ನವದೆಹಲಿ :ಕರೊನಾದಿಂದಾಗಿ 2020 ರಿಂದ ಬಹು ಜನಪ್ರಿಯವಾದದ್ದೆಂದರೆ ‘ವರ್ಕ್​ ಫ್ರಂ ಹೋಂ’. ಮನೆಯವರೊಂದಿಗೆ ಇದ್ದುಕೊಂಡೇ ಕೆಲಸವನ್ನೂ ಪೂರೈಸುವ ಅವಕಾಶ ಎಂದು ಕೆಲವರೆಂದರೆ, ಕೆಲಸಕ್ಕೂ ಕುಟುಂಬಜೀವನಕ್ಕೂ ಇದ್ದ ಅಂತರವೇ ಹಾಳಾಯಿತು ಎಂದು ಮತ್ತೆ ಕೆಲವರು ಹೇಳುತ್ತಾರೆ.
ಇದೀಗ, ಇದ್ದಲ್ಲಿಂದಲೇ ಆಫೀಸಿನ ಕೆಲಸ ಮಾಡುವ ಮತ್ತೊಂದು ವಿಧಾನವನ್ನು ಫನ್ನಿ ವಿಡಿಯೋ ಒಂದು ಜಾಹೀರುಗೊಳಿಸಿದೆ. ವಿವಾಹ ಸಂಬಂಧವಾಗಿ ಜನಪ್ರಿಯವಾಗಿರುವ ದುಲ್ಹನಿಯಾ ಎಂಬ ಇನ್ಸ್​ಟಾಗ್ರಾಂ ಪೇಜ್​ನಲ್ಲಿ ಶೇರ್ ಮಾಡಲಾಗಿರುವ ಈ ವಿಡಿಯೋ ವೈರಲ್ ಆಗಿ ಜನರಿಗೆ ಕಚಗುಳಿ ಇಡುತ್ತಿದೆ. ಈ ವಿಡಿಯೋ ತುಣುಕಿಗೆ – “ವರ್ಕ್​ ಫ್ರಂ ಹೋಂ ಅಲ್ಲ, ಇದು ವರ್ಕ್​ ಫ್ರಂ ವೆಡ್ಡಿಂಗ್” ಎಂಬ ಶೀರ್ಷಿಕೆ ಕೊಟ್ಟಿದ್ದಾರೆ!


A post shared by Dulhaniyaa.com-Indian Weddings (@dulhaniyaa)
ಮದುವೆಮನೆಯಲ್ಲಿ ಶಾಸ್ತ್ರವನ್ನು ಆರಂಭಿಸಲು ಪಾಲಕರು ಕಾಯುತ್ತಿದ್ದರೆ, ವರನು ಲ್ಯಾಪ್​ಟಾಪನ್ನು ಹಿಡಿದು ಏನೋ ಕೆಲಸ ಮಾಡುತ್ತಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ಕ್ಯಾಮೆರಾ ಈ ಕಡೆಗೆ ಸರಿದಾಗ ಸಿಂಗಾರಗೊಂಡು ಕುಳಿತಿರುವ ವಧುವು ನಗೆ ಹರಿಸುತ್ತಾಳೆ. ಮತ್ತೆ ವರನೆಡೆಗೆ ಕ್ಯಾಮೆರಾ ಹೋಗುವ ಹೊತ್ತಿಗೆ ಆತ ಲ್ಯಾಪ್​ಟಾಪನ್ನು ತನ್ನ ಸ್ನೇಹಿತನಿಗೆ ಕೊಟ್ಟು ಮದುವೆಗೆ ಸಿದ್ಧವಾಗುತ್ತಾನೆ.
ಈ ವಿಡಿಯೋಗೆ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ ಬರುತ್ತಿದ್ದರೆ, ಈ ಮದುವೆಯಲ್ಲಿ ಭಾಗವಹಿಸಿದವರು ಬೇರೆಯೇ ವಿವರಣೆ ನೀಡಿದ್ದಾರೆ. ವರನು ಮದುವೆಗೆ ಬರಲಾಗದ ಮಂದಿ ಶಾಸ್ತ್ರವನ್ನು ನೋಡಲು ಅನುಕೂಲವಾಗುವಂತೆ, ವಿಡಿಯೋ ಕಾಲ್​ ಸೆಟ್​ ಮಾಡುತ್ತಿದ್ದ ಅಷ್ಟೆ ಎಂದಿದ್ದಾರೆ.(ಏಜೆನ್ಸೀಸ್)
ಗುರುಪೂರ್ಣಿಮೆಗೆ ಶ್ರೀ ಸಾಯಿ ಬಾಬಾಗೆ ವಿಶೇಷ ಪೂಜೆ, ಅಲಂಕಾರ

ಒಲಿಂಪಿಕ್ಸ್​: ಮೆಡಲ್ ರೌಂಡ್​​ಗೆ ಭಾರತದ ಸೌರಭ್ ಚೌಧರಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × two =
Remember me
