ನವದೆಹಲಿ:ಇತ್ತೀಚೆಗೆ ಟಿಕ್​ಟಾಕ್​ ಬಳಕೆ ಹೆಚ್ಚಾಗಿದೆ. ಮನೋರಂಜನಾ ಆ್ಯಪ್​ ಆಗಿರುವ ಟಿಕ್​ಟಾಕ್​ ಪ್ರತಿಭೆಗಳಿಗೆ ಅವಕಾಶ ಕೊಡುವುದರ ಜತೆ ಅನೇಕ ಜೀವಗಳಿಗೂ ಮುಳ್ಳಾಗಿದೆ. ಟಿಕ್​ಟಾಕ್​ ವಿಡಿಯೋ ಮಾಡಲು ಹೋಗಿ ಯುವಕನೊಬ್ಬ ಪ್ರಾಣ ಕೊಂಚದರಲ್ಲಿ ಉಳಿದಿರುವ ಘಟನೆಯೊಂದು ನಡೆದಿದ್ದು ಆ ವಿಡಿಯೋ ಇದೀಗ ವೈರಲ್​ ಆಗಿದೆ.
ಯುವಕನೊಬ್ಬ ರೈಲಿನ ಬಾಗಿಲಲ್ಲಿ ನೇತಾಡುತ್ತಿರುತ್ತಾನೆ. ಕಿಟಕಿಯಿಂದ ನನ್ನನ್ನು ವಿಡಿಯೋ ಮಾಡು ಎಂದು ತನ್ನ ಗೆಳೆಯನಿಗೆ ಆತ ಮೊಬೈಲ್​ ಕೊಟ್ಟು ಹೋಗಿರುತ್ತಾನೆ. ವೇಗವಾಗಿ ಚಲಿಸುತ್ತಿದ್ದ ರೈಲಿನ ಬಾಗಿಲಿನಲ್ಲಿ ನೇತಾಡುವ ಸ್ಟಂಟ್​ ಮಾಡಲು ಹೊರಟ ಯುವಕ ಕೈ ಜಾರಿ ಕೆಳಗೆ ಬೀಳುತ್ತಾನೆ. ಬಿದ್ದ ಹೊಡೆತಕ್ಕೆ ಯುವಕನ ದೇಹ ಇನ್ನೇನು ರೈಲಿನ ಅಡಿಗೆ ಸಿಲುಕೇ ಬಿಟ್ಟಿತು ಎನ್ನುವಷ್ಟರಲ್ಲಿ ಅದೃಷ್ಟವಶಾತ್​ ಯುವಕ ಹಳಿಯಿಂದ ಸ್ವಲ್ಪ ಸರಿದು ಜೀವ ಉಳಿಸಿಕೊಳ್ಳುತ್ತಾನೆ.
ಇಂತದ್ದೊಂದು ವಿಡಿಯೋ ಟಿಕ್​ಟಾಕ್​, ಫೇಸ್​ಬುಕ್​ ಸೇರಿದಂತೆ ಅನೇಕ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಆ ವಿಡಿಯೋವನ್ನು ರೈಲ್ವೆ ಸಚಿವ ಪಿಯೂಷ್​ ಗೋಯಲ್​ ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. “ಚಲಿಸುವ ರೈಲಿನಲ್ಲಿ ಸಾಹಸವನ್ನು ತೋರಿಸುವುದು ಹೇಡಿತನವೇ ಹೊರತು ಧೈರ್ಯವಲ್ಲ. ನಿಮ್ಮ ಜೀವನವು ಅಮೂಲ್ಯವಾದುದು. ಅದನ್ನು ಅಪಾಯಕ್ಕೆ ಒಳಪಡಿಸಬೇಡಿ. ನಿಯಮಗಳನ್ನು ಅನುಸರಿಸಿ, ಮತ್ತು ಸುರಕ್ಷಿತ ಪ್ರಯಾಣವನ್ನು ಆನಂದಿಸಿ “ಎಂದು ಟ್ವೀಟ್​ ಮಾಡಿದ್ದಾರೆ.
ರೈಲ್ವೆ ಸಚಿವರ ಈ ಟ್ವೀಟ್​ಗೆ ಭಾರೀ ಪ್ರಮಾಣದ ಸ್ಪಂದನೆ ವ್ಯಕ್ತವಾಗುತ್ತಿದೆ.(ಏಜೆನ್ಸೀಸ್​)
चलती ट्रेन में स्टंट दिखाना बहादुरी नही, मूर्खता की निशानी है। आपका जीवन अमूल्य है, इसे खतरे में ना डालें।
नियमों का पालन करें, और सुरक्षित यात्रा का आनंद लें।pic.twitter.com/tauidfOqRj
— Piyush Goyal Office (@PiyushGoyalOffc)February 18, 2020

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 4 =
Remember me
