ಬೆಂಗಳೂರು:ಇತ್ತೀಚೆಗೆ ನಿಧನರಾದ ಕನ್ನಡದ ಯುವರತ್ನ ಪುನೀತ್​ ರಾಜ್​ಕುಮಾರ್​ ಅವರು ನೇತ್ರದಾನ ಮಾಡಿ ಉದಾತ್ತ ಆದರ್ಶವನ್ನು ಹುಟ್ಟುಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಎಷ್ಟೋ ಜನರು ತಮ್ಮ ಸಾವಿನೊಂದಿಗೆ ಅಳಿಸಿಹೋಗುವ ಕಣ್ಣುಗಳನ್ನು ದಾನ ಮಾಡಿ ಇತರರ ಬದುಕಿನಲ್ಲಿ ಬೆಳಕು ಮೂಡಿಸಲು ಮುಂದಾಗುತ್ತಿದ್ದಾರೆ. ಇದೇ ಸಂದರ್ಭಕ್ಕೆ, ಪುಟ್ಟ ಬಾಲೆಯೊಬ್ಬಳು ಕನ್ನಡಕದಿಂದ ದೃಷ್ಟಿ ಸುಧಾರಿಸಿದಾಗ ತನ್ನ ಸುತ್ತಲ ಜಗತ್ತನ್ನು ವಿಸ್ಮಯದಿಂದ ನೋಡುವ ವಿಡಿಯೋ ಒಂದು ಜಾಲತಾಣದಲ್ಲಿ ವೈರಲ್​ ಆಗಿದೆ.
ಪುಟ್ಟ ಹೆಣ್ಣುಮಗುವಿಗೆ ಅವಳ ಅಪ್ಪ ಗುಲಾಬಿ ಬಣ್ಣದ ಹೊಸ ಕನ್ನಡಕವನ್ನು ತಂದುಕೊಟ್ಟಾಗ, ಅವಳು ತೋರುವ ಪ್ರತಿಕ್ರಿಯೆಯನ್ನು ಈ ವಿಡಿಯೋದಲ್ಲಿ ನೋಡಬಹುದು. ಗುಡ್​ನ್ಯೂಸ್​ ಮೂವ್​ಮೆಂಟ್​ ಎಂಬ ಟ್ವಿಟರ್​​ ಖಾತೆಯಲ್ಲಿ ಪೋಸ್ಟ್​​ ಆಗಿರುವ ಈ ದೃಶ್ಯದಲ್ಲಿ ಮಗುವು ತನ್ನ ಸುತ್ತಲ ಜಗತ್ತಿನ ನಿಜವಾದ ರಂಗನ್ನು ನೋಡಿ ಆನಂದಿಸುವ ಪರಿ ಯಾರನ್ನಾದರೂ ಭಾವುಕವಾಗಿಸುತ್ತದೆ.
"At 2 years old she could barley see as she's extremely farsighted–this is her first time seeing things clearly in her life!" her elated parents tell Good News Movement.pic.twitter.com/hDeRXKw0IE
— GoodNewsMovement (@GoodNewsMVT)November 11, 2021

“ಎರಡು ವರ್ಷ ತುಂಬಿದಾಗಿನಿಂದ ಅವಳಿಗೆ ದೂರದೃಷ್ಟಿ ಬಂದ ಕಾರಣದಿಂದ ಸ್ಪಷ್ಟವಾಗಿ ಏನೂ ಕಾಣುತ್ತಿರಲಿಲ್ಲ. ಇದೀಗ ಮೊದಲ ಬಾರಿ ಅವಳು ಸ್ಪಷ್ಟವಾಗಿ ನೋಡಬಹುದಾಗಿದೆ. ಇದು ಅತ್ಯಮೂಲ್ಯವಾದ ಘಳಿಗೆ” ಎಂದು ಅವಳ ಪಾಲಕರು ಹೇಳಿಕೊಂಡಿದ್ದಾರೆ.(ಏಜೆನ್ಸೀಸ್)
ಕನ್ನಡಿಗರ ಕಣ್ಮಣಿ ಹೆಸರಲ್ಲಿ ಕಣ್ಣಿನ ಆಸ್ಪತ್ರೆ; ಈ ಜಿಲ್ಲೆಯ ರಾಯಭಾರಿಯಾಗಿದ್ದ ಪುನೀತ್​ಗೆ ವಿಶಿಷ್ಟ ನಮನ

ಹೃದಯದ ಆರೋಗ್ಯಕ್ಕಾಗಿ ಕುಳಿತಲ್ಲೇ ಮಾಡಬಹುದಾದ ಯೋಗ ಮುದ್ರೆಗಳು


ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:two × two =
Remember me
