳಿಯಿಂದ ಮತ್ತೆ ಮನೆ, ಅಂಗಡಿಗಳ ಬಾಗಿಲು ಭದ್ರಪಡಿಸಿಕೊಂಡು ಒಳಗೆ ಕುಳಿತು ಕೊಳ್ಳಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಿಸುತ್ತಿದ್ದಾರೆ.
https://www.facebook.com/VVani4U/videos/180074596663815/
ಮಿಡತೆ ದಾಳಿ ಕುರಿತು ಕಳೆದ ಕೆಲವು ದಿನಗಳಿಂದ ವಿಜಯವಾಣಿ.ನೆಟ್ ವರದಿಯನ್ನು ಪ್ರಕಟಿಸುತ್ತ ಬಂದಿದೆ. ಅವುಗಳ ವಿವರ ಇಲ್ಲಿ ಕೆಳಗಿದೆ..
ಹಲವು ರಾಜ್ಯಗಳಲ್ಲಿ ಹಾವಳಿ ಎಬ್ಬಿಸಿದ ಮಿಡತೆ ದಂಡು ಈಗ ಕರ್ನಾಟಕದತ್ತ!
ರಾಜಸ್ಥಾನ, ಮಧ್ಯಪ್ರದೇಶ, ಉತ್ತರ ಪ್ರದೇಶದಲ್ಲಿ ಬೆಳೆಗಳನ್ನು ನಾಶ ಮಾಡಿದ ಮಿಡತೆಗಳ ಹಿಂಡು ಈಗ ಮಹಾರಾಷ್ಟ್ರದತ್ತ ನುಗ್ಗಿದ್ದು, ಸದ್ಯದಲ್ಲೇ ಕರ್ನಾಟಕಕ್ಕೂ ಕಾಲಿಡುವ ಸಾಧ್ಯತೆ ಬಲವಾಗಿದೆ. ಈಗಾಗಲೇ ಮಹಾರಾಷ್ಟ್ರದ ವಿದರ್ಭಕ್ಕೆ ದಾಳಿ ಇಟ್ಟಿರುವ ಲಕ್ಷಾಂತರ ಮಿಡತೆಗಳು ಮಹಾರಾಷ್ಟ್ರದ ಸಮೀಪದಲ್ಲಿರುವ ಕರ್ನಾಟಕದ ಜಿಲ್ಲೆಗಳಿಗೂ ವ್ಯಾಪಿಸುವ ಅಪಾಯದ ಕುರಿತು ಕೃಷಿ ತಜ್ಞರು ಎಚ್ಚರಿಸಿದ್ದಾರೆ. ಇವು ಕರ್ನಾಟಕವನ್ನು ಪ್ರವೇಶಿಸಬಾರದೆಂದಿದ್ದರೆ ಇವುಗಳನ್ನು ಮಹಾರಾಷ್ಟ್ರದಲ್ಲೇ ಅಲ್ಲಿನ ಸರ್ಕಾರ ಸಮರ್ಥವಾಗಿ ನಿಯಂತ್ರಿಸಬೇಕು. ಇಲ್ಲದಿದ್ದರೆ ಕರ್ನಾಟಕದ ರೈತರಿಗೂ ಆತಂಕ ತಪ್ಪಿದ್ದಲ್ಲ.ವಿವರಗಳಿಗೆ ಈ ಪ್ಯಾರಾದ ಮೇಲಿನ ಹೆಡ್​ಲೈನ್ ಕ್ಲಿಕ್ ಮಾಡಿ..
ಮಹಾರಾಷ್ಟ್ರ ತಲುಪಿದ ಮಿಡತೆಗಳ ಗುಂಪು, ಕರ್ನಾಟಕಕ್ಕೂ ಕಾದಿದೆಯಾ ಕಂಟಕ?
