ಸೂರತ್‌:ರಸ್ತೆಯಲ್ಲಿ ನಡೆಯುವಾಗ ವಜ್ರ, ಬಂಗಾರ, ಹಣ ಸಿಕ್ಕರೆ ಏನಾಗುತ್ತದೆ? ಊಹಿಸಿದರೆ ಎಷ್ಟು ಖುಚಿಯಾಗುತ್ತದೆ ಅಲ್ವಾ? .. ಇದೆ ರೀತಿ ಸೂರತ್‌ನ ರಸ್ತೆಯಲ್ಲಿ ವಜ್ರಗಳು ದೊರೆತಿದ್ದು, ಸ್ಥಳೀಯರು ವಜ್ರಗಳನ್ನು ಹೆಕ್ಕಲು ಮುಗಿಬಿದ್ದಿದ್ದಾರೆ. ಈ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​​​ ಆಗುತ್ತಿದೆ.
ನಿಜವಾಗಿ ಏನಾಯಿತು ಎಂದರೆ, ವಜ್ರದ ಮಾರುಕಟ್ಟೆಯಲ್ಲಿ ವಜ್ರಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ ಎಂಬ ಈ ಸುದ್ದಿ ತಿಳಿದ ತಕ್ಷಣ ಅಪಾರ ಸಂಖ್ಯೆಯಲ್ಲಿ ಜನರು ಮುಗಿಬಿದ್ದರು. ಅಂಗಡಿಯವರು, ಜನಸಾಮಾನ್ಯರು, ಎಲ್ಲರೂ ತಮ್ಮ ತಮ್ಮ ಕೆಲಸ ಬಿಟ್ಟು ರಸ್ತೆಯಲ್ಲಿ ವಜ್ರಗಳ ಹುಡುಕಾಟದಲ್ಲಿ ತೊಡಗಿದರು. ಮಾರುಕಟ್ಟೆ ಜನಸಂದಣಿಯಿಂದ ಕೂಡಿತ್ತು. ಮಕ್ಕಳು, ಮಹಿಳೆಯರು, ಪುರುಷರು, ಪ್ರತಿಯೊಬ್ಬರೂ ವಜ್ರವನ್ನು ಹೆಕ್ಕಿದ್ದಾರೆ. ಈ ಘಟನೆಯನ್ನು ಕೆಲವರು ವಿಡಿಯೋ ಮಾಡಿದ್ದಾರೆ. ಈ ವೀಡಿಯೋ ಗುಜರಾತ್‌ನ ಸೂರತ್‌ನ ಮಿನಿ ಮಾರುಕಟ್ಟೆ ಪ್ರದೇಶದ್ದಾಗಿದೆ.
ये हीरे ढूंढने की मशक्कत है!
दरसल, सूरत में हीरों का पैकेट सड़क पर गिर जाने की अफवा फैल गई
और फिर लोग हीरे की खोज करने लगे
कुछ लोगों को हीरे मिले भी….लेकिन अफसोस…वो नकली थे…#Diamonds#Surat#jewellerypic.twitter.com/uaKg4A5Rlk
— Archana Pushpendra (@archanapsp)September 25, 2023

ಸೂರತ್‌ನ ಮಿನಿ ಬಜಾರ್‌ನಿಂದ ಖೋಡಿಯಾರ್ ಪೇಟೆಗೆ ಹೋಗುವ ರಸ್ತೆಯಲ್ಲಿ ಇದ್ದಕ್ಕಿದ್ದಂತೆ ಜನರು ಜಮಾಯಿಸಿ ರಸ್ತೆಯಲ್ಲಿ ವಜ್ರಗಳನ್ನು ಹುಡುಕಲು ಪ್ರಾರಂಭಿಸಿದ್ದಾರೆ. ಜನರನ್ನು ವಿಚಾರಿಸಿದಾಗ ಉದ್ಯಮಿಯೊಬ್ಬರ ವಜ್ರದ ಪೊಟ್ಟಣ ರಸ್ತೆಯಲ್ಲಿ ಬಿದ್ದಿದೆ ಎಂದು ತಿಳಿಸಿದ್ದಾಗಿ ವರದಿಯಾಗಿದೆ.
ವಜ್ರದ ವ್ಯಾಪಾರಿಯೊಬ್ಬರು ಮಾತನಾಡಿ, “ಇವು ನಿಜವಾದ ವಜ್ರಗಳಲ್ಲ. ಉತ್ತಮ ಗುಣಮಟ್ಟದ ಸಿಂಥೆಟಿಕ್ ವಜ್ರಗಳೂ ಅಲ್ಲ. ಆಭರಣ ಅಥವಾ ಸೀರೆ ಕೆಲಸದಲ್ಲಿ ಬಳಸುವ ನಕಲಿ ವಜ್ರಗಳು ಎಂಬ ಚರ್ಚೆ ನಡೆಯುತ್ತಿದೆ” ಎಂದು ತಿಳಿಸಿದ್ದಾರೆ.
ವಜ್ರಗಳು ನಿಜವೋ ನಕಲಿಯೋ ಎಂದು ಪರಿಶೀಲಿಸಿದಾಗ ತನಿಖೆ ವೇಳೆ ಅವು ಅಮೆರಿಕದ ವಜ್ರಗಳು ಎಂದು ತಿಳಿದುಬಂದಿದೆ. ಇದು ನಿಜವಾದ ವಜ್ರಕ್ಕಿಂತ ಕಡಿಮೆ ವೆಚ್ಚವಾಗುತ್ತದೆ. ಇವುಗಳನ್ನು ಪ್ರತಿ ಕೆಜಿಗೆ ಮಾರಾಟ ಮಾಡಲಾಗುತ್ತದೆ ಎಂದು ಕೂಡಾ ಹೇಳಲಾಗುತ್ತದೆ. ಆದರೆ ಈ ಕುರಿತಾಗಿ ಪೊಲೀಸರು ಏನಾದರು ತನಿಖೆ ಕೈಗೊಂಡರೆ ನಿಖರವಾದ ಮಾಹಿತಿ ಹೊರ ಬೀಳಲಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + 6 =
Remember me