ನಾಗ್ಪುರ:ಬೆಳೆದು ನಿಂತಿರುವ ಪೈರಿನ ಮೇಲೆ ದಾಳಿ ಮಾಡಿ, ಅವನ್ನು ಭಕ್ಷಿಸಿ ಧ್ವಂಸಗೊಳಿಸುತ್ತಿರುವ ಮಿಡತೆಗಳ ಗುಂಪು ಮಹಾರಾಷ್ಟ್ರವನ್ನು ತಲುಪಿವೆ. ಮುಂದುವರಿದು ಇವು ಯಾವುದೇ ಕ್ಷಣದಲ್ಲಿ ಕರ್ನಾಟಕವನ್ನೂ ಪ್ರವೇಶಿಸಿ, ಬೆಳೆಗಳನ್ನು ಹಾಳು ಮಾಡುವ ಸಾಧ್ಯತೆ ದಟ್ಟವಾಗಿದೆ ಎಂಬ ಆತಂಕ ವ್ಯಕ್ತವಾಗುತ್ತಿದೆ. ಮೊದಲಿಗೆ ಪಾಕಿಸ್ತಾನದಲ್ಲಿ ಕಾಣಿಸಿಕೊಂಡ ಮಿಡತೆಗಳ ಗುಂಪು, ಅಲ್ಲಿನ ಬೆಳೆಗಳನ್ನು ಹಾಳು ಮಾಡಿದವು. ಬಳಿಕ ಏಪ್ರಿಲ್​ 19ರಂದು ರಾಜಸ್ಥಾನದ ಮೂಲಕ ಭಾರತವನ್ನು ಪ್ರವೇಶಿಸಿದವು. ಅಲ್ಲೆಲ್ಲೆ ಬೆಳಗಳಿಗೆ ಹಾನಿ ಮಾಡುತ್ತಾ, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶಗಳಿಗೂ ಹಬ್ಬಿ ಇದೀಗ ಮಹಾರಾಷ್ಟ್ರದ ನಾಗ್ಪುರದ ನಾರ್​ಖೇಡ್​ ಮತ್ತು ಕಟೋಲ್​ನಲ್ಲಿ ಹಾವಳಿ ಇಡುತ್ತಿವೆ.ವಿವರಗಳಿಗೆ ಈ ಪ್ಯಾರಾದ ಮೇಲಿನ ಹೆಡ್​ಲೈನ್ ಕ್ಲಿಕ್ ಮಾಡಿ..
ಮಧ್ಯಪ್ರದೇಶದಲ್ಲಿ ಮಿಡತೆ ದಂಡಯಾತ್ರೆ
ಭೋಪಾಲ್:ಕರೊನಾ ಹಾವಳಿಯಿಂದ ತತ್ತರಿಸಿರುವ ಮಧ್ಯಪ್ರದೇಶದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತೆ ಮಿಡತೆಗಳ ಕಾಟ ಸಂಕಷ್ಟ ತಂದಿದೆ. ಲಕ್ಷೋಪಲಕ್ಷ ಸಂಖ್ಯೆ ಮಿಡತೆಗಳು ಹೊಲಗಳ ಮೇಲೆ ದಾಳಿ ನಡೆಸಿ ಬೆಳೆ ತಿಂದು ಹಾಕುತ್ತಿರುವುದರಿಂದ ರೈತರು ಆತಂಕಕ್ಕೀಡಾಗಿದ್ದಾರೆ. ಇದು ರಾಜ್ಯದಲ್ಲಿ ಕಳೆದ 27 ವರ್ಷಗಳ ಕಾಲಾವಧಿಯಲ್ಲಿ ಮಿಡತೆಗಳು ಮಾಡಿದ ದೊಡ್ಡ ಅನಾಹುತವಾಗಿದೆ.ವಿವರಗಳಿಗೆ ಈ ಪ್ಯಾರಾದ ಮೇಲಿನ ಹೆಡ್​ಲೈನ್ ಕ್ಲಿಕ್ ಮಾಡಿ..
ಭೀಕರ ಕರಡಿ ದಾಳಿಗೆ ತತ್ತರಿಸಿದ ಚನ್ನಪಟ್ಟಣ: ನಗರಸಭೆ ಮಾಜಿ ಸದಸ್ಯೆ ಸ್ಥಿತಿ ಗಂಭೀರ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:eighteen − eleven =
Remember me
